
ಹೈದರಾಬಾದ್, (ಸೆಪ್ಟೆಂಬರ್.19): ಅಕ್ರಮ ಸಂಬಂಧಗಳು ಒಂದು ರೀತಿಯಲ್ಲಿ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾರಿಗೆ ಯಾವಾಗ ಏನಾಗುತ್ತದೆಂದು ಊಹೆ ಮಾಡುವುದು ಅಸಾಧ್ಯ. ಅಕ್ರಮ ಸಂಬಂಧಕ್ಕೆ ಅದೆಷ್ಟೋ ಜೀವಗಳು ಬಲಿ ಉದಾಹರಣೆಗಳು ಸಹ ಇವೆ.
ಗಂಡು-ಹೆಣ್ಣು ಪರಸ್ಪರ ಒಪ್ಪಂದದ ಮೇರೆಗೆ ಮೇಲೆಯೇ ಈ ಅಕ್ರಮ ಸಂಬಂಧಗಳು ನಡೆಯುತ್ತಿರುತ್ತವೆ.ಅದರಂತೆ ಆಂಧ್ರ ಪ್ರದೇಶದಲ್ಲೊಂದು ಪರಸ್ಪರ ಒಪ್ಪಂದದ ಮೇರೆಗೆ ಇದ್ದ ವಿವಾಹೇತರ ಸಂಬಂಧಕ್ಕೆ ಬ್ಲೇಡ್ ಬಿದ್ದಿದೆ.
ಹೌದು.. ವಿವಾಹೇತರ ಸಂಬಂಧ ಹೊಂದಿದ್ದ 60 ವರ್ಷದ ವೃದ್ಧನ ಮರ್ಮಾಂಗವನ್ನು ಮಹಿಳೆಯೊಬ್ಬರು ಕತ್ತರಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಆಂಟಿ ಹಿಂದೆ ಬಿದ್ದು ಜೀವವನ್ನೇ ಕಳೆದುಕೊಂಡ ಬಡಪಾಯಿ ಯುವಕನ ಕಥೆ
ಕೊಂಡಪಿ ಮಂಡಲದಲ್ಲಿ 60 ವರ್ಷದ ವ್ಯಕ್ತಿಯೊಬ್ಬ 55 ವರ್ಷದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಅದರಂತೆ, ಈತ ತನ್ನ ಗೆಳತಿಯ ಮನೆಗೆ ಹೋದಾಗ ಆಕೆ ಬ್ಲೇಡ್‌ನಿಂದ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇನ್ನು, ಹತ್ತು ವರ್ಷಗಳಿಂದ ಇಬ್ಬರ ನಡುವೆ ವಿವಾಹೇತರ ಸಂಬಂಧವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೇ ಸುಮಾರು 10 ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಈ ಜೋಡಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಂದರಂತೆ ಈ ಬಾರಿಯೂ ಸಹ ಮನೆಗೆ ಬಂದ ವೇಲೆ ಇಬ್ಬರ ನಡುವೆ ಮತ್ತೆ ಕಿರಿಕ್ ಆಗಿದೆ. ಇದರಿಂದ ಕೆರಳಿದ ಮಹಿಳೆ ಮರ್ಮಾಂಗಕ್ಕೆ ಬ್ಲೇಡ್ ಹಾಕಿದ್ದಾಳೆ. ಇನ್ನು ಈತ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಆದರೆ, ಆ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಯ್ತು? ಎನ್ನುವ ನಿಖರ ಮಾಹಿತಿ ತಿಳಿದುಬಂದಿಲ್ಲ. ಇನ್ನು ಈ ಬಗ್ಗೆ ಪೊಲೀಸರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ವೈದ್ಯರು ಪ್ರತ್ರಿಯಿಸಿದ್ದು, ಸಧ್ಯ ವ್ಯಕ್ತಿಯ ಮರ್ಮಾಂಗಕ್ಕೆ ಹೊಲಿಗೆ ಹಾಕಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ಯಾವುದೇ ಪ್ರಾಣಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಂಡೇಪಿ ಸಬ್‌ಇನ್ಸ್‌ಪೆಕ್ಟರ್ ಕೆ.ರಾಮಕೃಷ್ಣ ಮಾತನಾಡಿ, ಗಾಯವು ಚಿಕ್ಕದಾಗಿದ್ದು, ವ್ಯಕ್ತಿಗೆ ಸ್ವಂತ ಕುಟುಂಬವಿಲ್ಲ. ಆದ್ದರಿಂದ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಪ್ರಕರಣವನ್ನು ಕೈಬಿಡುವಂತೆ ಮನವಿ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಹತ್ತು ವರ್ಷದ ವಿವಾಹೇತರ ಸಂಬಂಧ ಇದೀಗ ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದಿದ್ದಂತೂ ಸತ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