ನಾಲ್ಕು ವರ್ಷಗಳಿಂದ ಪ್ರೀತಿಸುತ್ತಾ, ನಾಲ್ಕು ಕಾಸು ಸಂಪಾದನೆ ಮಾಡಿ ಮದುವೆ ಮಾಡಿಕೊಳ್ಳೋಣ ಅಂತ ಬೆಂಗಳೂರಿಗೆ ಬಂದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಇದಕ್ಕಿದ್ದ ಹಾಗೆ ಸಾವಿನ ಮನೆ ಸೇರಿದರು.
ಆನೇಕಲ್ (ಸೆ.21): ನಾಲ್ಕು ವರ್ಷಗಳಿಂದ ಪ್ರೀತಿಸುತ್ತಾ, ನಾಲ್ಕು ಕಾಸು ಸಂಪಾದನೆ ಮಾಡಿ ಮದುವೆ ಮಾಡಿಕೊಳ್ಳೋಣ ಅಂತ ಬೆಂಗಳೂರಿಗೆ ಬಂದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಇದಕ್ಕಿದ್ದ ಹಾಗೆ ಸಾವಿನ ಮನೆ ಸೇರಿದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ಹಿಂಭಾಗದಲ್ಲೇ ಇಂಥಾದ್ದೊಂದು ಘಟನೆ ನಡೆದು ಹೋಗಿದೆ. ಖಾಸಗೀ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ ನೇತ್ರಾವತಿ ಎಷ್ಟು ಹೊತ್ತಾದರೂ ಕೆಲಸಕ್ಕೆಬಂದಿಲ್ಲ, ಕಾಲ್ ಕೂಡ ರಿಸೀವ್ ಮಾಡ್ತಾ ಇಲ್ಲ ಅಂತ ಗಮನಿಸಿ ಅವರ ಸಹೋದ್ಯೋಗಿ ಒಬ್ಬರು ಮನೆ ಬಳಿ ಬಂದಿದ್ದಾರೆ. ಎಷ್ಟೇ ಕಾಲ್ ಮಾಡಿದ್ರೂ ಕಾಲ್ ಪಿಕ್ ಮಾಡಾದ ಕಾರಣ ಮನೆಯೊಳಗೆ ಇರಬಹುದಾ ಅಂತ ಇಣುಕಿ ನೋಡಿದಾಗ ಅಲ್ಲಿ ನೇತ್ರಾವತಿ ಶವ ಬಿದ್ದಿದ್ದು ಗೊತ್ತಾಗಿದೆ.
ಪೊಲೀಸರಿಗೆ ವಿಷಯ ತಿಳಿದು ಬಾಗಿಲು ತೆಗೆದಾಗ ಒಂದು ಕಡೆ ನೇತ್ರಾವತಿ (23) ಸತ್ತು ಬಿದ್ದಿದ್ದಳು, ಇನ್ನೊಂದೆಡೆ ಇಪ್ಪತ್ತೇಳು ವರ್ಷದ ಮಲ್ಲಿಕಾರ್ಜುನ್ (27) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಎಸ್ಪಿ ಮಲ್ಲಿಕಾರ್ಜುನ ಬಂಡಿ ತಿಳಿಸಿದರು. ಮೃತರಿಬ್ಬರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಚೌಡ ಸಮುದ್ರ ಗ್ರಾಮದವರು. ಕಳೆದ ನಾಲ್ಕು ವರ್ಷದಿಂದ ಇಬ್ಬರ ಮಧ್ಯೆ ಪ್ರೀತಿ ಇತ್ತು. ನೇತ್ರಾ ಎರಡು ವರ್ಷಗಳ ಹಿಂದೆಯೇ ಕೆಲಸಕ್ಕಾಗಿ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದಳು. ಹೆಬ್ಬಗೋಡಿ ಸಮೀಪದ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ, ಅದೇ ಬಡಾವಣೆಯಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದು ವಾಸವಿದ್ದಳು.
