* ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲು
* ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದ ಮಹಿಳೆ
* ಸ್ವಾಮೀಜಿ ವಿರುದ್ಧ ಕಲಂ 323, 324, 504 ಮತ್ತು 506 ದೂರು ದಾಖಲು
ಗಂಗಾವತಿ(ಮೇ.26): ಕಾಲೇಜಿನ ಅಡುಗೆ ಮಾಡುವ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆ ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿಯ ಕೊಟ್ಟೂರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಅಡುಗೆ ಮಾಡುತ್ತಿರುವ ಕಮಲಾಕ್ಷಿ ಅಲಿಯಾಸ್ ನಿರ್ಮಲಾ ಮಲ್ಲಯ್ಯಸ್ವಾಮಿ ಹಿರೇಜಂತಗಲ್ ಎನ್ನುವ ಮಹಿಳೆ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ.
ಗದಗ: ಆಂಟಿ ಮೋಹಕ್ಕೆ ಸಿಲುಕಿದ ರೌಡಿಶೀಟರ್: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಪಾಲಿಗೆ ವಿಲನ್!
ಕಮಲಾಕ್ಷಿಯು ಮೇ 21ರಂದು ಕಾಲೇಜಿನಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಬಸಲಿಂಗಮ್ಮ ದಿ. ಶಿವಾನಂದ ಎನ್ನುವರು, ನೀನು ಏಕೆ ಇಲ್ಲಿಗೆ ಬಂದಿಯಾ, ನಿನ್ನನ್ನು ಕಲ್ಮಠ ಸ್ವಾಮೀಜಿಗೆ ಹೇಳಿ ಮುಖ್ಯ ಅಡುಗೆದಾರರ ಕೆಲಸದಿಂದ ತೆಗೆದು ಹಾಕಿಸುತ್ತೇನೆ. ಸ್ವಾಮೀಜಿ ಬಳಿ ಪಿಸ್ತೂಲ್ ಇದೆ, ನಿನ್ನ ಗಂಡ ಮತ್ತು ಪುತ್ರನನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಕಮಲಾಕ್ಷಿ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಲೇಜಿನ ಗೇಟ್ ಬಳಿ ಇದ್ದ ಸ್ವಾಮೀಜಿಯು ಸಹ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರಿಂದ ನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟೂರು ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ವಾಮೀಜಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಕಲಂ 323, 324, 504 ಮತ್ತು 506 ದೂರು ದಾಖಲಾಗಿದೆ.