ಚಿಕ್ಕಮಗಳೂರು ಅಬಕಾರಿ ಅಧಿಕಾರಿಗಳ ಅಂಧ ದರ್ಬಾರ್ , ರೈತನ ಮೇಲೆ ಸುಳ್ಳು ಕೇಸ್ ಹಾಕಿದ್ರಾ?

By Suvarna NewsFirst Published May 3, 2022, 8:09 PM IST
Highlights

* ಚಿಕ್ಕಮಗಳೂರು ಅಬಕಾರಿ ಇಲಾಖೆ ಅಧಿಕಾರಿಗಳ ಅಂಧ ದರ್ಬಾರ್ ?
* ಕೇಸ್ ಮಾಡುವ ಉದ್ದೇಶದಿಂದಲೇ ರೈತನ ಮೇಲೆ ಸುಳ್ಳು ಕೇಸ್ ? 
* ಸಾವಯವ ಕೃಷಿ ಮಾಡುವ ರೈತನ ವಿರುದ್ಧ  ಕಳ್ಳಭಟ್ಟಿ ಕೇಸ್ 
* ಅಬಕಾರಿ ಅಧಿಕಾರಿಗಳ ವಿರುದ್ದ ಅನ್ನದಾತರ ಆಕ್ರೋಶ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು, (ಮೇ.03): ಇದು ಅಬಕಾರಿ ಅಧಿಕಾರಿಗಳು ಅಂಧ ದರ್ಬಾರ್ ಸ್ಟೋರಿ. ಕೇಸ್ ದಾಖಲು ಮಾಡಲೇಬೇಕೆಂಬ ಉದ್ದೇಶದಿಂದಲೇ ಗೋಮಾತ್ರದ ವಾಸನೆ ಯಾವುದು, ಕಳ್ಳಭಟ್ಟಿ ವಾಸನೆ ಗೊತ್ತಿಲ್ಲದೇ ಕೇಸ್ ದಾಖಲು ಮಾಡಿರುವ ಅಧಿಕಾರಿಗಳು, ಗೋ ಮಾತ್ರದ ಗೊಬ್ಬರ, ಕಳ್ಳಭಟ್ಟಿ ಯಾವುದು ಎನ್ನುವುದರ ಅರಿವು ಇಲ್ಲದೇ ರೈತರ ಒಬ್ಬರ ಮೇಲೆ ಕಳ್ಳಭಟ್ಟಿ ಕೇಸ್ ದಾಖಲು ಮಾಡಿ ಜೈಲಿಗೆ ಕಳುಹಿಸಿದ್ದಾರೆ. ರೈತರು ಅಬಕಾರಿ ಇಲಾಖೆ ಆಕ್ರೋಶವನ್ನು ಹೊರಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಬಕಾರಿ ಇಲಾಖೆಯ ವಿರುದ್ದ ಹೋರಾಟವಮನ್ನು ತೀವ್ರಗೊಳಿಸಿದ್ದಾರೆ..

