
ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹುಡುಗನೊಬ್ಬ ಪದೇ ಪದೇ ರಸಗುಲ್ಲ ಕೇಳಿದ ಎನ್ನುವ ಕೋಪಕ್ಕೆ ಅಡುಗೆ ಕೆಲಸಗಾರ ಆತನ ಜೊತೆ ರಕ್ಷಸನಂತೆ ವರ್ತಿಸಿದ್ದಾನೆ. ಅಡುಗೆ ಕಾರ್ಮಿಕನ ಕೋಪಕ್ಕೆ ಅಪ್ರಾಪ್ತ ಬಾಲಕ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ.
ಘಟನೆ ಕೇಬಸ್ತಿ ಜಿಲ್ಲೆಯ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲೋಲಿ ಗೋಸಾಯಿ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ನಡೆಯುತ್ತಿತ್ತು. ಎಲ್ಲರೂ ಮದುವೆ ಸಂಭ್ರಮದಲ್ಲಿದ್ದರು. ಆದ್ರೆ ಮದುವೆ ಮನೆ ಕೆಲವೇ ಕ್ಷಣಗಳಲ್ಲಿ ದುಃಖದ ಮನೆಯಾಗಿ ಬದಲಾಗಿದೆ. ಮುಖದಿಂದ ಸೊಂಟದವರೆಗೆ ಸುಟ್ಟಿರುವ ಹುಡುಗ ಜೀವನ್ಮರಣದ ಮಧ್ಯೆ ಹೋರಾಡ್ತಿದ್ದಾನೆ.
ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್ ರಾಜ್ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು
ದುರ್ಜನ್ಪುರ ನಿವಾಸಿ ಸಂತೋಷ್ ಅವರ ಮಗ 11 ವರ್ಷದ ಚಮನ್, ತನ್ನ ತಾಯಿ ಸಾವಿನ ನಂತ್ರ ಬಸ್ತಿಯ ಬಘನಾಲದಲ್ಲಿರುವ ತನ್ನ ಅಜ್ಜ-ಅಜ್ಜಿಯರ ಮನೆಯಲ್ಲಿ ವಾಸಿಸುತ್ತಿದ್ದ. ಬುಧವಾರ, ಅಜ್ಜಿಯೊಂದಿಗೆ ಮಲೋಲಿ ಗೋಸಾಯಿ ಗ್ರಾಮದಲ್ಲಿನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ಹೋಗಿದ್ದ. ಆಟವಾಡ್ತಾ ಖುಷಿಯಾಗಿದ್ದ ಸಮನ್ ಕಣ್ಣು ರಸಗುಲ್ಲ ಮೇಲೆ ಬಿದ್ದಿದೆ. ಅಡುಗೆ ಮನೆಗೆ ಹೋಗಿ ರಸಗುಲ್ಲ ತಿಂದಿದ್ದಾನೆ. ಒಂದಕ್ಕೆ ಆತನ ಬಯಕೆ ನಿಲ್ಲಲಿಲ್ಲ. ಪದೇ ಪದೇ ರಸಗುಲ್ಲ ತಿನ್ನಲು ಬಂದಿದ್ದಾನೆ. ಇದನ್ನು ನೋಡಿ ಅಡುಗೆ ಗುತ್ತಿಗೆದಾರನಿಗೆ ಕೋಪ ಬಂದಿದೆ. ಮೊದಲು ಚಮನ್ ನಿಲ್ಲಿಸಿ, ಬುದ್ಧಿ ಹೇಳಿದ್ದಾನೆ. ಇದಕ್ಕೂ ಚಮನ್ ಬಗ್ಗದೆ ಹೋದಾಗ ಚಮನನ್ನು ತಂದೂರಿ ಒಲೆ ಮೇಲೆ ಎತ್ತಿದ್ದಾನೆ. ನಿಯಂತ್ರಣ ತಪ್ಪಿ ಚಮನ್ ಉರಿಯುತ್ತಿದ್ದ ಒಲೆಯೊಳಗೆ ಬಿದ್ದಿದ್ದಾನೆ.
ಚಮನ್ ಕೂಗಾಟ ಕೇಳಿ ಅಲ್ಲಿದ್ದವರು ಓಡಿ ಬಂದಿದ್ದಾರೆ. ತಕ್ಷಣ ಚಮನ್ ನನ್ನು ಅಯೋಧ್ಯಾ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ಆದ್ರೆ ತೀವ್ರ ಸುಟ್ಟ ಗಾಯದಿಂದ ಬಳಲುತ್ತಿರುವ ಚಮನ್ ನನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಮನ್ ಗೆ ಚಿಕಿತ್ಸ ನಡೆಯುತ್ತಿದೆ. ಪರಿಸ್ಥಿರಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯೇಕ ದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ. ದೂರು ದಾಖಲಿಸಿಕೊಂಡು ಅರೋಪಿ ಪತ್ತೆಗೆ ಮುಂದಾಗಿದ್ದಾರೆ. ಘಟನಾ ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಅಮಾಯಕ ಚಮಚನ್ ರಸಗುಲ್ಲವನ್ನು ಪದೇ ಪದೇ ಕೇಳಿದ್ದೇ ತಪ್ಪಾಗಿದೆ. ಚಮನ್ ಅಜ್ಜಿಯ ಮನೆಯಲ್ಲಿ ಓದುತ್ತಿದ್ದ. ಮದುವೆ ಮನೆಗೆ ಬಂದಿದ್ದ ಆತ ಅಜ್ಜಿಯ ಜೊತೆ ಖುಷಿಯಾಗಿದ್ದ. ಮುಗ್ದ ಮಗು ಜೊತೆ ಅಡುಗೆ ಗುತ್ತಿಗೆದಾರ ನಡೆದುಕೊಂಡು ರೀತಿ ಎಲ್ಲರನ್ನು ಕೋಪಗೊಳಿಸಿದೆ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳವಂತೆ ಜನರು ಆಗ್ರಹಿಸಿದ್ದಾರೆ. ಈ ಘಟನೆ ಪ್ರದೇಶದ ಜನರಲ್ಲಿ ವ್ಯಾಪಕ ಕೋಪವನ್ನು ಹುಟ್ಟುಹಾಕಿದೆ. ಒಂದು ರಸಗುಲ್ಲ ಇಷ್ಟೆಲ್ಲ ಗಲಾಟೆಗೆ ಕಾರಣವಾಗುತ್ತೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಮದುವೆ ಮನೆ ಈಗ ನೋವಿನ ಮನೆಯಾಗಿ ಬದಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