Fake Death Certificate: 5 ಕೋಟಿ ವಿಮೆ ನುಂಗಲು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ..!

By Kannadaprabha News  |  First Published Jan 22, 2022, 11:08 AM IST

*   ಭಟ್ಕಳ ಜಾಲಿ ಪ.ಪಂ.ನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣ ಬೆಳಕಿಗೆ
*  ಪೊಲೀಸರಿಂದ ಜಾಲಿ ಪ.ಪಂ. ಕಂಪ್ಯೂಟರ್‌, ದಾಖಲೆಗಳ ವಶ
*  ಮರಣ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದ ಮೀನಾಕ್ಷಿ  
 


ಭಟ್ಕಳ(ಜ.22):  ಬದುಕಿರುವ ವ್ಯಕ್ತಿ ಮೃತಪಟ್ಟಿದ್ದಾನೆಂದು ನಕಲಿ ಮರಣ ಪ್ರಮಾಣ ಪತ್ರ(Fake Death Certificate) ಸೃಷ್ಟಿಸಿ ಆತನ ಹೆಸರಿಗಿರುವ 5 ಕೋಟಿ ಜೀವವಿಮೆ(Life Insurance) ಲಪಟಾಯಿಸಲು ಹೋಗಿ ಸಿಕ್ಕಿಬಿದ್ದ ಪ್ರಕರಣ ಭಟ್ಕಳದ(Bhatkal) ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಬೆಳಕಿಗೆ ಬಂದಿದೆ.

ಹಾಸನದ ಎಚ್‌.ಡಿ. ದೇವೇಗೌಡ ನಗರ ಎನ್ನುವ ವಿಳಾಸ ಹೊಂದಿರುವ ಮಹಿಳೆ ಮೀನಾಕ್ಷಿ ಡಿ.ಎಚ್‌. ಎನ್ನುವವರು 2021ರ ಆ. 4ರಂದು ತನ್ನ ಮಗ ಹರ್ಷವರ್ಧನ್‌ ಎನ್ನುವವರು ಮೃತಪಟ್ಟಿದ್ದು(Death), ಮರಣ ಪ್ರಮಾಣ ಪತ್ರ ನೀಡುವಂತೆ ಜಾಲಿ ಪಪಂ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದರು.

Latest Videos

undefined

Gold Fraud: ನಕಲಿ ಚಿನ್ನದಂಗಡಿ ತೆರೆದು ಅಕ್ಕಸಾಲಿಗನಿಗೆ ಮೋಸ..!

ಈ ಮಹಿಳೆ(Woman) ಜಾಲಿಯ ಜಂಗನಗದ್ದೆಯಲ್ಲಿನ ವಿಳಾಸ ನೀಡಿದ್ದು, ಹರ್ಷವರ್ಧನ್‌ ಅವರ ನಕಲಿ ಆಧಾರ್‌ ಕಾರ್ಡ್‌(Fake Aadhaar Card) ಕೂಡ ಹಾಜರುಪಡಿಸಿದ್ದಳು. ಅರ್ಜಿ ಸ್ವೀಕರಿಸಿದ್ದ ಅಧಿಕಾರಿಗಳು ಪಪಂ ಜನನ ಮತ್ತು ಮರಣ ವಿಭಾಗದಿಂದ 2021ರ ಸೆ. 13ರಂದು ಹರ್ಷವರ್ಧನ್‌ ಎನ್ನುವ ವ್ಯಕ್ತಿಯ ಮರಣ ಪ್ರಮಾಣ ಪತ್ರ ನೀಡಿದ್ದಾರೆ.

ವಿಮಾ ಕಂಪೆನಿಯವರು(Insurance Company) ಪರಿಶೀಲಿಸಲಾಗಿ ಅದು ನಕಲಿ ಎನಿಸಿದೆ. ಹರ್ಷವರ್ಧನ್‌ ಹಾಸನದ ಒಬ್ಬ ಬ್ಯುಸಿನೆಸ್‌ಮೆನ್‌ ಆಗಿದ್ದು, ಅವರು ತಮ್ಮ ಹೆಸರಿನಲ್ಲಿ 5 ಕೋಟಿ ವಿಮಾ ಮಾಡಿಸಿದ್ದರು. ಆ ಹಣ ಲಪಟಾಯಿಸುವ ಉದ್ದೇಶದಿಂದಲೇ ಜಾಲಿ ಪಪಂ ಸಿಬ್ಬಂದಿ ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಜಂಗನಗದ್ದೆಯ ವಿಳಾಸದ ದಾಖಲೆಗಳನ್ನು ಮಹಿಳೆ ನೀಡಿದ ನಂತರ ಜಾಲಿ ಪಟ್ಟಣ ಪಂಚಾಯತ್‌ ಆರೋಗ್ಯ ವಿಭಾಗದ ವತಿಯಿಂದ ಸ್ಥಳ ಪಂಚನಾಮೆ ಮಾಡಿ ಖಚಿತಪಡಿಸಿಕೊಂಡು ಮರಣ ದಾಖಲೆಯನ್ನು ನೀಡಲಾಗಿದ್ದು ಎಲ್ಲವೂ ನಕಲಿ ಎನ್ನುವುದು ಪೊಲೀಸರು(Police) ದಾಖಲೆ ಪರಿಶೀಲಿಸಿದ ಸಂದರ್ಭದಲ್ಲಿ ಪತ್ತೆಯಾಗಿದೆ. ಪಪಂ ಆರೋಗ್ಯ ವಿಭಾಗದ ಕೆಲ ಸಿಬ್ಬಂದಿ ಕೈವಾಡವಿರುವುದು ಕೂಡಾ ಬೆಳಕಿಗೆ ಬಂದಿದ್ದು ಇನ್ನಷ್ಟೇ ಸಂಪೂರ್ಣ ತನಿಖೆಯ(Investigation) ಬಳಿಕ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ತನ್ನ ಮಗ ಮೃತಪಟ್ಟಿದ್ದಾನೆಂದು ನಕಲಿ ಆಧಾರ ಕಾರ್ಡ್‌, ದಾಖಲೆ ನೀಡಿದ ಮಹಿಳೆ ಯಾರು? ಆಕೆ ದೂರದ ಹಾಸನದಿಂದ(Hassan) ಭಟ್ಕಳದ ಜಾಲಿ ಪ.ಪಂ.ಗೆ ಬಂದು ನಕಲಿ ಮರಣ ಪ್ರಮಾಣ ಪತ್ರ ಪಡೆದಿರುವುದರ ಹಿಂದೆ ಯಾರ ಕೈವಾಡ ಇದೆ. ಈಕೆ ನಿಜವಾಗಿಯೂ ಹರ್ಷವರ್ಧನ್‌ ಅವರ ತಾಯಿಯೇ? ಎನ್ನುವುದು ಸೇರಿದಂತೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

