Asianet Suvarna News Asianet Suvarna News

ಪುತ್ತೂರು ಯುವತಿ ಹತ್ಯೆ ಪ್ರಕರಣ: ಗೆಳತಿಯನ್ನು ಇರಿದು ಕೊಂದಿದ್ದಕ್ಕೆ ಸಂಶಯವೇ ಕಾರಣ?

ಇತ್ತೀಚಿನ ದಿನಗಳಲ್ಲಿ ತನ್ನ ಮೊಬೈಲ್‌ ಕರೆಯನ್ನು ಗೌರಿ ಸ್ವೀಕರಿಸದ ಹಿನ್ನಲೆಯಲ್ಲಿ ಪದ್ಮರಾಜ್‌ ಈ ಬಗ್ಗೆ ವಿಚಾರಿಸಲೆಂದೇ ಪುತ್ತೂರಿನಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದಿದ್ದ. ಈ ಆಕ್ರೋಶದಿಂದಲೇ ತಾನು ನೀಡಿದ್ದ ಮೊಬೈಲನ್ನು ಆಕೆಯ ಕೈಯಿಂದ ಜಗಳವಾಡಿ ಕಿತ್ತುಕೊಂಡು ಹೋಗಿದ್ದ. ಅಲ್ಲದೆ ತಾನು ಆಕೆಗೆ ರು.2 ಲಕ್ಷಕ್ಕೂ ಅಧಿಕ ಹಣವನ್ನು ಹಿಂತಿರುಗಿಸುವಂತೆ ಪೀಡಿಸಿದ್ದ. ಈ ವಿಚಾರವನ್ನು ಯುವತಿ ಆಕೆಯ ತಾಯಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿರುವುದರಿಂದ ಇನ್ನಷ್ಟುಆಕ್ರೋಶಗೊಂಡು ಕೊಲೆ ಮಾಡುವ ನಿರ್ಧಾರ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.

puttur murder case suspicion is the reason for stabbing girlfriend rav
Author
First Published Aug 26, 2023, 6:52 PM IST

ಪುತ್ತೂರು (ಆ.26) :  ಪುತ್ತೂರಿನ ಮಹಿಳಾ ಪೊಲೀಸ್‌ ಠಾಣೆಯ ಪಕ್ಕದಲ್ಲಿ ಗುರುವಾರ ಮಧ್ಯಾಹ್ನ ಹಾಡಹಗಲೇ ಯುವತಿಯನ್ನು ಇರಿದು ಕೊಂದ ಆರೋಪಿ ಪದ್ಮರಾಜ್‌ನ ಜೊತೆ ಪೊಲೀಸರು ಶುಕ್ರವಾರ ಸ್ಥಳ ಮಹಜರು ನಡೆಸಿದರು. ಆತನನ್ನು ಕೊಲೆ ಕೃತ್ಯ ನಡೆದ ಸ್ಥಳಕ್ಕೆ ಹಾಗೂ ಆಕೆಯೊಂದಿಗೆ ಜಗಳವಾಡಿದ್ದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಕಟ್ಟಡದ ಅಂಗಡಿಗೆ ಕರೆದೊಯ್ದು ಮಹಜರು ನಡೆಸಿದರು. ಶುಕ್ರವಾರ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೃತ ಗೌರಿ ಕಳೆದ ಕೆಲ ಸಮಯಗಳಿಂದ ಇನ್ನೋರ್ವ ಯುವಕನ ಸಂಪರ್ಕದಲ್ಲಿದ್ದಾಳೆ ಎಂಬ ಪದ್ಮರಾಜ್‌ ಸಂಶಯವೇ ಹತ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ.

ಪ್ರಕರಣದ ಹಿನ್ನೆಲೆ:

ಬಂಟ್ವಾಳ ತಾಲೂಕಿನ ಅಳಿಕೆ ಸಮೀಪದ ಕುದ್ದುಪದವು ಆದಾಳ ನಿವಾಸಿ ರವೀಂದ್ರ ಮಣಿಯಾಣಿ ಪುತ್ರಿ ಗೌರಿ (18) ಮೃತಳು. ಈಕೆಯನ್ನು ಮೂಲತಃ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಲು ನಿವಾಸಿಯಾಗಿದ್ದು, ಕಳೆದ 3 ವರ್ಷಗಳಿಂದ ವೇಣೂರಿನಲ್ಲಿ ವಾಸ್ತವ್ಯವಿದ್ದ ಪದ್ಮರಾಜ್‌ (23) ಎಂಬಾತ ಗುರುವಾರ ಪುತ್ತೂರಿನ ಮಹಿಳಾ ಪೊಲೀಸ್‌ ಠಾಣೆಯ ಬಳಿ ಇರಿದು ಕೊಂದಿದ್ದ.

