ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್‌ ಪೀಸ್‌ ಮಾಡಿ ಫ್ಲೈಓವರ್‌ ಬಳಿ ಎಸೆದ ಪಾಪಿ!

Published : Jul 12, 2023, 01:19 PM ISTUpdated : Jul 12, 2023, 01:20 PM IST
ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್‌ ಪೀಸ್‌ ಮಾಡಿ ಫ್ಲೈಓವರ್‌ ಬಳಿ ಎಸೆದ ಪಾಪಿ!

ಸಾರಾಂಶ

ದೆಹಲಿ ಪೊಲೀಸರು ಬುಧವಾರ ಯಮುನಾ ಖಾದರ್ ಪ್ರದೇಶದ ಗೀತಾ ಕಾಲೋನಿ ಫ್ಲೈಓವರ್ ಬಳಿ ಕತ್ತರಿಸಿದ ದೇಹದ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನು ಪೀಸ್‌ ಪೀಸ್‌ ಮಾಡಲಾಗಿದ್ದು, ಮೃತದೇಹದ ಕೆಲ ಭಾಗಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ದೆಹಲಿ (ಜುಲೈ 12, 2023): ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವರ್ಷ ನಡೆದ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ ಘಟನೆ ಮರೆ ಮಾಸುವ ಮುನ್ನವೇ ಈಗ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಬುಧವಾರ ಯಮುನಾ ಖಾದರ್ ಪ್ರದೇಶದ ಗೀತಾ ಕಾಲೋನಿ ಫ್ಲೈಓವರ್ ಬಳಿ ಕತ್ತರಿಸಿದ ದೇಹದ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನು ಪೀಸ್‌ ಪೀಸ್‌ ಮಾಡಲಾಗಿದ್ದು, ಮೃತದೇಹದ ಕೆಲ ಭಾಗಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಮೃತದೇಹ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂಬುದು ಆರಂಭದಲ್ಲಿ ತಿಳಿದುಬರಲಿಲ್ಲವಾದರೂ, ನಂತರ ಇದು ಮಹಿಳೆಯದ್ದೇ ಮೃತದೇಹ ಎಂದು ಕಂಡುಕೊಳ್ಳಲಾಗಿದೆ.

ಈ ಸಂಬಂಧ ಆರಂಭದಲ್ಲಿ ಮಾಹಿತಿ ನೀಡಿದ ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ, "ಪ್ರಾಥಮಿಕವಾಗಿ, ಇದು ಸುಮಾರು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ದೇಹವಾಗಿದೆ ಎಂದು ತಿಳಿದುಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಅಪರಾಧ ತಂಡ ಸ್ಥಳದಲ್ಲಿದ್ದಾರೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೃತದೇಹದ ಪೂರ್ವಾಪರಗಳನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ’’ ಎಂದು ಡಿಸಿಪಿ ತಿಳಿಸಿದ್ದಾರೆ. ಅಲ್ಲದೆ, ಮೃತದೇಹ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಆರ್ಥೋ ಫೋರೆನ್ಸಿಕ್ಸ್ ಪರಿಶೀಲಿಸುತ್ತದೆ ಮತ್ತು ಇತರ ಸಾಕ್ಷ್ಯಗಳಿಗಾಗಿ ಪ್ರದೇಶದಲ್ಲಿ ಶೋಧ ನಡೆಯುತ್ತಿದೆ ಎಂದೂ ಕಲ್ಸಿ ತಿಳಿಸಿದ್ದಾರೆ.

ಇದನ್ನು ಓದಿ: ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್‌, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್‌

