Tamil Nadu: ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಬಿಸಾಡಿದ 11ನೇ ಕ್ಲಾಸ್‌ ಬಾಲಕಿ: 10ನೇ ತರಗತಿ ಬಾಲಕ ಸೆರೆ

By BK Ashwin  |  First Published Sep 5, 2022, 9:52 AM IST

ಶಾಲಾ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿ, ಆ ಮಗುವಿನ ಶವವನ್ನು ಬಿಸಾಡಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ನಂತರ, ಬಾಲಕಿ ಗರ್ಭ ಧರಿಸುವಂತೆ ಮಾಡಿದ ಮತ್ತೊಂದು ಶಾಲೆಯ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 


ತಮಿಳುನಾಡಿನ (Tamil Nadu) ಕಡಲೂರು (Cuddalore) ಜಿಲ್ಲೆಯ ಭುವನಗಿರಿ ಎಂಬ ಗ್ರಾಮದಲ್ಲಿ 11ನೇ ತರಗತಿಯ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲದೆ, ಆ ಮಗುವನ್ನು ಆ ಶಾಲೆಯ ಬಳಿಯ ಪೊದೆಯಲ್ಲಿ ಬಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ,  16 ವರ್ಷದ ಬಾಲಕಿಯನ್ನು ಗರ್ಭ ಧರಿಸುವಂತೆ ಮಾಡಿದ 10ನೇ ತರಗತಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.  ಸರಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ (Government Girl’s Secondary Higher School) ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗುರುವಾರ ಪೊದೆಯಲ್ಲಿ ನವಜಾತ ಶಿಶುವಿನ ಶವವನ್ನು ಕಂಡು ಸಹಾಯಕ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ, ಪೊಲೀಸ್ ತಂಡವು ಶಾಲೆಗೆ ಧಾವಿಸಿ, ಮಗುವಿನ ಶವವನ್ನು ತೆಗೆದುಕೊಂಡು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಚಿದಂಬರಂನ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆ, ಶಾಲೆಯ ವಿದ್ಯಾರ್ಥಿನಿಯೊಬ್ಬಳು (School Girl) ಆ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ (Rest Room) ಮಗುವಿಗೆ ಜನ್ಮ ನೀಡಿ ಪೊದೆಗೆ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ನಂತರ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಈ ಸಮಯದಲ್ಲಿ, ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಎಸೆದಿರುವುದಾಗಿ ಶುಕ್ರವಾರ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾಳೆ. ಹಾಗೆ, ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಬಾಯ್‌ ಫ್ರೆಂಡ್‌ ಈ ಘಟನೆಗೆ ಕಾರಣ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಈ ಸಂಬಂಧ ಪೊಲೀಸರು ಸೆಕ್ಷನ್ 5, 5 (ಜೆ), 5 (ಜೆ) (ii), 2012 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ 5 (ಎಲ್) ಮತ್ತು 6 - ಹೀಗೆ ನಾನಾ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕನ ವಿರುದ್ಧ ಕೇಸ್‌ ದಾಖಲಿಸಿ ಬಂಧಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: ಜಾರ್ಖಂಡ್‌ ಬುಡಕಟ್ಟು ಬಾಲಕಿ ರೇಪ್‌, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ

ನಂತರ, ಬಾಲಕನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಆತನನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಇನ್ನೊಂದೆಡೆ, ಬಾಲಕಿಯನ್ನು ಚಿಕಿತ್ಸೆಗಾಗಿ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನಿರ್ಲಕ್ಷ್ಯದ ಹೆರಿಗೆಯಿಂದ ಮಗು ಸಾವು..!
ಗುರುವಾರ ತರಗತಿಗೆ ಹಾಜರಾಗುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿತು. ಈ ಹಿನ್ನೆಲೆ ಶೌಚಾಲಯಕ್ಕೆ ಹೋದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. "ಅಲ್ಲಿ, ತಾನು ಮಗುವಿಗೆ ಜನ್ಮ ನೀಡಿದೆ. ಆದರೆ, ಆ ವೇಳೆ ಮಗು ಸತ್ತಿತ್ತು (Still Birth) ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆದರೆ, ಹೆರಿಗೆಯ ಸಮಯದಲ್ಲಿ ಯಾರೂ ಸಹಾಯ ಮಾಡದ ಕಾರಣ ಮಗು ಸಾವನ್ನಪ್ಪಿರಬಹುದು ಎಂದು ನಾವು ಅನುಮಾನಿಸುತ್ತೇವೆ. ಹಾಗೆ,ಆರಂಭಿಕ ಹೇಳಿಕೆಯಂತೆ ಬಾಲಕಿ ಪೆನ್ನನ್ನು ಬಳಸಿ ಹೊಕ್ಕುಳಬಳ್ಳಿಯನ್ನು (Umbilical Cord) ಕತ್ತರಿಸಿ ಮತ್ತೆ ತರಗತಿಗೆ ಬಂದಿದ್ದಾಳೆ’’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೊಂದೆಡೆ, ತಾನು ಗರ್ಭಿಣಿ ಎಂದು ತನ್ನ ಕುಟುಂಬದ ಯಾರಿಗೂ ತಿಳಿದಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾಳೆ. ಈ ಹಿನ್ನೆಲೆ ಶನಿವಾರ ಪೊಲೀಸರು ಆಕೆಯ ಸಂಬಂಧಿಕರು ಮತ್ತು ಗ್ರಾಮಸ್ಥರು ಸೇರಿದಂತೆ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘ ಮುಖಂಡನ ಪತ್ನಿ

click me!