ಅಪಘಾತವಾಗಿ 5ದಿನವಾದ್ರೂ ಆಪರೇಷನ್ ಗೆ ಸರಕಾರಿ ವೈದ್ಯರ ನಿರ್ಲಕ್ಷ್ಯ, ಮೂಳೆ‌ ಮುರಿತವಾಗಿ ರೋಗಿಯ ನರಳಾಟ!

Published : Jun 02, 2023, 09:24 PM IST
ಅಪಘಾತವಾಗಿ 5ದಿನವಾದ್ರೂ ಆಪರೇಷನ್ ಗೆ ಸರಕಾರಿ ವೈದ್ಯರ ನಿರ್ಲಕ್ಷ್ಯ, ಮೂಳೆ‌ ಮುರಿತವಾಗಿ ರೋಗಿಯ ನರಳಾಟ!

ಸಾರಾಂಶ

ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಲತ್ರೆಯಲ್ಲಿ ಯುವಕನೋರ್ವನಿಗೆ   ಕಳೆದ ಐದು ದಿನಗಳಿಂದ ಇಲ್ಲಿನ ಸರ್ಕಾರಿ ವೈದ್ಯರು ಅವರು ಸೂಕ್ತ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.2): ವೈದ್ಯೋ ನಾರಾಯಣೋ ಹರಿ ಎಂದು ಜನರು ವೈದ್ಯರಲ್ಲಿ ದೇವರನ್ನು ಕಾಣ್ತಾರೆ. ಆದ್ರೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು ನಡೆದುಕೊಳ್ಳುವ ರೀತಿ ನೋಡಿದ್ರೆ ಇವರೇನಾ ಅವರು ಎನ್ನುವ ಸಂಶಯ ಎಲ್ಲರಲ್ಲೂ ಮೂಡುತ್ತದೆ . ಚಿತ್ರದುರ್ಗ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದ ರೈತ ಮಾರುತಿಗೆ  ಕಳೆದ ಐದು ದಿನಗಳ ಹಿಂದಷ್ಟೇ ಆಟೋ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯವಾಯಿತು. ಇದರಿಂದಾಗಿ ಮಾರುತಿಗೆ ಕಾಲು ಮೂಳೆ ಮುರಿದ ಪರಿಣಾಮ ಕೂಡಲೇ ಅವರನ್ನು ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಲತ್ರೆಗೆ ದಾಖಲಿಸಲಾಯಿತು. ಕಳೆದ ಐದು ದಿನಗಳಿಂದ ಇಲ್ಲಿನ ಸರ್ಕಾರಿ ವೈದ್ಯರು ಅವರು ಸೂಕ್ತ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅದ್ರಲ್ಲೂ ಮೂಳೆ ತಜ್ಞ ಡಾ.ನಾಗಭೂಷಣ್ ರೋಗಿ ಮಾರುತಿ ಅವರಿಗೆ ಕಳೆದ ಐದು ದಿನಗಳಿಂದ ಆಪರೇಷನ್ ಇಂದು ನಾಳೆ ಮಾಡ್ತೀನಿ ಎಂದು ಬರೀ ಸಬೂಬು ಹೇಳಿಕೊಂಡೆ ಬಂದಿದ್ದಾರೆ. ಇದ್ರಿಂದ ಆಕ್ರೋಶಗೊಂಡ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆ ಹೋರಾಟಗಾರರು ಇಂದು ಜಿಲ್ಲಾಸ್ಪತ್ರೆ ಮುಂಭಾಗ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.

ಇನ್ನೂ ಕಳೆದ ಐದು ದಿನಗಳಿಂದ ಕಾಲು ಮೂಳೆ ಮುರಿದ ನೋವಿನಿಂದ ನರಳುತ್ತಿರೋ ಯುವಕ ಮಾರುತಿಗೆ ಆರೋಗ್ಯದಲ್ಲಿ ಏರುಪೇರು ಆಗ್ತಿದ್ದು. ಮುಂದೆ ಆತನಿಗೆ ಏನಾದ್ರು ತೊಂದರೆ ಆದಲ್ಲಿ ಡಾ. ನಾಗಭೂಷಣ್ ಅವರೇ ನೇರ ಹೊಣೆ ಆಗಲಿದ್ದಾರೆ ಎಂದು ಹೋರಾಟಗಾರರು ಎಚ್ಚರಿಸಿದರು.

