Chikkamagaluru: ಹಣ ನೀಡಲಿಲ್ಲವೆಂದು ಪೋಷಕರೊಂದಿಗೆ ಜಗಳ: ಆಕ್ರೋಶದಿಂದ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ

Published : Jun 15, 2026, 09:01 PM IST
Chikkamagaluru News

ಸಾರಾಂಶ

Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ 27 ವರ್ಷದ ಯುವಕ ಪ್ರದೀಪ್ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಮಗಳೂರು (ಜೂ.15): ಹಣಕ್ಕಾಗಿ ಪೋಷಕರೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು 27 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರದೀಪ್ ಪೋಷಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ದುಡಿದು ಸಂಪಾದಿಸುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು.

ಇದರ ನಡುವೆಯೇ, ಸಂಘದಿಂದ ಸಾಲ ಮಾಡಿಕೊಡುವಂತೆ ಪ್ರದೀಪ್ ಒತ್ತಾಯಿಸಿದ್ದು, ಅದಕ್ಕೂ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳದ ಬಳಿಕ ಆಕ್ರೋಶದಿಂದ ಮನೆಯಿಂದ ಹೊರನಡೆದಿದ್ದ ಪ್ರದೀಪ್, ಬಳಿಕ ನಾಪತ್ತೆಯಾಗಿದ್ದ.

ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನಂತರ ಗ್ರಾಮದ ಸಮೀಪದ ಕಾಫಿ ತೋಟದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Mandya: ಲಕ್ಷ್ಮೀಸಾಗರದಲ್ಲಿ ಕಣ್ಣೀರಿನ ಕಥೆ: ಚೆಂಡಿನೊಂದಿಗೆ ಆಟವಾಡುತ್ತಿದ್ದ ಮಗು ನೀರಿನ ಸಂಪಿಗೆ ಬಿದ್ದು ಸಾವು
'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಾಕೆ ಈಗ ಡ್ರಗ್ಸ್​ ಪೆಡ್ಲರ್​: ವಯನಾಡಿನ ಸುಂದರಿ ಸಿಕ್ಕಿಬಿದ್ದದ್ದೇ ರೋಚಕ