Kalaburagi News: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

By Suvarna News  |  First Published Jul 9, 2022, 3:08 PM IST

Kalaburagi Bike Accident: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಮೂವರ ಸಾವಿಗೀಡಾಗಿರುವ ಘಟನೆ  ಕಲಬುರಗಿಯಲ್ಲಿ ನಡೆದಿದೆ. 
 


ಕಲಬುರಗಿ (ಜು. 09):  ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಮೂವರ ಸಾವಿಗೀಡಾಗಿರುವ ಘಟನೆ  ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ  ಕಟ್ಟಿಸಂಗಾವಿ ಗ್ರಾಮದ ಭೀಮಾ ನದಿ ಬ್ರೀಡ್ಜ್ ಬಳಿ ನಡೆದಿದೆ.  ಆಕಾಶ್ ಬಡಿಗೇರ್ (21), ಶೀವು ಮ್ಯಾಗೇರಿ (21) ಮತ್ತು ಲಕ್ಷ್ಮಣ್ ಮಲವಾಡಿ (18) ಮೃತರು. ಮೃತರು ಜೇವರ್ಗಿ ತಾಲೂಕಿನ ಎಸ್ ಎನ್ ಹಿಪ್ಪರಗಿ ಗ್ರಾಮದವರು.  ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.  ಡಿಕ್ಕಿ ರಭಸಕ್ಕೆ ಬೈಕ್ ಸವಾರರು ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.  ನಾಗಾವಿ ಯಲ್ಲಮ್ಮ ದೇಗುಲದಲ್ಲಿ‌ ಪೂಜೆ ಮುಗಿಸಿಕೊಂಡು ಬಾಡೂಟ ಮಾಡಿ ವಾಪಾಸ್ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.  ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಿಂತಿದ್ದ ಲಾರಿಗೆ ಸಾರಿಗೆ ಬಸ್ ಡಿಕ್ಕಿ: ಹಲವರಿಗೆ ಗಾಯ: ನಿಂತಿದ್ದ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದು,  ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ  ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿ ನಡೆದಿದೆ.  ಹಾಸನ‌ದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ  ಸಾರಿಗೆ ಬಸ್ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.  ಬಸ್‌ನಲ್ಲಿದ್ದ 15 ಮಂದಿಗೆ ತೀವ್ರ ಸ್ವರೂಪದ ಗಾಯ, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ.  ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.  ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Tap to resize

Latest Videos

ಓಮಿನಿ ಕಾರ್ ಮೇಲೆ ಮಗುಚಿ ಬಿದ್ದ ಲಾರಿ: ಓರ್ವ ಸಾವು: ಓಮಿನಿ ಕಾರ್ ಮೇಲೆ ಲಾರಿ  ಮಗುಚಿ ಬಿದ್ದು ವ್ಯಕ್ತಿ ಸಾವಿಗೀಡಾಗಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ನಡೆದಿದೆ.  ಉಡುಪಿ ಕಡೆಗೆ ಗೋಣಿ ಚೀಲಗಳನ್ನು ಹೊತ್ತು ಸಾಗುತ್ತಿದ್ದ ಲಾರಿಗೆ ಬ್ರೇಕ್ ಹಾಕಿದಾಗ ಚಾಲಕ ನಿಯಂತ್ರಣ ಕಳೆದುಕೊಂಡು ಲಾರಿ ರಸ್ತೆಯಲ್ಲಿ ಎಡಭಾಗಕ್ಕೆ ಮಗುಚಿ ಬಿದ್ದಿದೆ.  

ಇದನ್ನೂ ಓದಿ: ಪಲ್ಟಿಯಾದ ಬಸ್: ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ಪ್ರಯಾಣಿಕರು

ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮಿನಿ ಕಾರ್ ಮೇಲೆ  ಲಾರಿ ಮಗುಚಿ ಬಿದ್ದಿದ್ದು  ಓಮಿನಿ ಕಾರ್ ಲಾರಿ ಅಡಿಗೆ ಸಿಲುಕಿದೆ. ಕಾರ್ ನಲ್ಲಿದ್ದ ಚಿತ್ರಾಪುರ ನಿವಾಸಿ ಲೋಕೇಶ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು,  ಸ್ಥಳೀಯರು ಲೋಕೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್ ಮೃತಪಟ್ಟಿದ್ದಾರೆ.  ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರು ಮತ್ತು ಬೈಕ್ ಮೇಲೆ ಉರಳಿ ಬಿದ್ದ ಭಾರಿ ಮರ:  ಉಡುಪಿಯ ಬ್ರಹ್ಮಗಿರಿಯಲ್ಲಿ ಕಾರು ಮತ್ತು ಬೈಕ್ ಮೇಲೆ ಭಾರಿ ಮರ  ಉರಳಿ ಬಿದ್ದಿದೆ.  ಬ್ರಹ್ಮಗಿರಿ ಅಂಬಲಪಾಡಿ ರಸ್ತೆಯಲ್ಲಿ ಘಟನೆ ನಡೆದಿದ್ದು,  ಘಟನೆಯಿಂದ ಕೂದಲೆಳೆಯಲ್ಲಿ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ರಹ್ಮಗಿರಿ ಅಂಬಲಪಾಡಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಿಲಿಸುತ್ತಿದ್ದಾರೆ. 

click me!