ಬೆಂಗಳೂರಲ್ಲಿ ಮತ್ತೊಬ್ಬ ನಕಲಿ ಎಸ್‌ಪಿ: ಬರೋಬ್ಬರಿ 2.5 ಕೋಟಿ ಪಂಗನಾಮ ಹಾಕಿದ ಖದೀಮ..!

By Girish Goudar  |  First Published Mar 14, 2023, 9:35 AM IST

ಆರೋಪಿ ಶ್ರೀನಿವಾಸ್ ವೆಂಕಟನಾರಾಯಣ ಎಂಬುವವರಿಗೆ ವಂಚನೆ ಮಾಡಿದ ಹಿನ್ನಲೆಯಲ್ಲಿ ನಕಲಿ ಎಸ್ಪಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಬೆಂಗಳೂರು(ಮಾ.14):  ತಾನು ಪ್ರೊಬೆಷನರಿ ಎಸ್ಪಿ ಎಂದು ವಂಚನೆ ಮಾಡುತ್ತಿರುವ ನಕಲಿ ಎಸ್ಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ಐಪಿಎಸ್ ಶ್ರೀನಿವಾಸ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಶ್ರೀನಿವಾಸ್ ನಗರದ ಕೆಲ ಠಾಣೆಗೆ ಹೋಗಿ ನಾನೇ ನಿಮ್ಮ ಸ್ಟೇಷನ್‌ಗೆ ಡಿಸಿಪಿ‌/ಎಸ್ಪಿಯಾಗಿ ಬರ್ತಿನಿ ಎಂದು ಸುಳ್ಳು ಹೇಳುತ್ತಿದ್ದನಂತೆ. 

ಆರೋಪಿ ಶ್ರೀನಿವಾಸ್ ಐಪಿಎಸ್ ಅಧಿಕಾರಿಗಳ ಎಂಬ್ಲಮ್ ಜೊತೆಗೆ ಖಡಖ್ ಖಾಕಿ ಧರಿಸಿ ಪೊಲೀಸ್ ಠಾಣೆಗಳಿಗೆ ಎಂಟ್ರಿ ಕೊಡ್ತಾನೆ. ಪ್ರೊಬೇಷನರಿ ಎಸ್ಪಿ ಹಾಗೂ ಐಪಿಎಸ್ ಎಂಬ್ಲಮ್ ನೋಡಿ ಪೊಲೀಸರೆ ಸೆಲ್ಯೂಟ್ ಹೊಡೀತಿದ್ರು. 
ಆರೋಪಿ ಶ್ರೀನಿವಾಸ್ ವೆಂಕಟನಾರಾಯಣ ಎಂಬುವವರಿಗೆ ವಂಚನೆ ಮಾಡಿದ ಹಿನ್ನಲೆಯಲ್ಲಿ ನಕಲಿ ಎಸ್ಪಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೆಂಕಟರಮಣಪ್ಪ ಎಂಬಾತನಿಂದ ವೆಂಕಟ ನಾರಾಯಣ ಅವರಿಗೆ ನಕಲಿ ಎಸ್ಪಿ ಶ್ರೀನಿವಾಸ್ ಪರಿಚಯವಾಗಿದ್ದನಂತೆ. ವೆಂಕಟ ನಾರಾಯಣ ಅವರಿಗೆ ಕಳೆದ ವರ್ಷ ಜೂನ್‌ನಲ್ಲಿ ಶ್ರೀನಿವಾಸ್ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಶ್ರೀನಿವಾಸ್ ಜೊತೆಗೆ ನಿವೃತ್ತ ಎಎಸೈ ಆಗಿರುವ ಮುತ್ತೇಗೌಡ ಜೊತೆಗೆ ದೂರುದಾರ ವೆಂಕಟನಾರಾಯಣ ತಿರುಪತಿಗೆ ಟ್ರಿಪ್‌ಗೆ ಹೋಗಿದ್ದರು. ಈ ವೇಳೆ ಶ್ರೀನಿವಾಸ್ ನಾನು ಬೆಂಗಳೂರು ನಗರದಲ್ಲಿ ಎಸ್ಪಿಯಾಗಿ ಕೆಲಸ ಮಾಡ್ತಿದ್ದೇನೆ ಎಂದಿದ್ದನು. 

