
ಚೆನ್ನೈ(ಡಿ. 07) ಸಿನಿಮಾದಲ್ಲಿ ಅಸಿಸ್ಟಂಟ್ ಡೈರಕ್ಟರ್ ಎಂದು ಕರೆಸಿಕೊಳ್ಳುವ ಈಕೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೆ ಪೊಲೀಸರಿಗೆ ಅವಾಜ್ ಹಾಕಿದ್ಧಾರೆ.
ಗೆಳೆಯನೊಂದಿಗೆ ಪ್ರಯಾಣಿಸುತ್ತಿದ್ದವಳು ಟ್ರಾಫಿಕ್ ನಿಯಮ ಮುರಿದಿದ್ದಳು. ಅಸಿಸ್ಟಂಟ್ ಡೈರಕ್ಟರ್ ಆಗಿರುವ ಮಹಿಳೆ ಮಾಡಿದ ಕೆಲಸದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಂಠ ಪೂರ್ತಿ ಕುಡಿದು ಕಾರಿನಲ್ಲಿ ಸ್ಟಂಟ್, ಮೂವರು ಯುವಕರು ಅರೆಸ್ಟ್!..
ಸಂಚಾರ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ, ಸಹಾಯಕ ಚಲನಚಿತ್ರ ನಿರ್ದೇಶಕರಾದ ಕಾಮಿನಿ (28) ಮತ್ತು ಆಕೆಯ ಸ್ನೇಹಿತ ಎಸ್ ತೋಡ್ಲಾ ಶೇಷು ಪ್ರಸಾದ್ (27) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಂದಿರಾ ನಗರದ ನಿವಾಸಿಗಳಾದ ಇಬ್ಬರು ಇದೀಗ ತನಿಖೆ ಎದುರಿಸಬೇಕಾಗಿದೆ.
ಶನಿವಾರ ರಾತ್ರಿ 8: 30 ರ ಸುಮಾರಿಗೆ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಮರಿಯಪ್ಪನ್ ಮತ್ತು ಇತರ ಕೆಲವು ಸಿಬ್ಬಂದಿಗಳು ತಿರುವನಮ್ಮಿಯೂರ್ ಬಳಿ ವಾಹನಗಳನ್ನು ಪರೀಕ್ಷಿಸುತ್ತಿದ್ದಾಗ ನಿರ್ದೇಶಕಿ ಪ್ರಯಾಣಿಸುತ್ತಿದ್ದ ಕಾರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ನಿರ್ದೇಶಕಿ ಗೆಳೆಯ ಶೇಷು ಪ್ರಸಾದ್ (27) ಕಾರು ಚಲಾಯಿಸುತ್ತಿದ್ದ. ಪರೀಕ್ಷೆಗೆ ಒಳಪಡಿಸಿದಾಗ ಆತ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಕಾಮಿನಿ ಆತನ ಪಕ್ಕದ ಸೀಟ್ ನಲ್ಲಿ ಕುಳಿತಿದ್ದರು.
ಕಾರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಈ ವೇಳೆ ಕಾಮಿನಿಯೂ ಕಂಠಪೂರ್ತಿ ಕುಡಿದು ಅಮಲಿನಲ್ಲಿ ಇದ್ದಿದ್ದು ಗೊತ್ತಾಗಿದೆ. ಏಕಾಏಕಿ ಅಧಿಕಾರಿಗಳ ಮೇಲೆ ಎರಗಿದ ಕಾಮಿನಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಅಲ್ಲದೇ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಬ್ಬರ ಮೇಲಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