ಪುಟ್ಟಭರ್ತಿಯ ಸಾಯಿಬಾಬುರು ಸಾವನ್ನಪ್ಪುವ ಮುನ್ನಾ, ನಾನು ಮುಂದೆ ಚನ್ನಪಟ್ಟಣದ ಮಳೂರಿನಲ್ಲಿ ಪ್ರೇಮಸಾಯಿ ಬಾಬಾನಾಗಿ ಜನಿಸುತ್ತೇನೆ ಎಂದು ಹೇಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಬಾಬ, ಚನ್ನಪಟ್ಟಣಕ್ಕೆ ಎಂಟ್ರಿಕೊಟ್ಟು ಭಕ್ತರನ್ನ ಯಾಮಾರಿಸಿದ್ದಾನೆ. ಕೇಸು ಬೀಳುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾನೆ
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಸೆ.3): ಪುಟ್ಟಭರ್ತಿಯ ಸಾಯಿಬಾಬರು ಸಾವನ್ನಪ್ಪುವ ಮುನ್ನಾ, ನಾನು ಮುಂದೆ ಚನ್ನಪಟ್ಟಣದ ಮಳೂರಿನಲ್ಲಿ ಪ್ರೇಮಸಾಯಿ ಬಾಬಾನಾಗಿ ಜನಿಸುತ್ತೇನೆ ಎಂದು ಹೇಳಿದರು. ಅದನ್ನೆ ಬಂಡವಾಳ ಮಾಡಿಕೊಂಡ ಅದೊಬ್ಬ ನಕಲಿ ಬಾಬ, ಚನ್ನಪಟ್ಟಣಕ್ಕೆ ಎಂಟ್ರಿಕೊಟ್ಟು ಭಕ್ತರನ್ನ ಯಾಮಾರಿಸುತ್ತಿದ್ದ. ನಿಮಗೆ ಒಳ್ಳೇಯದ್ದುಆಗುತ್ತೆ ಅಂತೆಲ್ಲ ಹೇಳಿ ಲಕ್ಷಾಂತರ ಹಣವನ್ನ ಪೀಕುತ್ತಿದ್ದ. ಆತನ ಅಸಲಿಯತ್ತ ಜನರಿಗೆ ಗೊತ್ತಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಇದೀಗ ಡೊಂಗಿ ಬಾಬ ಸೇರಿದಂತೆ ಆರು ಜನರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಹೌದು ಸ್ವಯಂ ಘೋಷಿತ ದೇವ ಮಾನವ ಎಂದು ಭಕ್ತರನ್ನ ನಂಬಿಸಿ ಲಕ್ಷಾಂತರ ರೂ ಹಣ ವಸೂಲಿ ಮಾಡುತ್ತಿದ್ದ, ಡೋಂಗಿಬಾಬನ ವಿರುದ್ದ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಮುಖವಾಡ ಕಳಚಿ ಬೀಳುತ್ತಿದ್ದಂತೆ ನಕಲಿ ಬಾಬ ಚನ್ನಪಟ್ಟಣದಿಂದ ಕಾಲ್ಕಿತ್ತಿದ್ದಾನೆ. ಅಂದಹಾಗೆ ಪುಟ್ಟಭರ್ತಿಯ ಸಾಯಿಬಾಬಾರು ಸಾವನ್ನಪ್ಪುವುದಕ್ಕೂ ಮೊದಲು ನಾನು ಮುಂದೆ ಚನ್ನಪಟ್ಟಣದ ಮಳೂರಿನಲ್ಲಿ ಪ್ರೇಮಸಾಯಿಬಾಬಾ ನಾಗಿ ಜನಿಸುತ್ತೇನೆ ಎಂದು ಹೇಳಿದ್ರು. ಇದನ್ನೆ ಬಂಡವಾಳ ಮಾಡಿಕೊಂಡ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಸಚಿನ್ ಅಕಾರಂ ಸರ್ ಗರ್, ಎಂಬಾತ ಎಂಟು ತಿಂಗಳ ಕೆಳಗೆ ಪ್ರೇಮ ಸಾಯಿ ಬಾಬನ ರೂಪದಲ್ಲಿ ಬಂದ ಚನ್ನಪಟ್ಟಣದ ಮಂಡಿಪೇಟೆಯಲ್ಲಿರೋ ಯಶೋಧಮ್ಮ ಎಂಬ ಮಹಿಳೆಯ ಮನೆಯಲ್ಲಿ ಆಶ್ರಮ ಪಡೆದಿದ್ದ.
