Chikkamagaluru Crime: ಮಗಳ ಮೇಲೆ ಮಲ ತಂದೆಯಿಂದಲೇ ರೇಪ್‌: ವಿಕೃತಕಾಮಿ ಅರೆಸ್ಟ್‌

By Kannadaprabha News  |  First Published Mar 1, 2022, 9:57 AM IST

*   ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ನಡೆದ ಘಟನೆ
*  5 ತಿಂಗಳಿನಿಂದ 7 ಬಾರಿ ಮಗಳ ಮೇಲೆ ಅತ್ಯಾಚಾರ ನಡೆಸಿದ ತಂದೆ
*  ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ
 


ಬಾಳೆಹೊನ್ನೂರು(ಮಾ.01): ಅಪ್ರಾಪ್ತೆ ಮೇಲೆ ಆಕೆಯ ಮಲ ತಂದೆಯೇ ಅತ್ಯಾಚಾರ ನಡೆಸಿದ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ನರಸಿಂಹರಾಜಪುರ(Narasimharajapura) ತಾಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.  ಗ್ರಾಮದ ಕೃಷ್ಣ (34) ಆರೋಪಿ(Accused). ಈತನ ಪತ್ನಿ ಕೂಲಿ ಕೆಲಸಕ್ಕೆ ಹೋದ ವೇಳೆ ಮಗಳ ಮೇಲೆ ಅತ್ಯಾಚಾರ(Rape) ನಡೆಸಿದ್ದಾನೆ. 5 ತಿಂಗಳಿನಿಂದ 7 ಬಾರಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಕುರಿತು ಯಾರಿಗೂ ಹೇಳದಂತೆ ಆರೋಪಿ ಕೃಷ್ಣ ಬಾಲಕಿಗೆ(Minor Girl) ಬೆದರಿಕೆಯೊಡ್ಡಿದ್ದ.

ಇತ್ತೀಚೆಗೆ ತಾಯಿಗೆ ವಿಚಾರ ಗೊತ್ತಾದ ಬಳಿಕ ಆತನನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆಯೂ ಆತ ಹಲ್ಲೆ(Assault) ನಡೆಸಿದ್ದಾನೆ. ಪೊಲೀಸರು(Police) ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.

Tap to resize

Latest Videos

Rape and Murder: ಕುರಿಗಾಯಿ ಮಹಿಳೆಯ ಮೇಲೆ ಕಾಮುಕರ ಅಟ್ಟಹಾಸ

ಮಗಳ ಮೇಲೆಯೇ ರೇಪ್‌: ಪಾಪಿಗೆ 10 ವರ್ಷ ಜೈಲು

ಬೆಂಗಳೂರು(Bengaluru):  ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿ ತಂದೆಗೆ ಅಧೀನ ನ್ಯಾಯಾಲಯ(Court) ವಿಧಿಸಿದ್ದ 10 ವರ್ಷಗಳ ಜೈಲು(Jail) ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ. ಶಿಕ್ಷೆ ರದ್ದು ಕೋರಿ ಆರೋಪಿ ತಂದೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ.ಎಸ್‌. ಮುದಗಲ್‌ ಅವರ ಪೀಠ ಈ ಆದೇಶ ಮಾಡಿದೆ.

ಆರೋಪಿ ತಂದೆ 2014ರ ಸೆ.27ರ ರಾತ್ರಿ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಯ ಚಿಕ್ಕಮ್ಮ ನೀಡಿದ ದೂರು ಆಧರಿಸಿ ಬೆಂಗಳೂರಿನ ಎಚ್‌ಎಎಲ್‌ ಠಾಣಾ ಪೊಲೀಸರು ಎಫ್‌ಐಆರ್‌(FIR) ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರು. ದಂಡ ವಿಧಿಸಿತ್ತು.

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಆರೋಪಿ ತಂದೆ, ದೂರು ದಾಖಲಿಸಲು ಎರಡು ದಿನಗಳ ವಿಳಂಬ ಮಾಡಲಾಗಿದೆ. ಇದು ಅಸಾಮಾನ್ಯ ವಿಳಂಬವಾಗಿದೆ. ಮ್ಯಾಜಿಸ್ಪ್ರೇಟ್‌ ಎದುರು ಸಂತ್ರಸ್ತೆ ನೀಡಿರುವ ಹೇಳಿಕೆಯಲ್ಲಿ ವಿರೋಧಾಭಾಸಗಳಿವೆ. ಘಟನೆ ವೇಳೆ ಮನೆಯಲ್ಲಿದ್ದ ತಾಯಿ ಹಾಗೂ ಅಜ್ಜಿಯನ್ನು ತನಿಖಾಧಿಕಾರಿಯು ವಿಚಾರಣೆಗೆ ಒಳಪಡಿಸಿಲ್ಲ. ಆದ್ದರಿಂದ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.

