ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ದೆಹಲಿಯಿಂದ ರಾಜಸ್ಥಾನಕ್ಕೆ ಕರೆಸಿಕೊಂಡ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಹೋಟೆಲ್ ಮೇಲಿನಿಂದ ಕೆಳಗೆ ನೂಕಿದ ಘಟನೆ ನಡೆದಿದೆ.
ಚುರು (ರಾಜಸ್ಥಾನ ಫೆ.14): ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ದೆಹಲಿಯಿಂದ (Delhi) ರಾಜಸ್ಥಾನಕ್ಕೆ (Rajasthan) ಕರೆಸಿಕೊಂಡ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿ (Rape) ಆಕೆಯನ್ನು ಹೋಟೆಲ್ (Hotel) ಮೇಲಿನಿಂದ ಕೆಳಗೆ ನೂಕಿದ ಘಟನೆ ನಡೆದಿದೆ.
ಸಂದರ್ಶನದ ನೆಪದಲ್ಲಿ ದಿಲ್ಲಿಯಿಂದ ಆಕೆಯನ್ನು ಚುರುವಿನ ಹೋಟೆಲ್‌ಗೆ ದುರುಳರು ಕರೆಸಿಕೊಂಡಿದ್ದಾರೆ. ಮೇಲ್ಛಾವಣಿ ಮೇಲೆ ಆಕೆಯ ಕಾಲು-ಕೈಗೆ ಹಗ್ಗ ಕಟ್ಟಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಮೇಲಿನಿಂದ ನೂಕಿದ್ದಾರೆ. ಸುದೈವವಶಾತ್ ಆಕೆಯ ಕೈಗೆ ಕಟ್ಟಿದ ಹಗ್ಗ ಕಂಬಕ್ಕೆ ಸಿಕ್ಕಿಕೊಂಡು ಬಚಾವಾಗಿದ್ದಾಳೆ.
ಈ ಘಟನೆ ಕುರಿತು ಭಾನುವಾರ 25 ವರ್ಷದ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಮಾಡಿದ ಆರೋಪದಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಾದ ದೇವೇಂದ್ರ ಸಿಂಗ್, ವಿಕ್ರಂ ಸಿಂಗ್, ಭವಾನಿ ಸಿಂಗ್ ಮತ್ತು ಸುನೀಲ್ ರಜಪೂತ್‌ರನ್ನು ವಶಕ್ಕೆ (Arrest) ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು (Police) ಹೇಳಿದ್ದಾರೆ.
ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡುವ ಹಕ್ಕಿದೆ: ಉತ್ತರಾಖಂಡ ಹೈಕೋರ್ಟ್
ವಿಮಾನದಲ್ಲಿ ಮಹಿಳೆಯ ಮೇಲೆ ರೇಪ್: ಅಮೆರಿಕದ ನ್ಯೂಜೆರ್ಸಿಯಿಂದ (New Jersey ) ಲಂಡನ್‌ಗೆ (London) ತೆರಳುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ. ಪ್ರಕರಣದ ಆರೋಪಿಯನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದ್ದು, ನಂತರ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ದಿ ಸನ್ (The Sun) ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಇತರ ಪ್ರಯಾಣಿಕರು ಮಲಗಿದ್ದರು ಎಂದು ಹೇಳಲಾಗಿದೆ. ಈ ಘಟನೆ ಯುನೈಟೆಡ್ ಏರ್‌ಲೈನ್ಸ್ (United Airlines) ವಿಮಾನದಲ್ಲಿ ಕಳೆದ ಸೋಮವಾರ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ನಂತರ ಸಂತ್ರಸ್ತ ಮಹಿಳೆ ಏರ್‌ಲೈನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನಯಾನ ಸಿಬ್ಬಂದಿ ಇಂಗ್ಲೆಂಡ್ ನ ಪೊಲೀಸರಿಗೆ (UK Police) ಮಾಹಿತಿ ನೀಡಿದರು. ನ್ಯೂಜೆರ್ಸಿಯಿಂದ ಲಂಡನ್‌ಗೆ ನೇರ ವಿಮಾನಯಾನ ಅಂದಾಜು 7 ಗಂಟೆಯದ್ದಾಗಿದೆ.
ವಿಮಾನವು ಇಂಗ್ಲೆಂಡ್ ನ ಹೀಥ್ರೂ (Heathrow Airport)ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಆಗಮಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸಂತ್ರಸ್ಥೆಯನ್ನು ರೇಪ್ ಕೌನ್ಸೆಲಿಂಗ್ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಅಧಿಕಾರಿಗಳು ವಿಮಾನದ ವಿಧಿವಿಜ್ಞಾನ ಪರೀಕ್ಷೆಯನ್ನೂ ನಡೆಸಿದ್ದು, ಸಂತ್ರಸ್ಥ ಮಹಿಳೆ ಹಾಗೂ ಅರೋಪಿ ಇಬ್ಬರ ವಯಸ್ಸೂ 40 ಎಂದು ಹೇಳಲಾಗಿದೆ.
"ಇತರರು ಮಲಗಿದ್ದ ವೇಳೆ ವಿಮಾನದಲ್ಲಿಯೇ ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ವಿಚಲಿತಗೊಂಡ ಮಹಿಳೆ ಕ್ಯಾಬಿನ್ ಸಿಬ್ಬಂದಿಗೆ ಇದರ ಮಾಹಿತಿ ನೀಡಿದ್ದಾಳೆ. ಇನ್ನು ಬ್ಯಾಬಿನ್ ಸಿಬ್ಬಂದಿಗಳು ಇಂಗ್ಲೆಂಡ್ ಪೊಲೀಸರಿಗೆ ಇದರ ಮಾಹಿತಿ ನೀಡಿದ್ದಾರೆ. ವಿಮಾನವು ಹೀಥ್ರೂ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರೋಪಿಯನ್ನು ಬಂಧನ ಮಾಡಲಾಗಿತ್ತು.
ಹೆಂಡತಿ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ ಭೂಪ, ಕಾಮುಕನ ನೀಚ ಕೃತ್ಯ ಬಯಲು
ಇಬ್ಬರೂ ಬ್ರಿಟನ್ ನಿವಾಸಿಯಾಗಿದ್ದರೂ ಈ ಮೊದಲೇ ಪರಿಚಿತರಾಗಿರಲಿಲ್ಲ. ಆದರೆ ವಿಮಾನ ಹಾರಾಟಕ್ಕೂ ಮುನ್ನ ಹಾಗೂ ವಿಮಾನ ಪ್ರಯಾಣದ ವೇಳೆ ಪರಸ್ಪರ ಮಾತನಾಡುವುದನ್ನು ಇತರ ಪ್ರಯಾಣಿಕರು ಕಂಡಿದ್ದಾರೆ. ವಿಮಾನ ಪ್ರಯಾಣ ಮಾಡುವ ಮುನ್ನ ವಿಶ್ರಾಂತಿ ಸ್ಥಳದಲ್ಲಿಯೇ ಜೊತೆಯಲ್ಲಿಯೇ ಮದ್ಯಪಾನ ಮಾಡಿದ್ದರು ಎಂದೂ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.