• ಕಾಲೇಜು ಬಳಿಯ ಬಸ್ ನಿಲ್ದಾಣ ಬಳಿ ಕಾಲೇಜು ವಿದ್ಯಾರ್ಥಿಗಳ ಗಲಾಟೆ
• ಹರಿತವಾದ ಕಟರ್‌ನಿಂದ ಹಲ್ಲೆ, ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
• ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ
ಬೆಳಗಾವಿ (ಆ.01): ಯುವತಿ ವಿಚಾರಕ್ಕೆ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಗುಂಪು ಪರಸ್ಪರ ಬಡಿದಾಡಿಕೊಂಡ ಘಟನೆ ಕಾಲೇಜು ರಸ್ತೆಯಲ್ಲಿರುವ ಬಸ್ ನಿಲ್ದಾಣ ಬಳಿ ನಡೆದಿದೆ. ಕಾಲೇಜು ಬಿಡುತ್ತಿದ್ದಂತೆ ಬಸ್ ನಿಲ್ದಾಣ ಬಳಿ ಸೇರಿದ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ.
ಈ ವೇಳೆ ಹರಿತವಾದ ಕಟರ್‌ನಿಂದ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ನಿವಾಸಿ ಶ್ರೀಹರಿ ತವಗಮಠ ಎಂಬ ವಿದ್ಯಾರ್ಥಿಯ ಬೆನ್ನಿಗೆ ಇರಿದಿದ್ದು ಗಾಯಗೊಂಡಿದ್ದಾನೆ. ಘಟನೆಯಲ್ಲಿ ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ಪರಶುರಾಮ ಗಾಡಿವಡ್ಡರ ಎಂಬಾತನಿಗೂ ಗಾಯವಾಗಿದ್ದು, ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ವಂತ ಚಿಕ್ಕಮ್ಮನ ಮಗನ ಜೀವ ತೆಗೆದು ಅಮಾಯಕನಂತಿದ್ದ ಐನಾತಿ ಡಾಕ್ಟರ್ ಅಂದರ್
ಕುಲ್ಲಕ್ಷ ಕಾರಣಕ್ಕೆ 2 ಗ್ರಾಮದ ಜನರ ನಡುವೆ ಗಲಾಟೆ: ಕುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ಜನರ ನಡುವೆ ಗಲಾಟೆಯಾಗಿ ದೊಣ್ಣೆ ರಾಡುಗಳಿಂದ ಬಡಿದಾಡಿಕೊಂಡು ಮನೆಗಳ ಮೆಲೆ ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ಕಾರಂಗಿ ಮತ್ತು ಕನ್ನಂಪಲ್ಲಿ ಗ್ರಾಮಸ್ಥರ ನಡುವೆ ನಡೆದಿದ್ದು, ಗಲಭೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರು ಅಡ್ಡ ನಿಲ್ಲಿಸಿದ್ದೇ ಗಲಭೆಗೆ ಕಾರಣ: ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದ ಕಾರು ತೆಗೆಯುವಂತೆ ಕಾರಂಗಿ ಗ್ರಾಮದ ಜೆಸಿಬಿ ಚಾಲಕ ಶ್ರೀನಿವಾಸ್ ಎನ್ನುವರು ಹೇಳಿದ್ದು ಇದಕ್ಕೆ ಕಾರು ಮಾಲಿಕ ಹಾಗೂ ಕನಂಪಲ್ಲಿ ಪಂಚಾಯಿತಿ ಸದಸ್ಯ ರಮೇಶ್ ಕಾರು ತೆಗೆಯದೆ ಪ್ರತಿಕ್ರಿಯೂ ನೀಡದ ಹಿನ್ನಲೆಯಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಕಾರು ಮಾಲಿಕ ರಮೇಶ್ ಕಡೆಯವರು ಹೋಗಿ ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಕಲ್ಲು, ದೊಣ್ಣೆ, ರಾಡುಗಳಿಂದ ದಾಳಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಜೆಸಿಬಿಯನ್ನು ಜಕಂ ಗೊಳಿಸಿದ್ದು ಶ್ರೀನಿವಾಸ್ ಸಹೋದರ ಗಂಗಾಧರ್ ಅವರ ತಾಯಿ ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ರಮೇಶ್ ಹಿಂಬಾಲಕರಾದ ಅಂಜಪ್ಪ ಸೇರಿದಂತೆ ಐದಾರು ಮಂದಿಗೂ ಗಾಯಗಳಾಗಿದೆ. ಈ ಸಂಬಂಧ ಎರಡು ಕಡೆಯವರು ಪರಸ್ಪರ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶ್ರೀನಿವಾಸಪುರದ ಠಾಣಾಧಿಕಾರಿ ನಾರಾಯಣಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ಮಾಹಿತಿ ಪಡೆದಿದ್ದಾರೆ.
ಮೊಬೈಲ್ ಬದಲಿಗೆ ಸೋನ್ ಪಾಪಡಿ ಕಳುಹಿಸಿ ರೈತನಿಗೆ ಮೋಸ
ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಭೇಟಿ: ಎರಡು ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದು ಗಾಯಗೊಂಡಿರುವ ಕಾರಂಗಿ ಗ್ರಾಮದ ಜೆಸಿಬಿ ಚಾಲಕ ಶ್ರೀನಿವಾಸ್, ಸಹೋದರ ಗಂಗಾಧರ್ ಅವರ ತಾಯಿ ಆರೋಗ್ಯ ವಿಚಾರಿಸಲು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು.