ವಿಕ್ಟೋರಿಯಾ ಆಸ್ಪತ್ರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ/ ಸುಮಾರು 35 ವರ್ಷದ ಕೊರೊನಾ ಸೊಂಕಿತ ವ್ಯಕ್ತಿ ಆತ್ಮಹತ್ಯೆ/ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ/ ಸ್ಥಳಕ್ಕೆ ವಿವಿ ಪುರಂ ಪೋಲಿಸರು ದೌಡು
ಬೆಂಗಳೂರು(ಏ. 28) ಕೊರೋನಾ ಸೋಂಕಿತ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದ ಮಗ ಆಸ್ಪತ್ರೆಯ ಟೆರೆಸ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಹಾಸನದಿಂದ ವರದಿಯಾಗಿತ್ತು. ಈಗ ಅಂಥದ್ದೇ ಒಂದು ಪ್ರಕರಣ ಬೆಂಗಳೂರಿನಿಂದ.
ಕ್ಟೋರಿಯಾ ಆಸ್ಪತ್ರೆ ಕಟ್ಟಡದಿಂದ ಜಿಗಿದು ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಾರು 35 ವರ್ಷದ ಕೊರೊನಾ ಸೊಂಕಿತ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ನಡೆದಿದೆ. ಸ್ಥಳಕ್ಕೆ ವಿವಿ ಪುರಂ ಪೋಲಿಸರು ಭೇಟಿ ನೀಡಿ ಸೋಂಕಿತ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಬಟ್ಟೆ ತೊಳೆಯಲು ಹೋದ ಸಹೋದರರು ನೀರು ಪಾಲು
ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದೆ ಇದೆ. ಒಂದು ಕಡೆ ಕರ್ನಾಟಕ ಸರ್ಕಾರ ಹದಿನಾಲ್ಕು ದಿನಗಳ ನಿಷೇಧಾಜ್ಞೆ ಜಾರಿ ಮಾಡಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ.
ಈ ನಿಷೇಧಾಜ್ಞೆಯ ಪರಿಣಾಮ ಗೊತ್ತಾಗಲು ಕೆಲ ದಿನ ಕಾಯಲೇಬೇಕು. ಮುಂಬೈ ಮತ್ತು ದೆಹಲಿಯಲ್ಲಿಯೂ ಕೊರೋನಾ ನಿಧಾನಕ್ಕೆ ನಿಯಂತ್ರಣಕ್ಕೆ ಬರುತ್ತಿದೆ.