ಅಲ್ಲದೆ, ಈ ಸಂಬಂಧ ಕೇಂದ್ರ ಶ್ರೇಣಿಯ ಜಂಟಿ ಪೊಲೀಸ್ ಕಮಿಷನರ್ ಪರಮಾದಿತ್ಯ ಅವರು ಬುಧವಾರ ಮಾತನಾಡಿದ್ದು “ನಮಗೆ ಎರಡು ಕಪ್ಪು ಪಾಲಿಥಿನ್ ಕವರ್‌ಗಳು ಸಿಕ್ಕಿವೆ. ಒಂದು ಕವರ್‌ ದೇಹದ ತಲೆಯನ್ನು ಹೊಂದಿರುತ್ತದೆ ಮತ್ತು ಇನ್ನೊಂದು ದೇಹದ ಭಾಗಗಳನ್ನು ಹೊಂದಿರುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಉದ್ದ ಕೂದಲು ಪತ್ತೆಯಾಗಿದ್ದು, ದೇಹ ಕೊಳೆತಿರುವುದರಿಂದ ಕೂದಲಿನ ಕಾರಣ ಮಹಿಳೆ ಎಂದು ಭಾವಿಸುತ್ತಿದ್ದೇವೆ’’ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಸುದ್ದಿಗಾರರೊಂದಿಗೆ ಮಾತನಾಡಿದ ಪರಮಾದಿತ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಇನ್ನೂ ಗುರುತು ಪತ್ತೆಯಾಗಿಲ್ಲ. ಕವರ್‌ಗಳಲ್ಲಿ ಎಷ್ಟು ದೇಹದ ಭಾಗಗಳು ಪತ್ತೆಯಾಗಿವೆ ಮತ್ತು ದೇಹದ ಯಾವುದೇ ಭಾಗಗಳು ಕಾಣೆಯಾಗಿದೆಯೇ ಎಂದು ಪೊಲೀಸರಿಗೆ ಖಚಿತವಾಗಿಲ್ಲ ಎಂದೂ ಅವರು ಹೇಳಿದರು. ಈ ಹಿನ್ನೆಲೆ ಮೃತ ಮಹಿಳೆಯನ್ನು ಪೊಲೀಸರು ಇನ್ನೂ ಗುರುತಿಸಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್‌ ಮಾಡಿದ ಕಾಲಿವುಡ್ ನಟ ಅರೆಸ್ಟ್‌; ನೆಟ್ಟಿಗರ ವಿರೋಧ

ಬುಧವಾರ ಪೂರ್ವ ದೆಹಲಿಯ ಗೀತಾ ಕಾಲೋನಿ ಮೇಲ್ಸೇತುವೆ ಬಳಿ ಮಹಿಳೆಯೊಬ್ಬರ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬೆಳಗ್ಗೆ 9:15ರ ಸುಮಾರಿಗೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಎಂದು ತಿಳಿದುಬಂದಿದೆ. ದೇಹದ ಭಾಗಗಳು ಫ್ಲೈಓವರ್ ಬಳಿ ಹಲವೆಡೆ ಚೆಲ್ಲಾಪಿಲ್ಲಿಯಾಗಿವೆ. ದೇಹದ ಉಳಿದ ಭಾಗಗಳನ್ನು ಪತ್ತೆ ಹಚ್ಚಲು ಫ್ಲೈಓವರ್ ಬಳಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ಕೆಲವು ತಿಂಗಳುಗಳಿಂದ ಇಂತಹ ಹತ್ಯೆ ಪ್ರಕರಣಗಳ ಸಾಕಷ್ಟು ವರದಿಯಾಗುತ್ತಿದೆ. ಹಾಗೆ, ಈ ಘಟನೆಯು ಶ್ರದ್ಧಾ ವಾಕರ್ ಪ್ರಕರಣದ ಭಯಾನಕ ನೆನಪುಗಳನ್ನು ಮರಳಿ ತಂದಿದ್ದು, ಇದು ಕಳೆದ ವರ್ಷ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ವಾಕರ್ ಅವರ 28 ವರ್ಷದ ಲಿವ್-ಇನ್ ಪಾಲುದಾರ ಅಫ್ತಾಬ್ ಪೂನಾವಾಲಾ ಆಕೆಯ ಕತ್ತು ಹಿಸುಕಿ, ಆಕೆಯ ದೇಹವನ್ನು 30 ಕ್ಕೂ ಹೆಚ್ಚು ಭಾಗಗಳಾಗಿ ಕತ್ತರಿಸಿ ಮುಂದಿನ ಎರಡು-ಮೂರು ತಿಂಗಳುಗಳ ಕಾಲ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮುದ್ದು ಕಂದಮ್ಮನ ಮೇಲೆ ಕಾರು ಹತ್ತಿಸಿ ಮಗಳ ಸಾವಿಗೆ ಕಾರಣವಾದ ತಾಯಿ: ಜರ್ಝರಿತವಾದ ಕುಟುಂಬ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?