ಆತ ಯಾರ ಸಹವಾಸಕ್ಕೂ ಹೋಗದೇ ತನ್ನ ಪಾಡಿಗೆ ತಾನು ಗೂಡಂಗಡಿ ಇಟ್ಕೊಂಡು ಜೀವನ ಸಾಗಿಸ್ತಿದ್ದ ವ್ಯಕ್ತಿ. ಸಿನಿಮಾದಲ್ಲಿ ವಿಲನ್ ಪಾರ್ಟ್ ಮಾಡುತ್ತಿದ್ದ ಪಕ್ಕದ ಮನೆಯವ ರಿಯಲ್ ಲೈಫ್‌ನಲ್ಲೂ ವಿಲನ್ ರೀತಿ ವರ್ತಿಸಿ ಆತನ ತಲೆ ಕಡಿದು ಜಮೀನಿನಲ್ಲಿ ಹೂತಾಕಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ.08): ಆತ ಯಾರ ಸಹವಾಸಕ್ಕೂ ಹೋಗದೇ ತನ್ನ ಪಾಡಿಗೆ ತಾನು ಗೂಡಂಗಡಿ ಇಟ್ಕೊಂಡು ಜೀವನ ಸಾಗಿಸ್ತಿದ್ದ ವ್ಯಕ್ತಿ. ಸಿನಿಮಾದಲ್ಲಿ ವಿಲನ್ ಪಾರ್ಟ್ ಮಾಡುತ್ತಿದ್ದ ಪಕ್ಕದ ಮನೆಯವ ರಿಯಲ್ ಲೈಫ್‌ನಲ್ಲೂ ವಿಲನ್ ರೀತಿ ವರ್ತಿಸಿ ಆತನ ತಲೆ ಕಡಿದು ಜಮೀನಿನಲ್ಲಿ ಹೂತಾಕಿರೋ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ.
undefined
ಹೀಗೆ ತನ್ನ ಗಂಡನನ್ನು ಕಳೆದುಕೊಂಡ ನೋವಿನಲ್ಲಿ ಮಕ್ಕಳೊಂದಿಗೆ ನಡು ರಸ್ತೆಯಲ್ಲೇ ಕಣ್ಣೀರು ಹಾಕ್ತಿರೋ ಗಂಗಮ್ಮ. ಅತ್ತ ತಲೆ ಬೇರ್ಪಟ್ಟು ಶವವಾಗಿ ಮಲಗಿರೋ ಮೃತ ದುರ್ದೈವಿ ರಮೇಶ (45). ಇಂತಹ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶ್ರವಣಗೆರೆ ಗ್ರಾಮ. ಮೃತ ದುರ್ದೈವಿ ರಮೇಶ ಹಾಗೂ ಪಕ್ಕದ ಮನೆಯಲ್ಲೇ ಇದ್ದ ಶ್ರೀನಿವಾಸ್ ಅಲಿಯಾಸ್ ರೌಡಿ ಸೀನ. ಇಬ್ಬರು ಮೊದಲಿನಿಂದಲೂ ಉತ್ತಮ ಸ್ನೇಹಿತರು. ಇಬ್ಬರೂ ನಿನ್ನೆ ಸಂಜೆಯವರೆಗೂ ಎಣ್ಣೆ ಹೊಡೆದುಕೊಂಡೆ ಜೊತೆಯಲ್ಲೇ ಓಡಾಡಿದ್ದರು.
Bengaluru: 2 ಕೋಟಿ ಕಳ್ಳತನ ಮಾಡಿದ್ದ ಖದೀಮರ ಬಂಧನ: ಬಚ್ಚಿಟ್ಟಿದ್ದ ಹಣ ಪೊಲೀಸ್ ವಶಕ್ಕೆ
ಆದರೆ ರಮೇಶ ತಮ್ಮದೇ ಇನ್ನೊಂದು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಎಲ್ಲರೂ ಮಲಗಿದ ವೇಳೆ ಸ್ಕೆಚ್ ಹಾಕಿ ಸೀನ ಮನೆಗೆ ನುಗ್ಗಿ, ರಮೇಶನ ಕತ್ತು ಕತ್ತರಿಸಿ ಊರಾಚೆ ಇರುವ ಜಮೀನಿನಲ್ಲಿ ಊತಿಟ್ಟಿದ್ದಾನೆ. ನಂತರ ಆ ಕೊಲೆಗೂ ನನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ಮನೆಯಲ್ಲಿ ಅರಾಮಗಿ ಮಲಗಿದ್ದಾನೆ ಭೂಪ. ಇತ್ತ ಕೊಲೆಗೆ ಕಾರಣ ಏನಿರಬಹುದು ಎಂದು ಕೆದಕಿದಾಗ, ರೌಡಿ ಸೀನ ನನಗೆ ಯಾರೋ ವಾಮಾಚಾರ ಮಾಡಿಸಿದ್ದಾರೆ ಅದಕ್ಕಾಗಿಯೇ ನಮ್ಮ ಸಂಸಾರ ಸರಿಯಿಲ್ಲ ಎಂದೆಲ್ಲಾ ಮೂಢನಂಬಿಕೆಯ ಅನುಮಾನ ಇಟ್ಟುಕೊಂಡು ಓಡಾಡುತ್ತಿದ್ದನಂತೆ. ಆದರೆ ಅಮಾಯಕ ರಮೇಶ ಮಾತ್ರ ಸೀನನ ಅನುಮಾನಕ್ಕೆ ತುತ್ತಾಗಿ ಕೊಲೆಯಾಗಿರೋದು ದುರಂತ ಅಂತಿದ್ದಾರೆ ಸ್ಥಳೀಯರು.
