ಎತ್ತಿನ ಕಳ್ಳನಿಗೆ ಹಿಡಿದು ಗಿಡಕ್ಕೆ ಅರೆಬೆತ್ತಲೆಯಲ್ಲಿಯೇ ಕಟ್ಟಿಹಾಕಿ ಥಳಿಸಿದ ಘಟನೆ ತಾಲೂಕಿನ ಜಂಬಗಾ(ಬಿ) ಗ್ರಾಮದಲ್ಲಿ ವರದಿಯಾಗಿದೆ. ಅದೇ ಗ್ರಾಮದ ಮಂಜುನಾಥ್ ಬೆಳ್ಳಿಕರ್ ಎಂಬಾತನಿ ಎತ್ತಿನ ಕಳ್ಳತನದ ಆರೋಪ ಹೊರಿಸಿ ಥಳಿಸಲಾಗಿದೆ.
ಕಲಬುರಗಿ (ಜು.20) ಎತ್ತಿನ ಕಳ್ಳನಿಗೆ ಹಿಡಿದು ಗಿಡಕ್ಕೆ ಅರೆಬೆತ್ತಲೆಯಲ್ಲಿಯೇ ಕಟ್ಟಿಹಾಕಿ ಥಳಿಸಿದ ಘಟನೆ ತಾಲೂಕಿನ ಜಂಬಗಾ(ಬಿ) ಗ್ರಾಮದಲ್ಲಿ ವರದಿಯಾಗಿದೆ. ಅದೇ ಗ್ರಾಮದ ಮಂಜುನಾಥ್ ಬೆಳ್ಳಿಕರ್ ಎಂಬಾತನಿ ಎತ್ತಿನ ಕಳ್ಳತನದ ಆರೋಪ ಹೊರಿಸಿ ಥಳಿಸಲಾಗಿದೆ.
ಕಳೆದ ತಡರಾತ್ರಿ ಜಮೀನಿನಲ್ಲಿ ಕಟ್ಟಿದ್ದ ಮಲ್ಲಣ್ಣ ದೇಗಾಂವ್ ಎಂಬುವವರಿಗೆ ಸೇರಿದ ಎತ್ತನ್ನು ಮಂಜುನಾಥ್ ಬೆಳ್ಳಿಕರ್ ಕದ್ದು, ಪಕ್ಕದ ಔರಾದ್ ಗ್ರಾಮದ ರೈತನಿಗೆ ಮಾರುವುದಕ್ಕೆ ತೆರಳಿದ್ದ. ಆಗ ಆ ಗ್ರಾಮದ ರೈತರು ಯಾವ ಗ್ರಾಮದ ಎತ್ತು ಎಂದು ವಿಚಾರಿಸಿದಾಗ ಜಂಬಗಾ(ಬಿ) ಗ್ರಾಮದ ಎತ್ತು ಎಂದು ಕಳ್ಳ ಹೇಳಿದ ಬಳಿಕ ಔರಾದ್ ಗ್ರಾಮದ ರೈತರು ಜಂಬಗಾ (ಬಿ) ಗ್ರಾಮಸ್ಥರಿಗೆ ಸಂಪರ್ಕಿಸಿದಾಗ ವಿಷಯ ತಿಳಿದು ಜಂಬಗಾ ಗ್ರಾಮಸ್ಥರು ಆತನನ್ನು ಹಿಡಿದ ಗ್ರಾಮಸ್ಥರು ಗ್ರಾಮದ ಬೇವಿನ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
undefined
ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ; ಬೋಗಿ ಗಾಜು ಪುಡಿಪುಡಿ!
ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಇಬ್ಬರ ಬಂಧನ
ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣ ಪ್ರದೇಶದಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದ ಇಬ್ಬರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಆಳಂದ ತಾಲೂಕಿನ ಕಡಗಂಚಿಯ ಶಾಂತಪ್ಪ ಆಲೂರ (24) ಮತ್ತು ಫಿಲ್ಟರ್‌ಬೆಡ್ ಆಶ್ರಯ ಕಾಲೋನಿಯ ದೀಪಕ್ ಭೂರ್ತೆನರ್ವ (24) ಎಂಬುವವರನ್ನು ಬಂಧಿಸಿ ಒಂದು ಹರಿತವಾದ ಚಾಕು ಮತ್ತು ಕೈಗೆ ಹಾಕಿಕೊಳ್ಳುವ ಪಂಚ್ ಜಪ್ತಿ ಮಾಡಿದ್ದಾರೆ. ಅಶೋಕನಗರ ಪಿಎಸ…ಐ ಶಿವಪ್ಪ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಶಿವಲಿಂಗ, ನೀಲಕಂಠರಾಯ ಪಾಟೀಲ ಅವರು ಗಸ್ತಿನಲ್ಲಿದ್ದಾಗ ಕೇಂದ್ರ ಬಸ್ ನಿಲ್ದಾಣ ಪ್ರದೇಶದಲ್ಲಿ ಶಾಂತಪ್ಪ ಆಲೂರ ಮತ್ತು ದೀಪಕ್ ಭೂರ್ತೆನರ್ವ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತಿದ್ದುದ್ದನ್ನು ಗಮನಿಸಿ ಬಂಧಿಸಿದ್ದಾರೆ. ಬಂಧಿತರಲ್ಲಿ ಶಾಂತಪ್ಪ ಆಲೂರ, ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ರೌಡಿಶೀರ್ಟ ಆಗಿದ್ದಾನೆ ಎಂದು ತಿಳಿದುಬಂದಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳಭಟ್ಟಿಸಾರಾಯಿ ಮಾರಾಟ: ಓರ್ವನ ಬಂಧನ
ಕಲಬುರಗಿ: ಇಲ್ಲಿನ ಭರತನಗರ ತಾಂಡಾದಲ್ಲಿ ಅನಧಿಕೃತವಾಗಿ ಕಳ್ಳಭಟ್ಟಿಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ. ಭರತನಗರ ತಾಂಡಾದಲ್ಲಿ ಅನಧಿಕೃತವಾಗಿ ಕಳ್ಳಭಟ್ಟಿಸಾರಾಯಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಬ್ರಹ್ಮಪುರ ಪಿಎಸ್‌ಐ ಸಚೀನ್ ಚಲವಾದಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಚಂದ್ರಕಾಂತ ಚವ್ಹಾಣ್ ಎಂಬಾತನನ್ನು ಬಂಧಿಸಿ 400 ರು. ಬೆಲೆಯ 2 ಲೀಟರ್ ಕಳ್ಳಭಟ್ಟಿಸಾರಾಯಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ತಂದೆಗೆ ಚಾಕುವಿನಿಂದ ತಿವಿದ ಮಗ
ಮಚ್ಚಿನಿಂದ ಹೊಡೆದು ಸೋದರ ಸಂಬಂಧಿ ಕೊಲೆಗೆ ಯತ್ನ
ಕಲಬುರಗಿ: ವ್ಯಕ್ತಿಯೊಬ್ಬ ಸೋದರ ಸಂಬಂಧಿಯನ್ನು ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ ಕಮ್ಮನ (45) ಎಂಬುವವರಿಗೆ ಸೋದರ ಸಂಬಂಧಿ ಭೀಮಶಾ ಕಮ್ಮನ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾನೆ. ಮಲ್ಲಿಕಾರ್ಜುನ ಕಮ್ಮನ ಮತ್ತು ಭೀಮಶಾ ಕಮ್ಮನ ಅವರು ಸೋದರ ಸಂಬಂಧಿಗಳಾಗಿದ್ದು, ಮನೆಯ ಜಾಗದ ವಿಷಯದಲ್ಲಿ ಇಬ್ಬರ ನಡುವೆ ತಕರಾರಿತ್ತು. ಇದೇ ವಿಷಯಕ್ಕೆ ಆಗಾಗ ಕಿರಿಕಿರಿ ನಡೆದಿತ್ತು. ಮಲ್ಲಿಕಾರ್ಜುನ ಕಮ್ಮನ ಅವರು ಪತ್ನಿ ಜೊತೆಗೆ ನೀರು ತರಲು ಹೋದ ವೇಳೆ ಭೀಮಶಾ ಕಮ್ಮನ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಜಗಳ ತೆಗೆದು ತಲೆಗೆ ಮತ್ತು ಎಡಗಾಲಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.