ಸಾವಯವ ಕೃಷಿ ಮಾಡುವ ರೈತನ ಮೇಲೆ ಕಳ್ಳಭಟ್ಟಿ ಕೇಸ್ 
ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮವಾಗಿ ಕಳೆದ ಕೆಲ ದಿನಗಳ ಹಿಂದೆ ಮಳೆ ಆಗಿದೆ. ಇದರಿಂದ ರೈತರು ಕೃಷಿ ಭೂಮಿಯುತ್ತ ಮುಖಮಾಡಿದ್ದಾರೆ. ತಮ್ಮ ಹೊಲ, ತೋಟದಲ್ಲಿ ಬೆಳೆದಿರುವ ಅಡಿಕೆ, ಕಾಫಿ, ಶುಂಠಿಗೆ ಗೊಬ್ಬರ ಹಾಕುವ ಕಾಯಕದಲ್ಲಿ ಅನ್ನದಾತರು ನಿರತರಾಗಿದ್ದಾರೆ. ಈಗಾಗಲೇ ಸಾವಯುವ ಕೃಷಿಯುತ್ತ ಚಿಂತನೆ ಮಾಡಿರುವ ರೈತಾಪಿ ವರ್ಗದ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಾವಯುವ ಕೃಷಿ ಮೂಲಕ ಅಧಿಕ ಲಾಭಗಳಿಸಬಹುದು ಎನ್ನುವ ಉದ್ದೇಶದಿಂದ ರೈತರು ಸಾವಯುವ ಗೊಬ್ಬರವನ್ನ ತಯಾರು ಮಾಡಿ ಜಮೀನಿಗಳಿಗೆ ಹಾಕುತ್ತಿದ್ದಾರೆ.ಈ ಕ್ರಮವೇ ಮಲೆನಾಡಿನ ರೈತ ಕುಟುಂಬಕ್ಕೆ ಇದೀಗ ಮಾರಕವಾಗಿ ಪರಿಣಾಮಿಸಿದೆ. ಅಬಕಾರಿ ಇಲಾಖೆಯ ಡಿವೈ ಎಸ್ ಪಿ ಪ್ರಸಾದ್ ನೇತೃತ್ವದ ತಂಡ ಚಿಕ್ಕಮಗಳೂರು ಜಿಲ್ಲೆಯ ಮಳಲೂರು ಗ್ರಾಮಕ್ಕೆ ಭೇಟಿ ನೀಡಿದೆ. ಕಳ್ಳಭಟ್ಟಿ ದಂಧೆಯನ್ನ ನಿಯಂತ್ರಣ ಮಾಡುವ ಉದ್ದೇಶದಿಂದ ಹಳ್ಳಿಗಳಲ್ಲಿ ಕಳ್ಳಭಟ್ಟಿ ಮಾರಾಟವಾಗುತ್ತಿದೆ ಎನ್ನುವುದರ ಮಾಹಿತಿ ಆಧಾರದ ಮೇಲೆ ಶೋಧ ಕಾರ್ಯವನ್ನು ಮಳಲೂರು ಗ್ರಾಮದಲ್ಲಿ ನಡೆಸಿದ್ದಾರೆ. ಆ ವೇಳೆಯಲ್ಲಿ ಮಳಲೂರು ಗ್ರಾಮದ ಭೋಜೇಗೌಡರ ಗದ್ದೆಯಲ್ಲಿ  ಶುಂಠಿಗೆ ಬಳಸುವ ಉದ್ದೇಶದಿಂದ ಸಾವಯುವ ಗೊಬ್ಬರದ ಜಲವನ್ನು ತಯಾರು ಮಾಡಿಕೊಳ್ಳಲಾಗಿತ್ತು. ಇದನ್ನೇ ಕಳ್ಳಭಟ್ಟಿ ಎಂದು ಅಬಕಾರಿ ಅಧಿಕಾರಿಗಳು ಕೇಸ್ ದಾಖಲು ಮಾಡಿದ್ದಾರೆ…

ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ರೈತನ ಮೇಲೆ ಸುಳ್ಳು ಕೇಸ್
ಇತ್ತೀಚೆಗೆ ಮಲೆನಾಡಿನ  ರೈತರು ಸಾವಯುವ ಗೊಬ್ಬರವಾದ ಗೋ ಕೃಪಾಮೃತವನ್ನು ಹೆಚ್ಚಾಗಿ ಬಳಸುತ್ತಾರೆ. ಇದಕ್ಕೆ ಬೆಲ್ಲ, ಅತೀ ಹೆಚ್ಚು ಗೋ ಮಾತ್ರ, ಹಸುವಿನ ಹಾಲು, ಮಜ್ಜಿಗೆಯನ್ನು ಬಳಸಿ ಗೋ ಕೃಪಾಮೃತವನ್ನ ತಯಾರು ಮಾಡಲಾಗುತ್ತೇದೆ. ಬೆಲ್ಲದ ವಾಸನೆ ಇರವುದನ್ನು ಗಮನಿಸಿದ ಅಬಕಾರಿ ಅಧಿಕಾರಿಗಳು ಇದು ಕಳ್ಳಭಟ್ಟಿ ಎಂದು ಭಾವಿಸಿ ಕೇಸ್ ಮಾಡಿದ್ದಾರೆ. ಈ ಬಗ್ಗೆ ಎಷ್ಟು ಹೇಳಿದ್ದರೂ ಮನವರಿಕೆ ಆಗಿಲ್ಲ ಎಂದು ಭೋಜೇಗೌಡ ಮಗ ಮನು ಅಳಲುನ್ನು ಹೊರಹಾಕಿದ್ದಾರೆ. ಶುಂಠಿ ಗೆದ್ದೆ, ಕಾಫಿ, ಅಡಿಕೆ ಗಿಡಕ್ಕೆ ಬಳಸುವ ಗೋ ಕೃಪಾಮೃತವನ್ನೇ ಕಳ್ಳಭಟ್ಟಿ ಎಂದು ಪರಿಣಿಗಸಿದ ಅಬಕಾರಿ ಸಿಬ್ಬಂದಿಗಳು ಭೋಜೇಗೌಡರ ಮೇಲೆ ಕಳ್ಳಭಟ್ಟಿ ಕೇಸ್ ದಾಖಲು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೇಸ್ ದಾಖಲು ಮಾಡಿ ಭೋಜೇಗೌಡ ರನ್ನು ನ್ಯಾಯಾಲಯದ  ವಶಕ್ಕೆ ನೀಡುರುವ ಅಬಕಾರಿ ಇಲಾಖೆಯ ಸಿಬ್ಬಂದಿಗಳನಡೆ  ವಿರುದ್ದ ಸಾಮಾಜಿಕ ಜಾಲ ತಾಣದಲ್ಲೂ ಹೋರಾಟವನ್ನು ರೈತರು  ಆರಂಭಿಸಿದ್ದಾರೆ. ಕಷ್ಟಪಟ್ಟು ತಯಾರು ಮಾಡಿದ್ದ ಗೋ ಕೃಪಾಮೃತವನ್ನು ಬೇಕಾಬಿಟ್ಟಿಯಾಗಿ ಸಿಬ್ಬಂದಿಗಳು ಚೆಲ್ಲಿದ್ದಾರೆ ಎಂದು ಸೂಕ್ತ ನ್ಯಾಯಾಕ್ಕಾಗಿ ಭೋಜೇಗೌಡರ ಪುತ್ರ ಮನುಗೌಡ ಒತ್ತಾಯಿಸಿದ್ದಾರೆ. 

 ಪರೀಕ್ಷೆಗೆ ಕಳುಹಿಸಿದ ಅಬಕಾರಿ ಇಲಾಖೆ
ಇಡೀ ಮಳಲೂರು ಗ್ರಾಮದಲ್ಲಿ ಇದೀಗ ಸಾವಯುವ ಗೊಬ್ಬರವನ್ನೇ ಬಳಸುತ್ತಿದ್ದಾರೆ. ರೈತರ ಜಮೀನು ,ತೋಟದ ಮುಂದೆ ಬ್ಯಾರೆಲ್ ನಲ್ಲಿ ಸಾವಯುವ ಗೊಬ್ಬರ ಇರುವುದು  ಈಗ ಸಾಮಾನ್ಯವಾಗಿದೆ. ಅಬಕಾರಿ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದಾಗ ಕಳ್ಳಭಟ್ಟಿ ಮಾರಾಟ, ಕಳ್ಳಭಟ್ಟಿಯ ಸಾಕ್ಷಿಗಳು ದೊರೆಕಿಲ್ಲ. ಕಳ್ಳಭಟ್ಟಿ ವಾಸನೆ ಎಂದು ಭಾವಿಸಿ ಸಂಗ್ರಹ ಮಾಡಿರುವ ಸಾವಯುವ ಗೊಬ್ಬರವನ್ನು ಬೆಂಗಳೂರಿನ ಲ್ಯಾಬಿಗೆ ಅಧಿಕಾರಿಗಳು ಕಳುಹಿಸಿದ್ದಾರೆ. ಅದು ಬರುವ ತನಕ ಅದು ಕಳ್ಳಭೇಟಿಯೂ ಅಥವಾ ಗೋ ಕೃಪಾಮೃತವೂ ಎನ್ನುವುದನ್ನು ನಿರ್ಧಾರಿಸುವುದ ಕಷ್ಟದಾಯಕ ಎನ್ನುವ ಸಿಬ್ಬಂದಿಗಳು ಮಾತು ,ಒಟ್ಟಾರೆ ಸತ್ಯಾಂತ ಹೊರಬರುವ ತನಕ ರೈತನಿಗೆ ಜೈಲಯೇ ಗತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದಡೆ ಅಬಕಾರಿ ಸಿಬ್ಬಂದಿಗಳ ನಡೆದ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ತೀವ್ರವಾಗುತ್ತಿದೆ.

click me!