Tap to resize

Latest Videos

ಬಾಯ್‌ಫ್ರೆಂಡ್‌ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್‌, ರೂಮ್‌ಅಲ್ಲಿ ಆಗಿದ್ದೇನು?

ಮಾತಿನ ಮಧ್ಯೆ ಮೈಸೂರಿನಲ್ಲಿ ಲ್ಯಾಂಡ್ ಲಿಟಿಗೇಷನ್ ಪ್ರಕರಣವನ್ನ ಹ್ಯಾಂಡಲ್ ಮಾಡುತ್ತಿದ್ದೇನೆ, ರೆವಿನ್ಯೂ ಕೆಲಸ ಬಾಕಿ ಇದೆ. 450 ಕೋಟಿ ಡೀಲಿಂಗ್ ಕೇಸ್‌ನಲ್ಲಿ 250‌ ಕೋಟಿ ಡೀಲ್ ಆಗುತ್ತೆ ಅಂತ ಹೇಳಿ ಶ್ರೀನಿವಾಸ್‌ ನಂಬಿಸಿದ್ದನು. ಈ ಸಂಬಂಧ 2.5 ಕೋಟಿ ಅವಶ್ಯಕತೆ ಇದೆ ಎಲ್ಲಿಯಾದರೂ ಅರೆಂಜ್ ಮಾಡಿಕೊಡಿ ಅಂತ ನಕಲಿ ಎಸ್ಪಿ ಶ್ರೀನಿವಾಸ್‌ ಹೇಳಿದ್ದನು. ಸ್ವಲ್ಪ ದಿನದ ಬಳಿಕ ಮತ್ತೆ ವೆಂಕಟನಾರಾಯಣನ ಸ್ನೇಹಿತ ವೆಂಕಟಣಪ್ಪ ಅವರ ಅಂಗಡಿಗೆ ಶ್ರೀನಿವಾಸ್‌ ಬಂದಿದ್ದನು. 

ಆರೋಪಿ ಶ್ರೀನಿವಾಸ್ ಇನ್ನೋವಾ ಕಾರಿನಲ್ಲಿ ಐಪಿಎಸ್ ಅಧಿಕಾರಿ ಯೂನಿಫಾರ್ಮ್‌ನಲ್ಲಿ ಬಂದಿದ್ದನು. ಈತ ಐಪಿಎಸ್ ಅಧಿಕಾರಿಯೇ ವೆಂಕಟನಾರಾಯಣ ಅವರು ನಂಬಿದ್ದರು. ವೆಂಕಟನಾರಾಯಣ ತಮ್ಮ ಸ್ನೇಹಿತರಿಂದಲೂ ಕೂಡ ಹಂತ ಹಂತವಾಗಿ 2.5 ಕೋಟಿ ಹಣವನ್ನ ಶ್ರೀನಿವಾಸ್‌ಗೆ ನೀಡಿದ್ದರು.  

ಹಣ ಕೈ ಸೇರುತ್ತಿದ್ದಂತೆ ನಕಲಿ ಎಸ್ಪಿ ಶ್ರೀನಿವಾಸ್‌ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಇದರಿಂದ ಗಾಬರಿಯಾದ ವೆಂಕಟರಮಣಪ್ಪ  ಅವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಶ್ರೀನಿವಾಸ್ ಮಾತ್ರ ಪತ್ತೆಯಾಗಿಲ್ಲ. ಕೆಲ ಪೊಲೀಸ್ ಅಧಿಕಾರಿಗಳ ಬಳಿ ಕೇಳಿದಾಗ ಈತ ನಕಲಿ ಎಸ್ಪಿ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

click me!