
ಬೆಂಗಳೂರು (ಸೆ.20) :ಖಾಸಗಿ ಫೋಟೋ ಮತ್ತು ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪ್ರಿಯಕರನನ್ನು ಕೊಲೆ ಮಾಡಿದ್ದ ಪ್ರಿಯತಮೆ ಸೇರಿ ಆಕೆಯ ಇಬ್ಬರು ಸ್ನೇಹಿತರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನ್ಯೂ ಮೈಕೋ ಲೇಔಟ್ ನಿವಾಸಿ ಪ್ರತಿಪಾ (25), ಆಕೆಯ ಸ್ನೇಹಿತ ಸುಶೀಲ್(25) ಹಾಗೂ ಗೌತಮ್(27) ಬಂಧಿತರು. ಮತ್ತೊಬ್ಬ ಆರೋಪಿ ಸೂರ್ಯ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳು ಸೆ.10ರಂದು ನ್ಯೂ ಮೈಕೋ ಲೇಔಟ್‌ನಲ್ಲಿ ಡಾ.ವಿಕಾಸ್ (27) ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದರು. ಆದರೆ ಚಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ವಿಕಾಸ್ ಸೆ.18ರಂದು ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Asianet Suvarna FIR ಸುಂದ್ರಿಗೋಸ್ಕರ ಕಿತ್ತಾಟ, ಇಬ್ಬರಿಗೂ ಆ ಹುಡುಗಿ ಸಿಗದಿದ್ದರೂ ಬಿತ್ತು ಹೆಣ!
ಕೊಲೆಯಾದ ಡಾ.ವಿಕಾಸ್ ಮತ್ತು ಆರೋಪಿ ಪ್ರತಿಪಾ ಚೆನ್ನೈ ಮೂಲದವರು. ವಿಕಾಸ್ ವೈದ್ಯನಾಗಿದ್ದು, ಪ್ರತಿಪಾ ಆರ್ಕಿಟೆಕ್ಟ್ ಆಗಿದ್ದಾಳೆ. ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿ ಇಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ಕುಟುಂಬಕ್ಕೆ ತಮ್ಮ ಪ್ರೀತಿಯ ವಿಷಯ ತಿಳಿಸಿ ವಿವಾಹಕ್ಕೆ ಒಪ್ಪಿಸಿದ್ದರು. ಮುಂದಿನ ನವೆಂಬರ್‌ನಲ್ಲಿ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಚೆನ್ನೈನಲ್ಲೇ ವೈದ್ಯ ವೃತ್ತಿ ಮಾಡುತ್ತಿದ್ದ ವಿಕಾಸ್, ಉನ್ನತ ಶಿಕ್ಷಣ ಸಂಬಂಧ ಕಳೆದ ಆರು ತಿಂಗಳಿಂದ ನಗರದಲ್ಲಿ ಕೋಚಿಂಗ್ ಪಡೆಯುತ್ತಿದ್ದ. ಪ್ರತಿಪಾ ಬಿಟಿಎಂ ಲೇಔಟ್‌ನ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಹೀಗಾಗಿ ಕಳೆದ ಆರು ತಿಂಗಳಿಂದ ಇಬ್ಬರು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು.
ಈ ನಡುವೆ ಡಾ ವಿಕಾಸ್, ಪ್ರತಿಪಾಳೊಂದಿಗೆ ಖಾಸಗಿಯಾಗಿ ಕಳೆದಿದ್ದ ಕ್ಷಣಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ಅಂತೆಯೆ ಪ್ರತಿಪಾಳ ತಾಯಿಯ ಅಶ್ಲೀಲ ವಿಡಿಯೋ ಸೆರೆ ಹಿಡಿದಿದ್ದ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಖಾತೆ ತೆರೆದು ತನ್ನ ಪ್ರೇಯಸಿ ಹಾಗೂ ಆಕೆಯ ತಾಯಿಯ ಖಾಸಗಿ ವಿಡಿಯೋಗಳನ್ನು ಹರಿಬಿಟ್ಟಿದ್ದ. ಈ ವಿಚಾರವಾಗಿ ಪ್ರತಿಪಾ ಹಾಗೂ ಡಾ ವಿಕಾಸ್ ಕುಟುಂಬದ ನಡುವೆ ಗಲಾಟೆ ನಡೆದಿತ್ತು:
ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ
ಮಾತನಾಡಲು ಕರೆಸಿ ಮಾರಾಣಾಂತಿಕ ಹಲ್ಲೆ:
ಪ್ರಿಯಕರ ಡಾ ವಿಕಾಸ್ ಮಾಡಿದ ಮೋಸದಿಂದ ತುಂಬಾ ಬೇಸರಗೊಂಡಿದ್ದ ಪ್ರತಿಪಾ, ಸ್ನೇಹಿತರಾದ ಸುಶೀಲ್, ಗೌತಮ್ ಹಾಗೂ ಸೂರ್ಯನ ಬಳಿ ಡಾ ವಿಕಾಸ್ ತನ್ನ ಮರ್ಯಾದೆ ಕಳೆದಿರುವ ಬಗ್ಗೆ ನೊಂದು ಹೇಳಿಕೊಂಡಿದ್ದಳು. ಅದರಂತೆ ಆರೋಪಿ ಸುಶೀಲ್, ಸೆ.10ರಂದು ಡಾ ವಿಕಾಸ್‌ಗೆ ಕರೆ ಮಾಡಿ ನ್ಯೂ ಮೈಕೋ ಲೇಔಟ್‌ನ ತನ್ನ ಮನೆಗೆ ಬರುವಂತೆ ಕರೆದಿದ್ದ. ಡಾ ವಿಕಾಸ್ ಮನೆಗೆ ಬಂದಾಗ ಆರೋಪಿಗಳು ಮನಬಂದಂತೆ ಹೊಡೆದಿದ್ದರು. ಮನೆ ಸ್ವಚ್ಛಗೊಳಿಸಲು ಬಳಸುವ ಮಾಪ್, ನೀರಿನ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿರುವ ಬೇಗೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