
ನಂಜನಗೂಡು (ಜೂ.29) : ಹಸು ಕಳ್ಳತನ ಮಾಡಿದ್ದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಂಜನಗೂಡಿನ ಚುಂಚನಹಳ್ಳಿಯಲ್ಲಿ ನಡೆದಿದೆ.
ಚುಂಚನಹಳ್ಳಿ ಕೂಸಮ್ಮ ಎಂಬಾಕೆಗೆ ಸೇರಿದ್ದ ಹಸುಗಳು. ಮನೆಗೆ ಬರುವ ಸಂದರ್ಭದಲ್ಲಿ ಒಂದು ಹಸುವನ್ನು ಕದ್ದೊಯ್ಯಲಾಗಿತ್ತು. ಕಳ್ಳತನವಾಗಿ ನಾಲ್ಕು ದಿನ ಕಳೆದರೂ ಆರೋಪಿ ಪತ್ತೆಯಾಗಿರಲಿಲ್ಲ. ಗ್ರಾಮಸ್ಥರು ಸುತ್ತಮುತ್ತ ಕಳುವಾದ ಹಸುವಿಗೆ ಹುಡುಕಾಡಿದ್ದರು. ಈ ವೇಳೆ ಹಸುಗಳ್ಳನ ಪತ್ತೆ ಮಾಡಿದ ಗ್ರಾಮಸ್ಥರು.
ಕಳ್ಳನನ್ನು ಹಿಡಿದು ತದುಕಿದ್ದಾರೆ. ಬಳಿಕ ಆಣೆ ಕರೆ ಮಾಡಿ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳನನ್ನು ವಿಚಾರಿಸಿದಾಗ, ಭುಜಗಯ್ಯನಹುಂಡಿ ಗ್ರಾಮದ 40 ವರ್ಷದ ರೇವಣ್ಣ ಎಂದು ಗುರುತಿಸಲಾಗಿದೆ.
ಈತ ಚುಂಚನಹಳ್ಳಿ ಗ್ರಾಮದಲ್ಲಿಯೇ ಜಮೀನೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ: ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳ ರಕ್ಷಣೆ, ಆರೋಪಿಗಳು ವಶಕ್ಕೆ
ಅಕ್ರಮ ಗೋ ಸಾಗಣೆ: ವಾಹನ- ಗೋವು ವಶಕ್ಕೆ
ಬಾಳೆಹೊನ್ನೂರು: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನದÜ ಮೇಲೆ ಪೊಲೀಸರು ದಾಳಿ ನಡೆಸಿ ಗೋವುಗಳ ಸಮೇತ ವಾಹನವನ್ನು ಬಾಳೆಹೊನ್ನೂರು ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
12 ವರ್ಷಗಳ ಹಸು ಕಟಕರಿಗೆ ನೀಡಬೇಕೆಂದು ಕಾಯ್ದೆಯಲ್ಲಿಲ್ಲ: ಶಾಸಕ ಚನ್ನಬಸಪ್ಪ ಕಿಡಿ
ಖಾಂಡ್ಯ ಹೋಬಳಿ ಹ್ಯಾರಂಬಿ ಗ್ರಾಮ ಸಮೀಪ ಮಂಗಳವಾರ ರಾತ್ರಿ ಪಿಕ್‌ಅಪ್ ವಾಹನವೊಂದರಲ್ಲಿ 5 ಗೋವುಗಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಬಿಜೆಪಿ ಕಾರ್ಯ ಕರ್ತರಿಗೆ ಮಾಹಿತಿ ದೊರೆತ ತಕ್ಷಣ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನವನ್ನು ತಡೆದಿದ್ದಾರೆ. ಪೊಲೀಸರ ದಾಳಿಯನ್ನರಿತ ಅಕ್ರಮ ಗೋ ಸಾಗಣೆ ಮಾಡುತ್ತಿದ್ದವರು ಕೂಡಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ 5 ಗೋವುಗಳಿದ್ದು, ಒಂದು ಗೋವು ವಾಹನದಿಂದ ಹಾರಿ ತಪ್ಪಿಸಿಕೊಂಡಿದೆ. ಉಳಿದ ನಾಲ್ಕು ಗೋವುಗಳನ್ನು ವಶಕ್ಕೆ ಪಡೆದು ಬಾಳೆಹೊನ್ನೂರು ಠಾಣೆಯಲ್ಲಿ ಇರಿಸಿದ್ದಾರೆ. ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅಕ್ರಮ ಗೋ ಸಾಗಿಸುತ್ತಿದ್ದವರು ಹಾಗೂ ವಾಹನ ಮಾಲೀಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