
ರಾಜ್ ಕೋಟ್(ಮೇ. 01) ಐಪಿಎಎಲ್ ನಲ್ಲಿ(IPL) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಪರ ಮಿಂಚುತ್ತ ಭಾರತದ ಪರವಾಗಿಯೂ ಸಾಕಷ್ಟು ರನ್ ಗಳುಸುವ ಸರ್ ರವೀಂದ್ರಾ ಜಡೇಜಾ (Ravindra Jadeja) ತ್ನಿಗೆ ಇದೀಗ ಆತಂಕ ಶುರುವಾಗಿದೆ.
ಪೊಲೀಸರ (Police) ಮೇಲೆ ದಬ್ಬಾಳಿಕೆ ನಡೆಸಿದ್ದ ಪ್ರಕರಣದಲ್ಲಿ ರವೀಂದ್ರಾ ಜಡೇಜಾ ಪತ್ನಿ ವಿರುದ್ಧ ಸಮನ್ಸ್ ಜಾರಿಯಾಗಿದೆ. ಜಡೇಜಾ ಪತ್ನಿ ಮತ್ತು ತಾಯಿ ವಿರುದ್ಧ ಸಮನ್ಸ್ ಜಾರಿಯಾಗಿದೆ.
2018ರ ಪ್ರಕರಣದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದದ ಸಂದರ್ಭದಲ್ಲಿ ರವೀಂದ್ರಾ ಜಡೇಜಾ ಪತ್ನಿ ಮತ್ತು ತಾಯಿ ಪೊಲೀಸರಿಗೆ ಸಹಕಾರ ನೀಡಿರಲಿಲ್ಲ. ರಾಜ್ ಕೋಟ್ ಪೊಲೀಸರು ನೋಟಿಸ್ ನೀಡದ್ದರೂ ಉತ್ತರ ನೀಡಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ. ಇದೇ ಕಾರಣಕ್ಕೆ ಸಮನ್ಸ್ ಜಾರಿ ಮಾಡಲಾಗಿದೆ.
ರವೀಂದ್ರ ಜಡೇಜಾ ಅವರಿಗೆ ಸೇರಿದ್ದ ವಾಹನ ಬೈಕ್ ಗೆ ಟಚ್ ಆಗಿತ್ತು. ಅಲ್ಲಿರುವ ಸಾಕ್ಷಿ ಹೇಳಿಕೆ ನೀಡಿದ್ದಂತೆ ವಾಹನದಲ್ಲಿದ್ದವರು ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿದ್ದರು.
ಪಾನಾಮಾದಲ್ಲಿ ಸಿಕ್ಕಿದ್ದ ಬಚ್ಚನ್ ಕುಟುಂಬ
ಜಾಮ್‌ನಗರದ ವಿದ್ಯಾಸಾಗರ್ ಸಂಸ್ಥೆಯ ವಿದ್ಯಾರ್ಥಿನಿ ಪ್ರೀತಿ ಶರ್ಮಾ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದರು. ಆದರೆ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ.
ಜಡೇಜಾ ಅವರೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಇದೀಗ ಪೊಲೀಸರ ಜತೆ ವಾಗ್ವಾದ ಮಾಡಿದ ಪ್ರಕರಣಕಕ್ಕೆ ಸಂಬಂಧಿಸಿ ಸಮನ್ಸ್ ಜಾರಿ ಮಾಡಲಾಗಿದೆ.
ವಿವಾದ ಎಬ್ಬಿಸದ್ದ ಜಡ್ಡು ಮದುವೆ: 2016 ರಲ್ಲಿ ರವೀಂದ್ರ ಜಡೇಜಾ ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದರು. ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ವಿವಾಹ ಅದ್ಧೂರಿಯಾಗಿ ನಡೆಯುತ್ತಿದ್ದ ಸಂದರ್ಭ ಸಂಬಂಧಿಕನೊರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದು ಆತಂಕ ತಂದಿತ್ತು.
ರಾಜ್ ಕೋಟ್ ನಲ್ಲಿ ರವೀಂದ್ರ ಜಡೇಜಾ ಬಹುಕಾಲದ ಗೆಳತಿ ರಿವಾ ಸೋಲಂಕಿರನ್ನು ಮದುವೆಯಾಗಿದ್ದ. ಜಡೇಜಾ ಕುದುರೆ ಮೇಲೇರಿ ಬರುತ್ತಿದ್ದ ವೇಳೆ ಸಂಬಂಧಿಕನೊಬ್ಬ ಜಡೇಜಾ ಕುಳಿತಿದ್ದ ಕುದುರೆ ಪಕ್ಕದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿದ್ದ.
ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್ ಬೀಸುತ್ತಲೇ ಇದ್ದಾರೆ. ಕಳೆದ ಐಪಿಎಲ್ ನಲ್ಲಿ ಆರ್ ಸಿಬಿಯ ಹರ್ಷಲ್ ಪಟೇಲ್ ರ ಒಂದೇ ಓವರ್ ನಲ್ಲಿ ಬರೋಬ್ಬರಿ 37 ರನ್ ಚಚ್ಚಿದ್ದರು. ಆಲ್ ರೌಂಡರ್ ಆಗಿ ಮಿಂಚುವ ಜಡೇಜಾ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ದಿಗ್ಗಜ ನಾಯಕ ಎಂಎಸ್ ಧೋನಿ ಗರಡಿಯಲ್ಲಿ ಪಳಗಿದ ಜಡೇಜಾ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
ಶಿಲ್ಪಾಗೆ ಸಂಕಟ: ಮಂಗಳೂರು ಹುಡುಗಿ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಒಂದಾದ ಮೇಲೊಂದು ಸಮಸ್ಯೆ ಮತ್ತು ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡಾಗಿಂದಲೂ ಈ ರೀತಿ ಆಗುತ್ತಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿರುವ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಪತಿ ರಾಜ್ ಕುಂದ್ರಾ ಬಿಡುಗಡೆಯಾಆದರೂ ಕಾನೂನು ಹೋರಾಟಗಳು ಮುಗಿದಿಲ್ಲ.
ಅಶ್ಲೀಲ ವಿಡಿಯೋ ದಂಧೆ ವಿಚಾರದಲ್ಲಿ ಪತಿ ರಾಜ್ ಕುಂದ್ರಾ (Raj Kundra) ಹೆಸರು ಕೇಳಿ ಬಂದಾಗಲೂ ಶೆಟ್ಟಿ ಸಹೋದರಿಯರೂ ಆರೋಪಗಳನ್ನು ಎದುರಿಸುತ್ತಲೇ ಇದ್ದಾರೆ.
ಐಶ್ವರ್ಯಾಗೂ ತಪ್ಪದ ಕಾಟ: ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಸಂಕಷ್ಟ ಎದುರಾಗಿತ್ತು. . ಸದ್ಯ ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಇಡಿ ಸಮನ್ಸ್ ಕಳುಹಿಸಿ ದೆಹಲಿಗೆ ಬರುವಂತೆ ಕೇಳಿಕೊಂಡಿದ್ದು ಪ್ರಶ್ನೆ ಕೇಳಿ ಮಾಹಿತಿ ಕಲೆ ಹಾಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