ಸಹೋದರ ಅಂದ್ರೆ ಅಕ್ಕನ ಬದುಕಿಗೆ ಬೆಂಗಾವಲಾಗಿ ಇರ್ತಾನೆ ಎಂಬ ನಂಬಿಕೆ ಎಲ್ಲಾ ಹೆಣ್ಣು ಮಕ್ಕಳಲ್ಲಿದೆ. ಆದ್ರೆ ಇಲ್ಲೋರ್ವ ಸಹೋದರಿ ತನ್ನ ಗಂಡನೊಂದಿಗೆ ಸೇರಿ ಸ್ವಂತ ತಮ್ಮನನ್ನೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ವರದಿ: ಕಿರಣ್ ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.17): ಸಹೋದರ ಅಂದ್ರೆ ಅಕ್ಕನ ಬದುಕಿಗೆ ಬೆಂಗಾವಲಾಗಿ ಇರ್ತಾನೆ ಎಂಬ ನಂಬಿಕೆ ಎಲ್ಲಾ ಹೆಣ್ಣು ಮಕ್ಕಳಲ್ಲಿದೆ. ಆದ್ರೆ ಇಲ್ಲೋರ್ವ ಸಹೋದರಿ ತನ್ನ ಗಂಡನೊಂದಿಗೆ ಸೇರಿ ಸ್ವಂತ ತಮ್ಮನನ್ನೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ತಮ್ಮನ ಕೊಲೆಯಾಗಿದ್ದಾದ್ರು ಯಾಕಂತೀರ? ಭಾರತದ ಸಂಸ್ಕ್ರತಿಯಲ್ಲಿ ಅಕ್ಕನ ಅಕ್ಕರೆ ಹಾಗು ತಮ್ಮನ ಪ್ರೀತಿಗೆ ಬೆಲೆ ಕಟ್ಟಲಾಗದು. ಆದ್ರೆ ಕೊರೋನ ಲಾಕ್ ಡೌನ್ ನಿಂದಾಗಿ 2020 ರಲ್ಲಿ ತನ್ನ ತಮ್ಮನ ಮನೆಗೆ ಬಂದಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಗ್ರಾಮದ ರಾಧಮ್ಮ ತನ್ನ ಮೂವರು ಮಕ್ಕಳೊಂದಿಗೆ ಸತತ ಎರಡು ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗ ಗ್ರಾಮದಲ್ಲಿ ಸಹೋದರನಾದ ಬಸವರಾಜನ ಮನೆಯಲ್ಲೇ ಉಳಿದಿದ್ದರು.
ಇದೇ ವೇಳೆ ಬಸವರಾಜನ ಹೆಂಡತಿ ದಿವ್ಯ ಕೂಡ ಗರ್ಭಿಣಿಯಾಗಿದ್ದು ಹೆರಿಗೆಗೆಂದು ತನ್ನ ತವರುಮನೆಗೆ ಹೋಗಿದ್ದರು.ಹೀಗಾಗಿ ತನ್ನ ಸಹೋದರನಿಗೆ ಅಡುಗೆ ಮಾಡಿಕೊಂಡು ಆಕೆ ಅಲ್ಲಿಯೇ ಉಳಿದಿದ್ದೂ, ಬಸವರಾಜ್ ಕೂಡ ತನ್ನ ಫೋಟೊ ಸ್ಟುಡಿಯೋ ದಲ್ಲಿ ಬರುವ ಹಣದಿಂದ ಎಲ್ಲರನ್ನೂ ಪ್ರೀತಿಯಿಂದ ಸಲುಹುತಿದ್ದನು. ಅಲ್ದೇ ತನ್ನ ಅಕ್ಕನ ಸಂಸಾರ ಚನ್ನಾಗಿರಲಿ ಅಂತ ರಾಧಮ್ಮನ ಗಂಡನಿಗೆ ಹಣದ ಸಹಾಯ ಸಹ ಬಸವರಾಜ್ ಮಾಡಿದ್ದೂ, ಎಲ್ಲರು ಅನ್ಯೋನ್ಯವಾಗಿದ್ರು. ಆದ್ರೆ ದಿಢೀರ್ ಅಂತ ಜನವರಿ 14 ರ ರಾತ್ರಿ ಮಂಚದ ಮೇಲೆ ಗಾಡ ನಿದ್ರೆಯಲ್ಲಿದ್ದ ಬಸವರಾಜನನ್ನು ಯಾರೊ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ರು.