ನನ್‌ ಜತೆ ಮಲಗು ಬಾ ಅಂತ ಸೊಸೆಗೆ ಒತ್ತಾಯಿಸ್ತಿದ್ದ ಮಾವ: ಕುಡುಗೋಲಿನಿಂದ ಗಂಡನ ಕತ್ತು ಸೀಳಿದ ಅತ್ತೆ

ಮಹಿಳಾ ಪೊಲೀಸ್‌ ಠಾಣೆಯ ಪಕ್ಕದಲ್ಲಿರುವ ಮಹಾಲಿಂಗೇಶ್ವರ ದೇವಳದ ದ್ವಾರದ ಬಳಿ ಗೌರಿ ಇದ್ದ ವೇಳೆ ಬೈಕಿನಲ್ಲಿ ಬಂದಿದ್ದ ಆರೋಪಿ ಪದ್ಮರಾಜ್‌ ಏಕಾಏಕಿಯಾಗಿ ಆಕೆಯನ್ನು ಠಾಣೆಯ ಗೋಡೆಯ ಬದಿಯ ದ್ವಾರದ ಕಂಬಕ್ಕೆ ಒತ್ತಿ ಹಿಡಿದು ಚೂರಿಯಿಂದ ಕತ್ತು ಸೀಳಿದ್ದ. ಕುಸಿದು ನೆಲದ ಮೇಲೆ ಬಿದ್ದ ಆಕೆಯ ಹೊಟ್ಟೆಯ ಮೇಲೆ ಕುಳಿತು ಮತ್ತೆ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ತಿವಿದಿದ್ದ. ಈ ದೃಶ್ಯವನ್ನು ಕಂಡ ದೇವಳದಿಂದ ಬರುತ್ತಿದ್ದ ಭಕ್ತರೊಬ್ಬರು ಬೊಬ್ಬೆ ಹೊಡೆಯುತ್ತಿದ್ದಂತೆಯೇ ಆರೋಪಿ ಹಂತಕ ಚಾಕು ತೋರಿಸಿ ತುಳುವಿನಲ್ಲಿ ‘ಎದುರು ಬಂದರೆ ನಿಮ್ಮನ್ನೂ ಕೊಲ್ಲುತ್ತೇನೆ’ ಎಂದು ಗದರಿಸುತ್ತಾ, ಕೃತ್ಯಕ್ಕೆ ಬಳಸಿದ ಚೂರಿಯನ್ನು ಅಲ್ಲೇ ಎಸೆದು ತಾನು ಬಂದಿದ್ದ ಬೈಕ್‌ ಏರಿ ಅಲ್ಲಿಂದ ಪರಾರಿಯಾಗಿದ್ದ.

ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾದ ಗೌರಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಆಕೆ ದಾರಿ ಮಧ್ಯೆ ಮೃತಪಟ್ಟಿದ್ದರು.

ಮೊಬೈಲ್‌ ಕಿತ್ತುಕೊಂಡ ಪದ್ಮರಾಜ್‌:

ಗೌರಿ ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹತ್ಯೆಗೆ ಮೊದಲು ಅಲ್ಲಿಗೆ ಆಗಮಿಸಿದ್ದ ಆರೋಪಿ ಪದ್ಮರಾಜ್‌ ಅಂಗಡಿಯೊಳಗೆ ಬಂದು ಗೌರಿ ಅವರಲ್ಲಿ ಎರಡು ಮೊಬೈಲ್‌ಗಳಿರುವ ವಿಚಾರದಲ್ಲಿ ಆಕೆಯೊಂದಿಗೆ ಜಗಳವಾಡಿದ್ದ. ಆ ವೇಳೆ ಅಂಗಡಿ ಮಾಲಕರು ಹೊರಗೆ ಹೋಗಿ ಮಾತನಾಡುವಂತೆ ಸೂಚಿಸಿದ್ದರು. ಅಂಗಡಿಯೊಳಗಿಂದಲೇ ಗೌರಿ ತಾಯಿಗೆ ಕರೆ ಮಾಡಿ ಮಾತನಾಡತೊಡಗಿದ್ದು, ಆ ವೇಳೆ ಪದ್ಮರಾಜ್‌ ಆಕೆಯ ಕೈಯಲ್ಲಿದ್ದ ಮೊಬೈಲ್‌ ಒಂದನ್ನು ಕಿತ್ತುಕೊಂಡು ಹೋಗಿದ್ದ. ಈ ಹಿನ್ನಲೆಯಲ್ಲಿ ಗೌರಿ ಅಂಗಡಿಯೊಳಗಿಂದ ಕಣ್ಣೀರಿಡುತ್ತಾ ಹೊರ ಹೋಗಿದ್ದರು. ಈ ದೃಶ್ಯಗಳು ದೃಶ್ಯ ಅಂಗಡಿಯ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ.

