Chitradurga: 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ರಿಕವರಿ ಮಾಡಿದ ಚಿತ್ರದುರ್ಗ ಪೊಲೀಸ್ ಪಡೆ

By Suvarna NewsFirst Published Dec 31, 2022, 7:03 PM IST
Highlights

ಕಳ್ಳತನವಾಗಿದ್ದ 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು  ಕಳ್ಳರಿಂದ ರಿಕವರಿ ಮಾಡಿರುವ  ಪೊಲೀಸರು ಕಾರ್ಯಕ್ಕೆ ಕೋಟೆನಾಡಿನ ನಾಗರೀಕರು ಫುಲ್ ಫಿದಾ ಆಗಿದ್ದಾರೆ. ಕಳೆದುಕೊಂಡಿದ್ದ ಆಭರಣಗಳನ್ನು ಮರಳಿ ಕೊಟ್ಟಿದ್ದಕ್ಕೆ ಪೊಲೀಸರಿಗೆ ಚಿತ್ರದುರ್ಗ ಜನ ಧನ್ಯವಾದ ತಿಳಿಸಿದ್ದಾರೆ. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.31): ಅದೊಂದು ಐತಿಹಾಸಿಕ ನಗರವಾಗಿದ್ದು ಅಲ್ಲಿ ಕಳ್ಳರ ಹಾವಳಿಗೆ ನಾಗರೀಕರು ತತ್ತರಿಸಿ ಹೋಗಿದ್ರು. ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಲು ಹಿಂದೇಟು ಹಾಕ್ತಿದ್ದೂ, ಸ್ಮಶಾನಕ್ಕೆ ಹೋದ ಹೆಣ ಹಾಗು ಕಳ್ಳರ ಕೈಗೆ ಸಿಕ್ಕ ಹಣ ವಾಪಾಸ್ ಬರಲ್ಲವೆಂಬ ಮಾತಿತ್ತು. ಆದ್ರೆ ಕಳ್ಳತನವಾಗಿದ್ದ 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು  ಕಳ್ಳರಿಂದ ರಿಕವರಿ ಮಾಡಿರುವ  ಪೊಲೀಸರು ಕಾರ್ಯಕ್ಕೆ ಕೋಟೆನಾಡಿನ ನಾಗರೀಕರು ಫುಲ್ ಫಿದಾ ಆಗಿದ್ದಾರೆ. 

ಫೋಟೋದಲ್ಲಿ ಹೀಗೆ ಕಣ್ಣು ಕುಕ್ಕುವಂತಿರುವ ಬೆಳ್ಳಿ, ಬಂಗಾರದ ಆಭರಣಗಳು. ಸಾಲಾಗಿ ಜೋಡಿಸಿರೊ ನೋಟಿನ ಕಂತೆಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗದ ಡಿಎಆರ್ ಪೊಲೀಸ್ ಮೈದಾನ.  ಕಳೆದ‌ ಒಂದು ವರ್ಷದಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳ್ಳರ ಹಾವಳಿ ವಿಪರೀತವಾಗಿದೆ. ಬೀಗ ಹಾಕಿದ‌ ಮನೆಗಳು ಹಾಗು ನಿರ್ಜನ ಪ್ರದೇಶದಲ್ಲಿರುವ ದೇಗುಲ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಖತರ್ನಾಕ್ ಕಳ್ಳರ 162 ಪ್ರಕರಣಗಳಿಂದ ಒಟ್ಟು 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗು  ಹಣವನ್ನು ರಿಕವರಿ ಮಾಡಿಕೊಳ್ಳುವಲ್ಲಿ ಚಿತ್ರದುರ್ಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಉಪ ವಿಭಾಗದಲ್ಲಿ 72, ಹಿರಿಯೂರು 25, ಚಳ್ಳಕೆರೆ 24 ಮತ್ತು ಸೈಬರ್‌ ಠಾಣೆಯಲ್ಲಿ 41 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅದರಲ್ಕೂ 40ಕ್ಕೂ ಹೆಚ್ಚು ಸೈಬರ್‌ ವಂಚನೆ ಸೇರಿದಂತೆ ವಿವಿಧ  ವಿಶೇಷ 25ಪ್ರಕರಣಗಳನ್ನು ಭೇದಿಸಿದ್ದಾರೆಂದು ಚಿತ್ರದುರ್ಗ ಎಸ್ಪಿ ಪರಶುರಾಮ್ ತಿಳಿಸಿದ್ದಾರೆ.

Raichur: ಮೂಗು ಸಮಸ್ಯೆ ಎಂದು ರಿಮ್ಸ್ ಆಸ್ಪತ್ರೆಗೆ ದಾಖಲಾದ ಯುವತಿ ಆಪರೇಷನ್ ಬಳಿಕ ಸಾವು!

ಇನ್ನು  ಕೋಟೆನಾಡಿನ ಪೊಲೀಸರ ಕಾರ್ಯಾಚರಣೆಯಿಂದ   ಚಿತ್ರದುರ್ಗದ ಮಹಿಳೆಯರು ಹಾಗೂ ನಾಗರೀಕರಲ್ಲಿ ಬಾರಿ ಸಂತಸ ಮನೆ ಮಾಡಿದೆ. ಅಲ್ಲದೇ ಕಳ್ಳತನವಾಗಿದ್ದ ಆಭರಣಗಳನ್ನು ಪೊಲೀಸರಿಂದ ಹಿಂಪಡೆಯಲು  ಆಗಮಿಸಿದ್ದ ವಾರಸ್ದಾರರು  ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ರು. ಜಿಲ್ಲೆಯ ಪೊಲೀಸರು ನಮ್ಮ ರಕ್ಷಣೆಗೆ ನಿಂತಿದ್ದಾರೆಂಬ ಭರವಸೆ ಮೂಡಿಸಿದ್ದಾರೆಂದು ಮನಸಾರೆ ಶ್ಲಾಘಿಸಿದ್ರು.

CRIME NEWS: ಮನೆ ಬಾಡಿಗೆಗೆ ಮನೆ ಕೊಟ್ಟಿದ ತಪ್ಪಿಗೆ ಕೊಲೆಯಾದ ವೃದ್ಧೆ

ಒಟ್ಟಾರೆ ಕೋಟೆನಾಡಲ್ಲಿ ಕಳ್ಳರ ‌ಕೈಚಳಕದಿಂದ ಜನರು ಕಂಗಾಲಾಗಿದ್ದರು. ಮತ್ತೆ ಕಳ್ಳತನವಾಗಿರೊ ನಮ್ ಒಡವೆ ಹಾಗು ಹಣ ಸಿಗಲ್ಲವೆಂದು ತೀರ್ಮಾನಿಸಿದ್ರು. ಆದ್ರೆ ಪೊಲೀಸರ ವರ್ಷದ ಕೊನೆಯ  ಭರ್ಜರಿ ಕಾರ್ಯಚರಣೆಯಿಂದಾಗಿ  ಕೋಟೆನಾಡಿನ ಜನರು ಸಂತಸಗೊಂಡಿದ್ದಾರೆ.

click me!