
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು
ಬೆಂಗಳೂರು (ಜು.09): ಸಚಿವರ ಪಿಎ ಎಂದು ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಗಂಗಾಧರ್ ಎಂಬುವವರನ್ನು ಬಂಧಿಸಲಾಗಿದೆ. ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಕರೆ ಮಾಡಿ ಗಂಗಾಧರ್ ಬೆದರಿಕೆ ಹಾಕಿದ್ದ. ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಕಾರು ಚಾಲಕನ ವರ್ಗಾವಣೆ ಸಂಬಂಧ ಕರೆ ಮಾಡಿ ಬೆದರಿಕೆ ಹಾಕಿದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರು ಚಾಲಕ ಆನಂದ್ ವರ್ಗಾವಣೆ ಮಾಡಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಜುಲೈ ಒಂದರಂದು ರಾತ್ರಿ 11 ಗಂಟೆಗೆ ಕರೆ ಮಾಡಿದ್ದ. ನಾನು ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಚಾಲಕ ಆನಂದನನ್ನ ಏಕೆ ವರ್ಗಾವಣೆ ಮಾಡಿದ್ದೀಯಾ ಎಂದು ಹೆದರಿಸಿದ. ಈ ವೇಳೆ ಇದು ಆಡಳಿತಾತ್ಮಕ ವಿಷಯ, ಇದಕ್ಕೆ ಈ ಹೊತ್ತಿನಲ್ಲಿ ಕರೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದ ಮುನೀಶ್ ಮೌದ್ಗಿಲ್, ಈ ವೇಳೆ ಏರು ಧ್ವನಿಯಲ್ಲಿ ಮಾತನಾಡಿದ್ದ.
Bengaluru: ಜೈಲಿನಿಂದಲೇ ಹಣಕ್ಕಾಗಿ ರೌಡಿ ಬೆದರಿಕೆ: ಇನ್‌ಸ್ಪೆಕ್ಟರ್ ಅಮಾನತು
ನಾನು ಸಚಿವರ ಪಿಎ, ನಿಮ್ಮನ್ನ ಸರ್ವೇ ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಹುದ್ದೆಯಿಂದ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ. ತಡರಾತ್ರಿ ಸುಮಾರು 15ಕ್ಕೂ ಹೆಚ್ಚು ಬಾರಿ ಕರೆ ಮಾಡಿ ಟಾರ್ಚರ್ ನೀಡಿದ್ದ. ಐಎಎಸ್ ಅಧಿಕಾರಿ ಮರು ದಿನ ಟ್ರೂ ಕಾಲರ್‌ನಲ್ಲಿ ಪೋನ್ ನಂಬರ್ ಪರಿಶೀಲನೆ ನಡೆಸಿದರು. ಟ್ರೂ ಕಾಲರ್‌ನಲ್ಲಿ ಗೋವಿಂದರಾಜು ಟಿ ಎಂದು ಹೆಸರು ಪತ್ತೆಯಾಗಿತ್ತು. ಬಳಿಕ ಮುನೀಶ್ ಮೌದ್ಗಿಲ್ ಅಬಕಾರಿ ಸಚಿವರ ಪಿಎ ರಾಮೇಗೌಡ ಅವರಿಗೆ ವಿಷಯ ತಿಳಿಸಿದರು. ಈ ವೇಳೆ ಸಚಿವರ ಪಿಎ ಎಂದು ಯಾರೋ ಕರೆ ಮಾಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು: ಉದ್ಯಮಿ ಮನೆಯಲ್ಲಿ ಚಿನ್ನ ಕದ್ದ ತಾಯಿ-ಮಗಳ ಸೆರೆ
ಕೂಡಲೇ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ದಾಖಲಿಸಿ ಆರೋಪಿ ಗೋವಿಂದರಾಜುನನ್ನ ಬಂಧಿಸಲಾಗಿದೆ. ಪೊಲೀಸರ ತನಿಖೆ ವೇಳೆ ವರ್ಗಾವಣೆಯಾಗಿದ್ದ ಚಾಲಕ ಆನಂದ್ ಸಂಬಂಧಿ ಎಂಬುದು ಪತ್ತೆ ಮಾಡಿದ್ದಾರೆ. ಆರೋಪಿಯನ್ನ ಬಂಧಿಸಿ ತನಿಖೆ ನಡೆಸಿದ್ದಾರೆ. ಜುಲೈ ಒಂದರಂದು ತಮ್ಮ ಕಾರು ಚಾಲಕ ಆನಂದನನ್ನ ವರ್ಗಾಯಿಸಿದ್ದ. ಆಡಳಿತಾತ್ಮಕ ದೃಷ್ಟಿಯಿಂದ ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಚಾಲಕನ ವರ್ಗಾವಣೆ ಮಾಡಿದ್ದಕ್ಕೆ ಗೋವಿಂದರಾಜು ಎಂಬಾತನಿಂದ ಬೆದರಿಕೆ ಕರೆ ಹಾಕಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