ಆಗ ಇಡೀ ಶಿವಗಂಗಾ ಗ್ರಾಮದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಮನೆಯಲ್ಲೇ ಇದ್ದ ಸಹೋದರಿಯಾದ ರಾಧಮ್ಮ ತನಗೇನು ಗೊತ್ತಿಲ್ಲ ಅಂತ ಕಣ್ಣೀರಿಟ್ಟಿದ್ದೂ,ಮತ್ತೋರ್ವ ಸಹೋದರನನ್ನು ಕರೆಸಿ ಪೊಲೀಸರಿಗೆ ವಿಚಾರ ತಿಳಿಸಿದ್ರು. ಕೊಲೆಗಾರರನ್ನು ಪತ್ತೆಹಚ್ಚಿ, ತಪ್ಪಿತಸ್ತರಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನೂ ಈ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಅಸಲಿ ಸತ್ಯ ತಿಳಿದು ಶಾಕ್ ಆಗಿದೆ. ಅದೇನಪ್ಪ ಅಂದ್ರೆ ಲಾಕ್ ಡೌನ್ ವೇಳೆ ಕೆಲಸವಿಲ್ಲದೇ ತೀವ್ರ ಸಮಸ್ಯೆ ಎದುರಿಸ್ತಿದ್ದ ರಾಧಮ್ಮನ ಗಂಡನಾದ ತಿಮ್ಮರಾಜುಗೆ ಸಹೋದರನಿಂದ ಸ್ವಲ್ಪ ಹಣವನ್ನು ಸಾಲವಾಗಿ ಕೊಡಿಸಿದ್ಲಂತೆ. ಬಳಿಕ ಕೊರೋನ ಸೊಂಕು ಕಡಿಮೆಯಾಗಿ, ಪರಿಸ್ಥಿತಿ ಯಥಾಸ್ಥಿತಿಗೆ ಮರಳಿದಾಗ ತನ್ನ ಹೆಂಡತಿ ಹಾಗು ಮಕ್ಕಳನ್ನು ಮನೆಗೆ ವಾಪಾಸ್ ಕಳುಹಿಸು ಅಂತ ಕೇಳಿದ ತಿಮ್ಮರಾಜುಗೆ ನಾನು ಕೊಟ್ಟಿರುವ ಹಣ ಅದರ ಬಡ್ಡಿ, ಸೇರಿದಂತೆ ನಿನ್ನ ಹೆಂಡತಿ ಮಕ್ಕಳನ್ನು 2 ವರ್ಷದಿಂದ ಸಾಕಿದ್ದೆಲ್ಲಾ ಸೇರಿ ಒಟ್ಟು 5 ಲಕ್ಷ ರೂಪಾಯಿಗಳನ್ನು ಕೊಟ್ಟು ಅವರನ್ನು ಕರೆದುಕೊಂಡೋಗು. ಇಲ್ಲದಿದ್ದರೆ ನಿನ್ನ ಹೆಂಡತಿ ಮಕ್ಕಳನ್ನು ಕಳುಹಿಸುವುದಿಲ್ಲ.