Bengaluru: ಒಂಟಿ ಮಹಿಳೆಯ ರುಂಡ ಇಲ್ಲದ ದೇಹ ಚರಂಡಿಯಲ್ಲಿ ಪತ್ತೆ, ತುಂಡರಿಸಿದ ಅಂಗಾಗ 

ಇನ್ನೂ ಯಾವ ಕಾರಣಕ್ಕೆ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡ್ತಿಲ್ಲ ಎಂದು ಜಿಲ್ಲಾ ಸರ್ಜನ್ ಅವರನ್ನೇ ಕೇಳೋಕ್ ಹೋದ ಹೋರಾಟಗಾರರಿಗೆ ಶೀಘ್ರವೇ ಆಪರೇಷನ್ ಮಾಡಿಸ್ತೀನಿ ಎಂದು ಹೇಳಿದ್ರು ಯಾವುದೇ ಪ್ರಯೋಜನ ಆಗಿಲ್ಲ. ಇತ್ತ ಡಾಕ್ಟರ್ ನಮಗೆ ಸಿಬ್ಬಂದಿಗಳ ಕೊರತೆ ಇದೆ, ವೈದ್ಯರ ಕೊರತೆ ಇದೆ ಅಂತೆಲ್ಲಾ ಹಾರಿಕೆ ಉತ್ತರ ಕೊಡ್ತಾರೆ ಎಂದು ರೈತ ಹೋರಾಟಗಾರರು ತಮ್ಮ ಆಕ್ರೋಶ ಹೊರಹಾಕಿದರು. ಇನ್ನೂ ಇತ್ತೀಚೆಗೆ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿರುವ ವಿರೇಂದ್ರ ಪಪ್ಪಿ ಅವರು ನಗರಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ‌ ಆಸ್ಪತ್ರೆಗೆ ಮೊದಲು ಆಗಮಿಸಿ ಪರಿಶೀಲನೆ ನಡೆಸಿದ್ರು. ಆದ್ರೂ ಈ‌ ರೀತಿಯ ಸಮಸ್ಯೆ ಅವರ ಕಣ್ಣಿಗೆ ಬಾರದೇ ಇರುವುದು ದುರದೃಷ್ಟಕರ ಸಂಗತಿ. ಇನ್ನಾದ್ರು ಶಾಸಕರು ಇತ್ತ ಗಮನಹರಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಸಮಯದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಆಗಲಿ ಎಂದು ರೈತ ಹೋರಾಟಗಾರರು ಆಗ್ರಹಿಸಿದರು.

ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ರೋಡಿಗೆ ಎಸೆದ ಅಲ್ಪಸಂಖ್ಯಾತ ಫೇಸ್‌ಬುಕ್ ಗೆಳೆಯ!

ಒಟ್ಟಾರೆ ಜಿಲ್ಲಾಸ್ಪತ್ರೆ ಅಂದ್ರೆ ಸಾಕು ಮೂಗು ಮುರಿಯುವ ಜನರೇ ಹೆಚ್ಚು. ಇನ್ನೂ ಈ ರೀತಿಯ ವೈದ್ಯರ ನಿರ್ಲಕ್ಷ್ಯದ ಘಟನೆಗಳು ಮರುಕಳಿಸಿದ್ರೆ ಯಾವ ಜನರು ತಾನೇ ಜಿಲ್ಲಾಸ್ಪತ್ರೆಗೆ ಬರ್ತಾರೆ ಹೇಳಿ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದ್ರು ಎಚ್ಚೆತ್ತು ವೈದ್ಯರ ನಿರ್ಲಕ್ಷ್ಯದ ವಿರುದ್ದ ಸಮರ ಸಾರಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಿಸುವಲ್ಲಿ ಮುಂದಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