ಮರಣ ಪ್ರಮಾಣ ಪತ್ರ ನಕಲಿ ಎಂದು ಗೊತ್ತಾದ ತಕ್ಷಣವೇ ಪಪಂ ಹಿರಿಯ ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ ಅವರು ನಗರ ಠಾಣೆಯಲ್ಲಿ ದೂರು(Complaint) ದಾಖಲಿಸಿದ್ದು ದೂರನ್ನು ಆಧರಿಸಿ ನಗರ ಠಾಣೆಯ ಇನ್ಸಪೆಕ್ಟರ್‌ ದಿವಾಕರ ಪಿ.ಎಂ. ಅವರು ಸಿಬ್ಬಂದಿಗಳೊಂದಿಗೆ ಪಪಂಗೆ ತೆರಳಿ ಅಲ್ಲಿನ ಆರೋಗ್ಯ ವಿಭಾಗದ ಕಂಪ್ಯೂಟರ್‌, ಕಡತಗಳನ್ನು ವಶಕ್ಕೆ ಪಡೆದು ತನಿಖೆ ಆಂಭಿಸಿದ್ದಾರೆ.

Fraud Case: ಸರ್ಕಾರಿ ಸಂಬಳ ಕೊಡಿಸುವುದಾಗಿ ನೌಕರರಿಗೆ 78 ಲಕ್ಷ ವಂಚನೆ

ಗ್ರಾಮಲೆಕ್ಕಿಗ ಹುದ್ದೆ ಕೂಡಿಸುವುದಾಗಿ ವಂಚನೆ, ಆರೋಪಿ ಬಂಧನ

ಶಿರಸಿ(Sirsi): ಗ್ರಾಮ ಲೆಕ್ಕಿಗ ಹುದ್ದೆ ಕೊಡಿಸುವುದಾಗಿ ನಂಬಿಸಿ 1.36 ಲಕ್ಷ ವ್ಯಕ್ತಿಯೋರ್ವನಿಂದ ಪಡೆದಿದ್ದ ಆರೋಪಿಯನ್ನು ಬನವಾಸಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ(Arrest).

ಕುಪಗಡ್ಡೆಯ ಶರೀಫ್‌ ಫಕ್ರುದ್ದೀನ್‌ ಹಾದಿಮನಿ, ಬಿ.ವಿ. ಹುಲಗೇಶಿ ಹಾಗೂ ರವೀಶ ಹೆಗಡೆ ಎಂಬವರು ಆರೋಪಿತರಾಗಿದ್ದಾರೆ. ನೌಕರಿ ಕೊಡಿಸುವ ಪೂರ್ವದಲ್ಲಿ 3.25 ಲಕ್ಷ, ಆ ಬಳಿಕ 3.25 ಲಕ್ಷ ನೀಡಬೇಕು ಎಂದು ಇವರು ಆಗ್ರಹಿಸಿದ್ದರು ಎನ್ನಲಾಗಿದೆ. ಈ ಪೈಕಿ ಶರೀಫ್‌ ಫೋನ್‌ ಪೇ ಮೂಲಕ ಹಾಗೂ ನಗದು ಹಣವನ್ನು ಪಡೆದುಕೊಂಡಿದ್ದರು.

ಡಿವೈಎಸ್‌ ಪಿ ರವಿ ನಾಯ್ಕ , ಸಿಪಿಐ ರಾಮಚಂದ್ರ ನಾಯಕ ಹಾಗೂ ಬನವಾಸಿ ಪಿಎಸ್‌ಐ ಹಣಮಂತ ಬಿರಾದಾರ ನೇತೃತ್ವದ ತಂಡ ಆರೋಪಿತರ ಪೈಕಿ ಶರೀಫ್‌ ಹಾದಿಮನಿ ಅವರನ್ನು ಬಂಧಿಸಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!