ಸಿಎಂ ಯಡಿಯೂರಪ್ಪ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ: ಕುಚೋದ್ಯತನ ಬರಹ ಪ್ರಕಟಿಸಿದ್ದ ಕಿಡಿಗೇಡಿ

By Kannadaprabha News  |  First Published Aug 14, 2020, 8:35 AM IST

ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳ ಹೆಸರಿನಲ್ಲಿ ದುಷ್ಕರ್ಮಿ ಟ್ವೀಟ್‌ ಮಾಡಿದ್ದ ಕಿಡಿಹಗೇಡಿ| ಟ್ವಿಟರ್‌ನಲ್ಲಿ ಬಿ.ಎಸ್‌.ಯಡಿಯೂರಪ್ಪ ಹೆಸರಿನಲ್ಲಿ ಅಧಿಕೃತ ಖಾತೆ ಇದೆ| ನಕಲಿ ಖಾತೆ ತೆರೆದ ಕಿಡಿಗೇಡಿ| ಅಧಿಕೃತ ಖಾತೆಗೆ ಬಳಸಿರುವ ಪ್ರೊಫೈಲ್‌ ಮತ್ತು ಕವರ್‌ ಫೋಟೋ ಬಳಸಿದ ಅರೋಪಿ| 


ಬೆಂಗಳೂರು(ಆ.14): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದು ಕುಚೋದ್ಯತನ ಬರಹ ಪ್ರಕಟಿಸಿದ್ದ ಕಿಡಿಗೇಡಿ ವಿರುದ್ಧ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳ ಹೆಸರಿನಲ್ಲಿ ದುಷ್ಕರ್ಮಿ ಟ್ವೀಟ್‌ ಮಾಡಿದ್ದ. ಈ ವಿಷಯ ಗಮನಿಸಿದ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್‌ ಖಾತೆ ನಿರ್ವಹಿಸುವ ಖಾಸಗಿ ಸಂಸ್ಥೆಯ ವಿ.ಆನಂದ್‌, ಆರೋಪಿ ಪತ್ತೆಗೆ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ.

Tap to resize

Latest Videos

ಜೋರಾಗಿದೆ ವರುಣನ ಆರ್ಭಟ: ಉಸ್ತುವಾರಿ ಜಿಲ್ಲೆಯಲ್ಲೇ ವಾಸ್ತವ್ಯ ಹೂಡುವಂತೆ ಸಿಎಂ ಸೂಚನೆ

ಟ್ವಿಟರ್‌ನಲ್ಲಿ ಬಿ.ಎಸ್‌.ಯಡಿಯೂರಪ್ಪ ಹೆಸರಿನಲ್ಲಿ ಅಧಿಕೃತ ಖಾತೆ ಇದೆ. ಆದರೆ ಕಿಡಿಗೇಡಿ ನಕಲಿ ಖಾತೆ ತೆರೆದಿದ್ದಾನೆ. ಅಧಿಕೃತ ಖಾತೆಗೆ ಬಳಸಿರುವ ಪ್ರೊಫೈಲ್‌ ಮತ್ತು ಕವರ್‌ ಫೋಟೋಗಳನ್ನು ಬಳಸಿದ್ದಾನೆ. ಅಸಲಿ ಮತ್ತು ನಕಲಿ ಖಾತೆ ಒಂದೇ ರೀತಿಯಲ್ಲಿ ಕಾಣುತ್ತವೆ. ಬಿಜೆಪಿ ಶಾಸಕರ ವಿವಾದಾತ್ಮಕ ಫೋಟೋಗಳನ್ನು ಒಳಗೊಂಡಂತೆ ಹಲವಾರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಲಾಗಿದೆ. ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!