Belagavi: ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ್ದ ಚಾಲಾಕಿ ಕಳ್ಳಿಯ ಬಂಧನ
ಮಲ್ಲಿಕಾರ್ಜುನ್ ಆಗಾಗ ಭೇಟಿ ಮಾಡಲು ಬರ್ತಾ ಇದ್ದ. 19ನೇ ತಾರೀಖಿನಂದು ಕೂಡ ಭೇಟಿ ಆಗೋದಕ್ಕೆ ಬಂದಿದ್ದ ಮಲ್ಲಿಕಾರ್ಜುನ್ ಮತ್ತೆ ವಾಪಾಸ್ ಆಗಲೇ ಇಲ್ಲ. ನೇತ್ರಾ ಜತೆ ಕಿರಿಕ್ ತೆಗೆದಿದ್ದ ಕಾರಣ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ. ನೇತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅಥವಾ ಮಲ್ಲಿಕಾರ್ಜುನ ಹಲ್ಲೆ ಮಾಡಿದ ಕಾರಣ ಮೃತಪಟ್ಟಿದ್ದಾಳಾ ಅನ್ನೋದು ಸದ್ಯ ತನಿಖೆಯ ನಂತರವಷ್ಟೇ ತಿಳಿಯುವ ಸತ್ಯವಾಗಿದೆ. ಆದರೆ ನಿರ್ದಿಷ್ಟವಾಗಿ ಯಾವ ಕಾರಣಕ್ಕೆ ಇವರಿಬ್ಬರಿಗೆ ಈ ಸ್ಥಿತಿ ಬಂತು ಅನ್ನೋದಕ್ಕೆ ಹೇಳಲು ಯಾರೂ ಇಲ್ಲ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೋಸ್ಟ್ ಮಾರ್ಟಮ್ ರಿಪೋರ್ಟ್‌ಗಾಗಿ ಕಾಯುತ್ತಿದ್ದಾರೆ. ಅದೇನೆ ಇರಲಿ ನಾಲ್ಕು ವರ್ಷದ ಪ್ರೀತಿ ಊರಲ್ಲಿ ಅರಳಿ ಬೆಂಗಳೂರಲ್ಲಿ ಕೊನೆ ಆಗಿರೋದು ಮಾತ್ರ ದುರಾದೃಷ್ಟಕರ.
ಮದ್ಯಕ್ಕಾಗಿ ಪತ್ನಿ ಕೊಂದ ಪತಿ: ಕುಡಿಯಲು ಹಣ ನೀಡದ್ದಕ್ಕೆ ಹೆಂಡತಿಯನ್ನೆ ಗಂಡ ಕೊಲೆ ಮಾಡಿರುವ ಘಟನೆ ಸೂಲಿಬೆಲೆ ಠಾಣೆ ವ್ಯಾಪ್ತಿಯ ಚೊಕ್ಕಹಳ್ಳಿದಲ್ಲಿ ನಡೆದಿದೆ. ಚೊಕ್ಕಹಳ್ಳಿ ಸುಜಾತ(34) ಕೊಲೆಯಾದ ಮಹಿಳೆ. ಮಲ್ಲೇಶ್ ಕೊಲೆಗಾರ. ಸುಜಾತ - ಮಲ್ಲೇಶ್ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು. ಮಲ್ಲೇಶ್ ಮದ್ಯವ್ಯಸನಿಯಾಗಿದ್ದ.
ರಾಜಸ್ಥಾನ: ಅಕ್ರಮ ಸಂಬಂಧ ಶಂಕೆ: ಮಹಿಳೆಯನ್ನು ಕೊಂದ ನಾಲ್ಕನೇ ಪತಿ
ಎಂದಿನಂತೆ ಮಂಗಳವಾರ ಬೆಳಿಗ್ಗೆ ಹೆಂಡತಿ ಬಳಿ ಕುಡಿಯಲು ಹಣ ಕೇಳಿದ್ದಾನೆ. ಆಕೆ ಹಣ ನೀಡಲು ನಿರಾಕರಿಸಿದ್ದಕ್ಕೆ ಕುಪಿತಗೊಂಡ ಮಲ್ಲೇಶ್ ಹೆಂಡತಿ ಮೇಲೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಮರದ ತುಂಡಿನಿಂದ ಸುಜಾತಳ ತಲೆಗೆ ಹೊಡೆದಿದ್ದು, ಸುಜಾತ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಸ್ಥಳೀಯರು ಸೂಲಿಬೆಲೆ ಪೊಲೀಸರಿಗೆ ಮಾಹಿತಿ ನೀಡಿ ಮಲ್ಲೇಶ್‌ನನ್ನು ಒಪ್ಪಿಸಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಉಮಾಶಂಕರ್, ವೃತ್ತ ನಿರೀಕ್ಷಕ ರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.