ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ: ಇಬ್ಬರಿಗೆ ಚಾಕು ಇರಿತ

By Kannadaprabha NewsFirst Published Aug 1, 2020, 7:35 AM IST
Highlights

ಕ್ರಿಕೆಟ್‌ ಆಡುವಾಗ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ| ಮಾತಿನ ಭರಾಟೆಯಲ್ಲಿ ಜಗಳ ಶುರು| ಎತ್ತಿನಗುಡ್ಡದ ನಿವಾಸಿ ಉದಯ ನಾಗರಾಜ ಕೆಲಗೇರಿ ಹಾಗೂ ಆತನ ಸಹಚರ ಮನೋಜ ಜಮನಾಳ ಮೇಲೆ ಕುಡಿತದ ನಶೆಯಲ್ಲಿದ್ದ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ| ಇವರಿಬ್ಬರ ಜತೆಗಿದ್ದ ಮತಿಬ್ಬರು ಸಹಚರರಿಗೆ ಬಿಯರ್‌ ಬಾಟಲಿಯಿಂದ ಹಲ್ಲೆ|

ಧಾರವಾಡ(ಆ.01): ಕ್ಷುಲ್ಲಕ ಕಾರಣದಿಂದ ಎರಡು ಗುಂಪುಗಳ ನಡುವೆ ಗುರುವಾರ ತಡರಾತ್ರಿ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರಿಗೆ ಚೂರಿ ಇರಿಯಲಾಗಿದ್ದು, ಇಬ್ಬರು ತೀವ್ರಗಾಯಗೊಂಡಿದ್ದಾರೆ.

ಮದಾರಮಡ್ಡಿಯ ಕ್ರಿಕೆಟ್‌ ಮೈದಾನದಲ್ಲಿ ಗುರುವಾರ ಬೆಳಗ್ಗೆ ಕ್ರಿಕೆಟ್‌ ಆಡುವಾಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿತ್ತು. ಸಂಜೆ ಈ ಜಗಳ ಬಗೆಹರಿಸಲು ಎರಡು ಗುಂಪುಗಳು ಸಪ್ತಾಪೂರದಲ್ಲಿ ಸಂಜೆ ಹೊತ್ತು ಸೇರಿದ್ದರು. ಮಾತಿನ ಭರಾಟೆಯಲ್ಲಿ ಜಗಳ ಶುರುವಾಗಿದೆ. ಎತ್ತಿನಗುಡ್ಡದ ನಿವಾಸಿ ಉದಯ ನಾಗರಾಜ ಕೆಲಗೇರಿ ಹಾಗೂ ಆತನ ಸಹಚರ ಮನೋಜ ಜಮನಾಳ ಮೇಲೆ ಕುಡಿತದ ನಶೆಯಲ್ಲಿದ್ದ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಇವರಿಬ್ಬರ ಜತೆಗಿದ್ದ ಮತಿಬ್ಬರು ಸಹಚರರಿಗೆ ಬಿಯರ್‌ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ. 

ಕೂಡ್ಲಿಗಿ: ಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಮಾರಾಮಾರಿ

ಗಾಯಗೊಂಡವರು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ ಹೊಂಗಣ್ಣವರ, ಆದರ್ಶ ನಾಯಕ, ವೀರೇಶ ಸೊಟ್ಟಕನಾಳ, ಭರತ ಕರೆಣ್ಣವರ, ದತ್ತು ಅಲಿಯಾಸ್‌ ಸಂಗಮೇಶ ಕಾಮಾಟಿ ಹಾಗೂ ವಿನಾಯಕ ಕಲಬುರಗಿ ಎಂಬುವರೇ ಹಲ್ಲೆ ಮಾಡಿದ್ದು, ಇವರು ಪಿಯುಸಿ ವಿಜ್ಞಾನ ಹಾಗೂ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳಾಗಿದ್ದಾರೆ.

ಹಲ್ಲೆಗೊಳಗಾದವರು ಆರೋಪಿಗಳ ವಿರುದ್ಧ ಉಪ ನಗರ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
 

click me!