ಮೂಗು ಸಮಸ್ಯೆ ಎಂದು ಆಸ್ಪತ್ರೆಗೆ ದಾಖಲಾದ ಯುವತಿ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ರಿಮ್ಸ್ ಆಸ್ಪತ್ರೆ ವೈದ್ಯರ ಯಡವಟ್ಟಿನಿಂದ ರಾಯಚೂರು ನಗರದ ರಾಜೇಶ್ವರಿ ಎಂಬ ಯವತಿ ಸಾವನ್ನಪ್ಪಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು (ಡಿ.31): ಮೂಗು ಸಮಸ್ಯೆ ಎಂದು ಆಸ್ಪತ್ರೆಗೆ ದಾಖಲಾದ ಯುವತಿ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ರಿಮ್ಸ್ ಆಸ್ಪತ್ರೆ ವೈದ್ಯರ ಯಡವಟ್ಟಿನಿಂದ ರಾಯಚೂರು ನಗರದ ರಾಜೇಶ್ವರಿ (18 ) ಸಾವನ್ನಪ್ಪಿದ್ದು, ರಿಮ್ಸ್ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ ದಿಂದ ಯುವತಿ ಸಾವು ಎಂದು ಆರೋಪಿಸಿದ್ದು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೃದಯಾಘಾತಕ್ಕೊಳಗಾದ ಚಾಲಕ; ನಿಯಂತ್ರಣ ತಪ್ಪಿ ಎಸ್‌ಯುವಿಗೆ ಗುದ್ದಿದ ಬಸ್: 9 ಜನರ ದಾರುಣ
undefined
ಪೋಷಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆದಿದೆ. ಪೋಷಕರ ಪ್ರತಿಭಟನೆ ಸ್ಥಳಕ್ಕೆ ರಿಮ್ಸ್ ಆಸ್ಪತ್ರೆ ಮುಖ್ಯಸ್ಥ ಬಸವರಾಜ್ ಪೀರಾಪೂರು ಭೇಟಿ ನೀಡಿ ಪೋಷಕರ ಮನವೊಲಿಸಲು ಯತ್ನಿಸಿದರು. ಆದರೆ ಡೀನ್ ಮಾತಿಗೂ ಕೇರ್ ಮಾಡದೇ ಯುವತಿ ಪೋಷಕರು ನೋವು ಹಾರಹಾಕಿದ್ದಾರೆ. ವೈದ್ಯ ರಾಜಶೇಖರ್ ಪಾಟೀಲ್ ಮೇಲೆ ರಾಜೇಶ್ವರಿ ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ.
ಬೆಂಗಳೂರು: ಹಳೆ 500 ನೋಟು ಬದಲಿಗೆ ಯತ್ನ, 3 ಏಜೆಂಟ್‌ಗಳು ಬಲೆಗೆ
ರಿಮ್ಸ್ ನಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದ ಮೃತ ರಾಜೇಶ್ವರಿ: ಮೃತ ರಾಜೇಶ್ವರಿ ರಿಮ್ಸ್ ನಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದರು. ರಿಮ್ಸ್ ನಲ್ಲಿ ಸೀಟ್ ಸಿಕ್ಕಿದೆ ಎಂಬ ಕಾರಣಕ್ಕೆ ರಾಜೇಶ್ವರಿ ಅದೇ ಆಸ್ಪತ್ರೆಗೆ ದಾಖಾಲಾಗಿದ್ದರು. ಜನವರಿ 10ಕ್ಕೆ ಮೃತ ರಾಜೇಶ್ವರಿ ನರ್ಸಿಂಗ್ ಅಡ್ಮೀಷನ್ ಮಾಡಿಸಬೇಕಿತ್ತು. ಆದರೆ ಅದಕ್ಕು ಮುನ್ನ ಮೂಗಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನ ದಾಖಲು ಮಾಡಿಕೊಂಡ ರಿಮ್ಸ್ ಆಸ್ಪತ್ರೆ ವೈದ್ಯರು ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ ಯುವತಿ ಮೃತಪಟ್ಟಿದ್ದಾಳೆ.