ಮೊಬೈಲ್‌ ಕಿತ್ತುಕೊಂಡು ಹೋದ ವಿಚಾರದಲ್ಲಿ ಗೌರಿ ಅವರು ಪದ್ಮರಾಜ್‌ಗೆ ಹಲವು ಬಾರಿ ಕರೆ ಮಾಡಿ ಮೊಬೈಲ್‌ ಕೊಡುವಂತೆ ಕೇಳಿಕೊಂಡಿದ್ದರು. ಅಂಗಡಿಯ ಪಕ್ಕದ ಪರಿಚಯಸ್ಥರಲ್ಲಿ ದೂರು ನೀಡಲು ಹೋಗುವುದಾಗಿಯೂ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಮೊಬೈಲ್‌ ಕಿತ್ತುಕೊಂಡು ಮಾಣಿ ತನಕ ಹೋಗಿದ್ದ ಆರೋಪಿ ಚಾಕುವನ್ನು ಖರೀದಿಸಿಕೊಂಡು ಗೌರಿ ಮಹಿಳಾ ಪೊಲೀಸ್‌ ಠಾಣೆಯ ಬಳಿಯಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದು ಏಕಾಏಕಿಯಾಗಿ ಹತ್ಯೆ ಮಾಡಿದ್ದಾನೆ. ಗೌರಿ ಆತನ ವಿರುದ್ಧ ದೂರು ನೀಡಲು ಮಹಿಳಾ ಪೊಲೀಸ್‌ ಠಾಣೆಯ ಬಳಿಗೆ ಹೋಗಿರಬಹುದೆಂದು ಶಂಕಿಸಲಾಗಿದೆ. ಆರೋಪಿ ಕೃತ್ಯ ಎಸಗಿ ಮರಳಿ ಬೈಕ್‌ನಲ್ಲಿ ತೆರಳುತ್ತಿರುವುದು ಮಹಿಳಾ ಪೊಲೀಸ್‌ ಠಾಣೆಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್‌, 'ಅದನ್ನೇ' ಕಟ್‌ ಮಾಡಿ ಕೊಲೆ ಮಾಡಿದ ಮಹಿಳೆ!

ಅನುಮಾನವೇ ಕೊಲೆಗೆ ಹೇತು?:

ಇತ್ತೀಚಿನ ದಿನಗಳಲ್ಲಿ ತನ್ನ ಮೊಬೈಲ್‌ ಕರೆಯನ್ನು ಗೌರಿ ಸ್ವೀಕರಿಸದ ಹಿನ್ನಲೆಯಲ್ಲಿ ಪದ್ಮರಾಜ್‌ ಈ ಬಗ್ಗೆ ವಿಚಾರಿಸಲೆಂದೇ ಪುತ್ತೂರಿನಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದಿದ್ದ. ಈ ಆಕ್ರೋಶದಿಂದಲೇ ತಾನು ನೀಡಿದ್ದ ಮೊಬೈಲನ್ನು ಆಕೆಯ ಕೈಯಿಂದ ಜಗಳವಾಡಿ ಕಿತ್ತುಕೊಂಡು ಹೋಗಿದ್ದ. ಅಲ್ಲದೆ ತಾನು ಆಕೆಗೆ ರು.2 ಲಕ್ಷಕ್ಕೂ ಅಧಿಕ ಹಣವನ್ನು ಹಿಂತಿರುಗಿಸುವಂತೆ ಪೀಡಿಸಿದ್ದ. ಈ ವಿಚಾರವನ್ನು ಯುವತಿ ಆಕೆಯ ತಾಯಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿರುವುದರಿಂದ ಇನ್ನಷ್ಟುಆಕ್ರೋಶಗೊಂಡು ಕೊಲೆ ಮಾಡುವ ನಿರ್ಧಾರ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.

Follow Us:
Download App:
  • android
  • ios