Mohammed Nalapad ತಮ್ಮ ಮೇಲೆ ಬಂದಿರುವ ಗಂಭೀರ ಆರೋಪಕ್ಕೆ ನಲಪಾಡ್ ಸ್ಪಷ್ಟನೆ

By Suvarna News  |  First Published Jan 20, 2022, 7:02 PM IST

* ಮತ್ತೊಂದು ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಹೆಸರು
 * ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ನಲಪಾಡ್
* ಏಷ್ಯಾನೆಟ್ ಸುವರ್ಣ ನ್ಯೂಸ್ ನಲಪಾಡ್ ಸ್ಪಷ್ಟನೆ


ಬೆಂಗಳೂರು (ಜ.20): ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್(Karnataka Youth Congress) ನಿಯೋಜಿತ ಅಧ್ಯಕ್ಷ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ (NA Haris) ಪುತ್ರ ಮೊಹಮ್ಮದ್ ನಲಪಾಡ್ (Mohammed Nalapad) ವಿರುದ್ಧ ಮತ್ತೊಂದು ಹಲ್ಲೆ ಆರೋಪ ಕೇಳಿ ಬಂದಿದೆ.

ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳೇಗೌಡ ಮೇಲೆ ನಲಪಾಡ್ ಹಾಗೂ ಆತನ ಬೆಂಬಲಿಗರು ಖಾಸಗಿ ಹೋಟೆಲ್ ನಲ್ಲಿ ಬುಧವಾರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Tap to resize

Latest Videos

Mohammed Nalapad : ಯುವ ಕಾಂಗ್ರೆಸ್ ನಾಯಕನ ಮೇಲೆ ನಲಪಾಡ್ ಹಲ್ಲೆ!

ಆ ಆರೋಪಕ್ಕೆ ಸ್ವತಃ ಮೊಹಮ್ಮದ್ ನಲಪಾಡ್  ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದು,  ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ನನ್ನ ವಿರುದ್ದ ಷಡ್ಯಂತರ ಮಾಡಲಾಗಿದೆ. ಇದರ ಬಗ್ಗೆ ದೂರು ನೀಡಬೇಕಾ ಅಥವಾ ಬೇಡ್ವಾ ಎಂದು ವರಿಷ್ಠರ ಬಗ್ಗೆ ಚರ್ಚೆ ಮಾಡಿ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನ್ನ ಸ್ನೇಹಿತರ ಗೆಸ್ಟ್ ಹೌಸ್ ನಲ್ಲಿ ಸೇರಿದ್ವಿ, ಅದು ಕೂಡ ಟೆರಸ್ ಮೇಲೆ. ಅಲ್ಲಿ ಯಾವುದೇ ಗಲಾಟೆ ಆಗಿಲ್ಲ. ಸಿದ್ದು ಜೊತೆ ಪೋನ್ ನಲ್ಲಿ ಮಾತನಾಡಿದ್ದೇನೆ. ಗ್ರೂಪ್‌ನಲ್ಲಿ ಹೇಗೆ ಮೇಸೆಜ್ ಹೋಗಿದೆ ನಂಗೆ ಗೊತ್ತಿಲ್ಲ ಎಂದು ಹೇಳಿದರು.

ಗೃಹ ಸಚಿವರ ಹೇಳಿಕೆ
ಇನ್ನು ಮೊಹಮ್ಮದ್ ನಲಪಾಡ್ ಮೇಲೆ ಕೇಳಿಬಂದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ‌ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು,ಖಾಸಗಿ ರೆಸ್ಟೋರೆಂಟ್ ನಲ್ಲಿ ಅವರು ಸೇರಿದ್ರು. ಇದುವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ಬಂದಿಲ್ಲ. ಪೊಲೀಸರು ದೂರಿನ‌ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಹೇಳಿದರು.

ಇನ್ನು ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಪ್ರತಿಕ್ರಿಯಿಸಿ,  ಹಲ್ಲೆ ಆಥವಾ ಗಲಾಟೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಬಂದ ತಕ್ಷಣ ಪ್ರಕರಣ ದಾಖಲೆ ಮಾಡುತ್ತವೆ.. ಈ ವರೆಗೆ ನಮಗೆ ದೂರು ಬಂದಿಲ್ಲ ಎಂದು ತಿಳಿಸಿದರು.

ಯಲಹಂಕದ ರೆಸಾರ್ಟ್ ನಲ್ಲಿ ಮೊಹಮದ್ ನಲಪಾಡ್ ಅವರ ಪದಗ್ರಹಣದ ಕುರಿತಾಗಿ ಚರ್ಚೆ ನಡೆಸಲಾಗಿತ್ತು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮಂಜುನಾಥ್ ಗೌಡ ಅವರ ಬೆಂಬಲಿಗರಾಗಿದ್ದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳೇಗೌಡ ಅವರ ಬೆಂಬಲಿಗರು ಹಾಗೂ ನಲಪಾಡ್ ಅವರ ನಡುವೆ ಗಲಾಟೆಯಾಗಿದೆ. "ಏನೋ ನೀನು ಮಂಜು ಗೌಡಗೆ ಬೆಂಬಲ ನೀಡ್ತೀರಾ" ಎಂದು ಹೇಳಿ ಸಿದ್ಧು ಹಳೇಗೌಡನ ಮೇಲೆ ಹಲ್ಲೆ ನಡೆಸಿದ್ದಾರೆ. ಸಿದ್ಧು ಅವರ ಸಹೋದರರಾದ ಪೃಥ್ವಿ ಹಾಗೂ ಕಿರಣ್ ಅವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾಗಿ ದೂರು ನೀಡಲು ಮುಂದಾಗಿದ್ದ ಸಿದ್ಧು ಹಳೇಗೌಡ ಅವರ ಮನವೊಲಿಸಲು ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

click me!