ಈ ವಿಚಾರ ತಿಳಿಯುತ್ತಿದ್ದಂತೆ ಸಾಕಷ್ಟು ಭಕ್ತರು ಆಗಮಸಿದ್ರು. ಪ್ರೇಮ ಸಾಯಿಬಾಬಾನಿಗೆ ಭಕ್ತರಾಗಿದ್ದರು. ಕೈಯಲ್ಲಿ ವಿಭೂತಿ ಕೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ. ಹೀಗಾಗಿ ಭಕ್ತರು ಮಾರಿ ಹೋಗಿದ್ರು. ಅದೇ ರೀತಿ ಸಿಂಧೂ ಎಂಬ ಮಹಿಳೆಗೂ ಖೆಡ್ಡಾಗೆ ಕೆಡವಿ, ಆಕೆಯ ತೋಟದ ಮನೆಯಲ್ಲಿ ಪ್ರತಿ ಗುರುವಾರ ಭಜನೆ ಮಾಡಲು ಅವಕಾಶ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ ಆಕೆಯಿಂದಲೇ ಒಂದೂವರೆ ಲಕ್ಷ ಹಣವನ್ನ ಪಿಕೀದ್ದ. ಅದೇ ರೀತಿ ವೆಂಕಟೇಶ್, ರಾಜೇಶ್, ಚನ್ನೇಗೌಡ ಸೇರಿದಂತೆ ಸಾಕಷ್ಟು ಜನರಿಂದಲೂ ಹಣವನ್ನ ಪಿಕೀದ್ದ. ಆದರೆ ಆನಂತರ ಆತ ಮದುವೆಯಾಗಿದ್ದಾನೆ. ಹಣ ವಸೂಲಿಗೆ ಬಂದಿದ್ದಾನೆ ಎಂಬ ವಿಚಾರ ಭಕ್ತರಿಗೆ ಗೊತ್ತಾಗಿದೆ. ಆತನ ಅಸಲಿ ವಿಚಾರ ಭಕ್ತರಿಗೆ ತಿಳಿಯುತ್ತಿದ್ದಂತೆ ಕಾಲು ಕಿತ್ತಿದ್ದಾನೆ. ಹೀಗಾಗಿ ಸಿಂಧೂ ಎಂಬ ಮಹಿಳೆ ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಮೋಸ ಹೋದ ಬಗ್ಗೆ ಏಳು ಜನರ ವಿರುದ್ದ ದೂರು ನೀಡಿದ್ದಾರೆ.
ಕರ್ನಾಟಕದ ಹಲವು ಮಠದ ಸ್ವಾಮೀಜಿಗಳ ಕಾಮ ಪುರಾಣ ಬಿಚ್ಚಿಟ್ಟ ಮಹಿಳೆ
ಅಂದಹಾಗೆ ಜನರ ಮುಗ್ಧತೆಯನ್ನ ಬಳಸಿಕೊಂಡು ಭಕ್ತರನ್ನ ಯಮಾರಿಸುತ್ತಿದ್ದ. ಆತನ ನಟನೆಗೆ ಚನ್ನಪಟ್ಟಣ ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಭಕ್ತರು ಮಾರು ಹೋಗಿದ್ದರು. ನಾನು ಸಾಯಿಬಾಬಾರ ಮೂರನೇ ಅವಾತರ ಎಂದೆಲ್ಲ ಹೇಳಿಕೊಂಡಿದ್ದ. ಹೀಗಾಗಿ ಸಾಕಷ್ಟು ಭಕ್ತರು ನಂಬಿದ್ದರು. ಇದಕ್ಕೆ ಬಂಡವಾಳ ಮಾಡಿಕೊಂಡು, ಇದುವರೆಗೂ ಭಕ್ತರಿಂದಲೇ ಕೋಟ್ಯಾಂತರೂ ಹಣವನ್ನ ವಸೂಲಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಒಂದೇ ಕುಟುಂಬದ ಮೂವರ ಸಾವು ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ
ಇನ್ನು ಜುಲೈ 13ರಂದು ಗುರುಪೌರ್ಣಮಿ ದಿನ ವಿಶೇಷ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾನೆ. ಆತ ಕೊಲ್ಲಾಪುರದಿಂದ ಭಕ್ತರಿಂದ ಅಸಲಿಯತ್ತ ತಿಳಿದಿದೆ. ಇನ್ನು ಪ್ರೇಮ ಸ್ವರೂಪಿಣಿ ಸಾಯಿ ಟ್ರಸ್ಟ್ ಮಾಡಿಕೊಂಡು ಹಣ ಪಿಕೀದ್ದಾನೆ. ಹೀಗಾಗಿ ಸಚಿನ್ ಅಕಾರಂ ಸರ್ ಗರ್, ವಿನಾಕ್ ರಾಜ್, ಯಶೊಧಮ್ಮ, ಉಮಾಶಂಕರ್, ಪ್ರಶಾಂತ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಇನ್ನು ಅಸಲಿಯತ್ತ ತಿಳಿಯುತ್ತಿದ್ದಂತೆ ಏಕಾಂತಕ್ಕೆ ಹೋಗುತ್ತೇನೆ ಎಂದು ಡೊಂಬಿಬಾಬ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಭಕ್ತರ ಮುಗ್ಧತೆಯನ್ನ ಬಳಸಿಕೊಂಡು ಯಮಾರಿಸುತ್ತಿದ್ದ ನಕಲಿ ಬಾಬಾನ ಮುಖವಾಡ ಕಳಚಿ ಬಿದ್ದಿದೆ.