ಕ್ರಿಸ್‌ಮಸ್ ಹಬ್ಬದ ಖುಷಿಗೆ ಎಣ್ಣೆಪಾರ್ಟಿ; ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಚ್ಚಿ ಕೊಂದ ಪಾಪಿಗಳು!

By Ravi Janekal  |  First Published Dec 25, 2023, 11:16 PM IST

ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ತುಮಕೂರಿನ ಭೀಮಸಂದ್ರ ಬಳಿಯ ಬೆತ್ತಲೂರಿನಲ್ಲಿ ನಡೆದಿದೆ. ನಿರಂಜನ್ (35), ಕೊಲೆಯಾದ ಮೃತ ದುರ್ದೈವಿ. ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡ್ತಿದ್ದ ನಿರಂಜನ್. ಕೊಲೆ ಆರೋಪಿ ಮಧು ರೌಡಿ ಶೀಟರ್ ಎಂದು ಹೇಳಲಾಗಿದೆ.


ತುಮಕೂರು (ಡಿ.25): ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ತುಮಕೂರಿನ ಭೀಮಸಂದ್ರ ಬಳಿಯ ಬೆತ್ತಲೂರಿನಲ್ಲಿ ನಡೆದಿದೆ.

ನಿರಂಜನ್ (35), ಕೊಲೆಯಾದ ಮೃತ ದುರ್ದೈವಿ. ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡ್ತಿದ್ದ ನಿರಂಜನ್. ಕೊಲೆ ಆರೋಪಿ ಮಧು ರೌಡಿ ಶೀಟರ್ ಎಂದು ಹೇಳಲಾಗಿದೆ.

Tap to resize

Latest Videos

undefined

 ಇಂದು ಕ್ರಿಸ್ಮಸ್ ಹಬ್ಬದ ಹಿನ್ನೆಲೆ. ಸ್ನೇಹಿತರೆಲ್ಲರು ಸೇರಿ ಎಣ್ಣೆ ಪಾರ್ಟಿ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಸ್ನೇಹಿತರೆಲ್ಲ ಒಂದೆಡೆ ಸೇರಿ ಎಣ್ಣೆ ಪಾರ್ಟಿಗೆ ಕುಳಿತಿದ್ದರು. ಈ ವೇಳೆ ಬೆತ್ತಲೂರು ನಿವಾಸಿಗಳಾದ ಮಧು, ಹಾಗೂ ನಿರಂಜನ ನಡುವೆ ಶುರುವಾದ ಜಗಳ. ಕಂಠಪೂರ್ತಿ ಕುಡಿದಿದ್ದ ಇಬ್ಬರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಕುಡಿದ ಮತ್ತಿನಲ್ಲಿ ಮಧು ಹಾಗೂ ಸಹಚರರು ನಿರಂಜನ್ ಎಂಬುವವನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದಾರೆ. ಕೊಲೆ ಬಳಿಕ ಎಸ್ಕೇಪ್ ಆಗಿರುವ ಆರೋಪಿಗಳು.

ಎಣ್ಣೆ ಪಾರ್ಟಿಯಲ್ಲಿ ನೀರು ಕೊಡದಿದ್ದಕ್ಕೆ ಸ್ನೇಹಿತರ ನಡುವೆ ಗಲಾಟೆ; ಚೂರಿ ಇರಿದು ಕೊಂದ ಕ್ರೂರಿಗಳು!

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದರು. ಕೊಲೆ ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಂದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

ಏಷ್ಯಾ ಮಾಲ್‌ಗೆ ನುಗ್ಗಿ ಗಲಾಟೆ ಆರೋಪ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಅರ್!

click me!