
ಚೆನ್ನೈ(ಜು. 31`) ಇವರು ಬಹಳ ಪ್ರಾಮಾಣಿಕ ಕಳ್ಳರು, ಎಷ್ಟು ಬೇಕೋ ಅಷ್ಟನ್ನು ಮಾತ್ರ ಕದ್ದು ಕುಡಿದಿದ್ದಾರೆ.
ತಮಿಳುನಾಡಿನ ಮಹಾಲ್ಲಾಪುರಂ ಮದ್ಯದ ಅಂಗಡಿಯಿಂದ ಕೇವಲ ನಾಲ್ಕೇ ನಾಲ್ಕು ಬಾಟಲಿ ಮದ್ಯ ಕಳ್ಳತನ ಮಾಡಲಾಗಿದೆ. ನಗದು ಕದಿಯಲು ಅಂಗಡಿಗೆ ತಂಡ ನುಗ್ಗ್ಇತ್ತು, ಆದರೆ ಹಣ ಇರಲಿಲ್ಲ, ಪರಿಣಾಮ ಕೈಗೆ ಸಿಕ್ಕ ಮದ್ಯದ ಬಾಟಲಿ ತೆಗೆದುಕೊಂಡು ಕಳ್ಳರು ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಿಮ್ಮ ಮನೆ ಮುಂದಿನ ತುಳಸಿ ಗಿಡ ಬೆಳಗ್ಗೆ ಇಲ್ಲವಾಗಬಹುದು
ಗುರುವಾರ ಬೆಳಗ್ಗೆ ಅಂಗಡಿಯ ಶಟರ್ಸ್ ಮುರಿದಿರುವುದು ಕಂಡಿದೆ. ಒಳಗೆ ಬಂದು ನೋಡಿದರೆ ಐದು ಸಾವಿರ ರೂ. ಬೆಲೆಬಾಳುವ ನಾಲ್ಕು ಮದ್ಯದ ಬಾಟಲಿಗಳು ಮಾತ್ರ ನಾಪತ್ತೆಯಾಗಿರುವುದು ಕಂಡು ಬಂದಿದೆ.
ಅಂಗಡಿಗೆ ನುಗ್ಗಿದ್ದ ಕಳ್ಳರು ಏನು ಸಿಗದಿದ್ದಾಗ ಇಲ್ಲಿಯೇ ಕುಡಿದು ತೆರಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರತಿದಿನದ ವ್ಯಾಪಾರ ವಹಿವಾಟಿನ ಹಣ ಅಂಗಡಿಯಲ್ಲೇ ಬಿಟ್ಟು ಹೋಗಬೇಡಿ ಎಂದು ಪೊಲೀಸರು ಎಲ್ಲ ವ್ಯಾಪಾರಿಗಳಿಗೆ ಸಲಹೆ ನೀಡಿದ್ದಾರೆ. ಇದು ಯಾವುದೋ ಚಾಲಾಕಿ ಗುಂಪಿನ ಕೆಲಸವೇ ಇರಬಹುದು ಎಂಬುದು ಪೊಲೀಸರ ಅನುಮಾನ. ಒಟ್ಟಿನಲ್ಲಿ ಕಳ್ಳತನಕ್ಕೆಂದು ಬಂದವರಿಗೆ ಸಿಕ್ಕಿದ್ದು ಎಣ್ಣೆ ಬಾಟಲಿ, ಅದಕ್ಕೆ ಕುಡಿದ ಕಳ್ಳರು ಜಾಗ ಖಾಲಿ ಮಾಡಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