Mandya: ಪ್ರಾಣವನ್ನೇ ತೆಗೆದ ತುಂಡು ಬೀಡಿ: ಸೇದಿ ಎಸೆದ ಬೀಡಿಯ ಕಿಡಿಯಿಂದ ವೃದ್ಧ ಸಾವು
ನೀನೇನಾದ್ರು ಮತ್ತೊಮ್ಮೆ ಅವರನ್ನು ಕರೆಯಲು ಬಂದರೆ ಸಾಯಿಸಿ ಬಿಡುತ್ತೇನೆಂದು ಪ್ರಾಣಬೆದರಿಕೆ ಹಾಕಿದ್ದನಂತೆ. ಹೀಗಾಗಿ ತನ್ನ ಪತ್ನಿಯಾದ ರಾಧಮ್ಮನೊಂದಿಗೆ ಸೇರಿ ಸ್ಕೆಚ್ ಹಾಕಿದ್ದ ತಿಮ್ಮರಾಜು ಗಾಢ ನಿದ್ರೆಯಲ್ಲಿದ್ದ ಬಸವರಾಜನ ತಲೆಗೆ ಮುಖಕ್ಕೆ, ಹರಿತವಾದ ಕಬ್ಬಿಣದ ಮಚ್ಚಿನಿಂದ ಹಲವಾರು ಬಾರಿ ಕಡಿದು ಕೊಲೆಮಾಡಿದ್ದಾನೆಂಬ ಸತ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಲ್ಲದೇ ಬಸವರಾಜನನ್ನು ಕೊಲೆಗೈದ ಬಳಿಕ ರಕ್ತದ ಕಲೆಯಾಗಿದ್ದ ತಿಮ್ಮರಾಜು ಬಟ್ಟೆಗಳನ್ನೆಲ್ಲಾ ರಾಧಮ್ಮ ಸುಟ್ಟು ಹಾಕಿ ಬಸವರಾಜನ ಮೊಬೈಲ್ ಫೋನ್‌ನ್ನು ಸಹ ಸುಟ್ಟು ಸಾಕ್ಷ್ಯಗಳನ್ನು ನಾಶ ಮಾಡಿರುತ್ತಾಳೆ. ಹೀಗಾಗಿ ಆ ಇಬ್ಬರು ಆರೋಪಿಗಳನ್ನು ಪೊಲೀಸರು ಜನವರಿ 16 ರ ರಾತ್ರಿ ಅರೆಸ್ಟ್ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತ ಎಸ್ಪಿ ತಿಳಿಸಿದ್ದಾರೆ.
Chikkamagaluru: ಅಪ್ರಾಪ್ತ ಯುವತಿ ಆತ್ಮಹತ್ಯೆ ಪ್ರಕರಣ, ಆರೋಪಿ ಬಿಜೆಪಿ ಕಾರ್ಯಕರ್ತ ನಿತೇಶ್ ಬಂಧನ
ಒಟ್ಟಾರೆ ತಮ್ಮನ ಹಣದ ಧಾಹ ಸಹಿಸಲಾಗದೇ ಗಂಡನೊಂದಿಗೆ ಸೇರಿ ಸ್ವಂತ ತಮ್ಮನನ್ನೆ ರಾಧಮ್ಮ ಕೊಲ್ಲಲು ಸಾಥ್ ನೀಡಿದ್ದಾಳೆ. ಹಣದಾಸೆಗೆ ಸಿಲುಕಿ ಸಂಬಂಧವನ್ನು ಮರೆತ ಬಾಮೈದನ ವಿರುದ್ಧ ಆಕ್ರೋಶಗೊಂಡ ತಿಮ್ಮರಾಜು ಬಸವರಾಜನನ್ನು ಕೊಂದು ಹೆಂಡತಿಯೊಂದಿಗೆ ಜೈಲು ಸೇರಿದ್ದಾನೆ. ಆದರೆ ಏನು ತಪ್ಪು ಮಾಡದ ಮೂವರು ಮಕ್ಕಳು ಅನಾಥರಾಗಿ ಸಂಬಂಧಿಗಳ ಕೈ ಸೇರಿದ್ದು ಮಾತ್ರ ವಿಪರ್ಯಾಸವೇ ಸರಿ.