ಈ ಮೇಲ್ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್‌, ಸಂತ್ರಸ್ತ ಬಾಲಕಿಯ ತಾಯಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದರು. ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ ಒಂಬತ್ತನೇ ದಿನಕ್ಕೆ ನಿಧನರಾಗಿದ್ದಾರೆ. ಅಜ್ಜಿಯೂ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ, ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ದೂರು ದಾಖಲಿಸಿದ್ದಾರೆ. ಇನ್ನು ದೂರು ದಾಖಲಿಸುವಲ್ಲಿ ಹೆಚ್ಚೇನೂ ವಿಳಂಬವಾಗಿಲ್ಲ. ಸಂತ್ರಸ್ತೆ ತನ್ನ ತಂದೆಯ ಕೃತ್ಯದ ಬಗ್ಗೆ ಹೇಳಿದ್ದಾಳೆ. ಆಕೆಯ ಹೇಳಿಕೆಯನ್ನು ಚಿಕ್ಕಮ್ಮ, ಚಿಕ್ಕಪ್ಪ, ವೈದ್ಯರು ಮತ್ತು ವೈದ್ಯಕೀಯ ಪುರಾವೆಗಳು ದೃಢಪಡಿಸಿವೆ. ಆದ್ದರಿಂದ ಆರೋಪಿಯ ಕೋರಿಕೆ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟು ಜೈಲು ಶಿಕ್ಷೆ ಕಾಯಂಗೊಳಿಸಿತು.

9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಬಂಗಾರಪೇಟೆ: ಮನೆ ಬಿಟ್ಟು ಬಂದಿದ್ದ ಬಾಲಕಿಯನ್ನು(Minor Girl) ಪುಸಲಾಯಿಸಿದ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ(Gang Rape) ಎಸಗಿರುವ ಘಟನೆ ಕಾಮಸಮುದ್ರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಫೆ.19  ರಂದು ನಡೆದಿತ್ತು. 

Violence Against Women: ದಿಲ್ಲಿಯಲ್ಲಿ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ

ತಾಲೂಕಿನ ಹುದುಕುಳ ಗ್ರಾಮದ 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ಜನ್ಮದಿನವಾದ ಶುಕ್ರವಾರ ಹೊಸ ಬಟ್ಟೆ ಹಾಗೂ ಚಾಕ್‌ಲೇಟ್ಸ್‌ ಕೊಡಿಸಿಲ್ಲವೆಂದು ಪೋಷಕರ ವಿರುದ್ಧ ಮುನಿಸಿಕೊಂಡು ಶಾಲೆಗೂ ಹೋಗದೆ, ಮನೆಯವರಿಗೂ ತಿಳಿಸದೆ ಬಸ್‌ ಹತ್ತಿ ಬಂಗಾರಪೇಟೆಗೆ ಬಂದಿದ್ದಳು.

ಬಸ್‌ ನಿಲ್ದಾಣದಲ್ಲಿ ಒಬ್ಬಳೇ ಕುತಿಳಿದ್ದ ವಿದ್ಯಾರ್ಥಿನಿಯನ್ನು ಗಮನಿಸಿದ ನಾಲ್ವರು ದುಷ್ಕರ್ಮಿಗಳು(Miscreants) ಆಕೆಯನ್ನು ಪುಸಲಾಯಿಸಿ ಪಾರ್ಕ್‌ಗೆ ಕರೆದುಕೊಂಡು ಹೋಗಿ ಸಂಜೆವರೆಗೂ ಕಾಲ ಕಳೆದಿದ್ದಾರೆ. ಬಳಿಕ ಪಟ್ಟಣದಿಂದ ಆಂಧ್ರಗಡಿಗೆ ಅಂಟಿಕೊಂಡಿರುವ ತನಿಮಡಗು ಗ್ರಾಮಕ್ಕೆ ಖಾಸಗಿ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಗಡಿಯಲ್ಲಿರುವ ಬಾರ್‌ನಲ್ಲಿ ನಾಲ್ವರು ಆರೋಪಗಳು ಕುಡಿದು ಬಳಿಕ ಸುತ್ತಮುತ್ತಲಿರುವ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಈ ವೇಳೆ ಬಾಲಕಿಯ ಕಿರುಚಾಟ ಕೇಳಿದ ದಾರಿಹೋಕರು ಕೂಡಲೇ ಪೊಲೀಸರಿಗೆ(Police) ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
 

click me!