ಇನ್ನೂ ಈ ಕೊಲೆ ನಡೆಯುವುದಕ್ಕೂ ಮುನ್ನ ರಮೇಶ ಮಲಗಿದ್ದ ಮನೆಯ ಹೊರಭಾಗದಲ್ಲೇ ಅವರ ತಂದೆ ಮಲಗಿದ್ದರು. ರಾತ್ರಿ ವೇಳೆ ಸೀನ ಕೊಲೆ ಮಾಡಿ ಮನೆಯಿಂದ ಹೊರಗೆ ಬರುವ ವೇಳೆ ಎಚ್ಚರಗೊಂಡು ಕಳ್ಳ, ಕಳ್ಳ ಎಂದು ಕೂಗಿದ್ದಾರೆ. ಅಷ್ಟೊತ್ತಿಗಾಗಲೇ ಚೀಲದಲ್ಲಿ ರಮೇಶನ ತಲೆಯನ್ನು ಕತ್ತರಿಸಿಕೊಂಡು ಓಡೋಗ್ತಿದ್ದನಂತೆ ರೌಡಿ ಸೀನ. ಕೂಡಲೇ ಮನೆಯೊಳಗೆ ಹೋಗಿ ಮಗನನ್ನು ನೋಡಿದಾಗ ರುಂಡ ಬೇರ್ಪಟ್ಟು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರೋದನ್ನು ಕಂಡು ಹೌಹಾರಿದ್ದಾರೆ.
Bengaluru: ಹಣಕ್ಕಾಗಿ ಮಗನಿಗೆ ಬೆಂಕಿ ಇಟ್ಟ ಕ್ರೂರಿ ತಂದೆ: ಚಿಕಿತ್ಸೆ ಫಲಿಸದೆ ಮಗ ಸಾವು
ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆರೋಪಿಯನ್ನು ಎಡೆಮುರಿ ಕಟ್ಟಿದ್ದಾರೆ. ಅಷ್ಟಕ್ಕೂ ಈ ಅಸಾಮಿ ಸೀನ ಸಾಮಾನ್ಯ ಮನುಷ್ಯನಲ್ಲ, ವಂಶಿ, ಪೈಲ್ವಾನ್, ಸಂತ, ನಂದ-ನಂದಿತ, ಸಿನಿಮಾಗಳಲ್ಲಿ ಸಹನಟನಾಗಿ ಖಳನಟನ ಪಾತ್ರದಲ್ಲಿ ನಟಿಸಿದ್ದನಂತೆ. ಅವನು ಏನೇ ಮಾಡಲಿ ನಮ್ಮ ಅಮಾಯಕ ಕುಟುಂಬದ ಮೇಲೆ ಈ ರೀತಿ ಪ್ರಹಾರ ತೋರಿ ಕೊಲೆ ಮಾಡಿರೋದು ಎಷ್ಟು ಸರಿ. ಈಗ ಮೃತ ವ್ಯಕ್ತಿಗೆ ಇರುವ ಇಬ್ಬರು ಮಕ್ಕಳಿಗೆ ದಾರಿ ದೀಪ ಯಾರಾಗಬೇಕು ಎಂದು ಮೃತನ ತಂದೆ ರೋಧನೆ ವ್ಯಕ್ತಪಡಿಸಿದರು. ಜೊತೆಗೆ ಅರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಂಬಂಧಿಕರು ಆಗ್ರಹಿಸಿದರು.
ಒಟ್ಟಾರೆಯಾಗಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ಆಸಾಮಿ ಈಗ ನಿಜ ಜೀವನದಲ್ಲೇ ವಿಲನ್ ಆಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇಡೀ ಗ್ರಾಮದಲ್ಲೇ ಒಂದು ಸಣ್ಣ ಕ್ರೈಂ ನಡೆದಿರಲಿಲ್ಲ ಆದರೆ ಈ ಕೊಲೆ ಇಡೀ ಸುತ್ತಮುತ್ತಲಿನ ಜನರಲ್ಲಿ ನಿದ್ದೆಗೆಡಿಸಿರೋದು ಗ್ಯಾರಂಟಿ. ಅದೇನೆ ಇರಲಿ ಆರೋಪಿಗೆ ತಕ್ಕ ಶಿಕ್ಷೆ ಆಗಲಿ ಎಂಬುದು ನಮ್ಮ ಆಶಯ.