ಚಾರ್ಮಾಡಿ ಘಾಟ್ ನಿಂತಲ್ಲೇ ಮೈಮರೆಯೋ ಜಗತ್ತೇ ಮೆಚ್ಚಿಕೊಂಡಿರೋ ಹಸಿರ ತವರು. ಆದ್ರೆ, ಈ ಸೌಂದರ್ಯ ಖಾಕಿ ಪಡೆಗೆ ಮಾತ್ರ ಬಿಸಿ ತುಪ್ಪವಾಗಿದೆ. ಯಾಕಂದ್ರೆ, ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಕಳ್ಳ-ಕಾಕರಿಗೆ ಈ ಜಾಗವೇ ಫೇವರೆಟ್. ಕೊಲೆ ಮಾಡಿ ಹೆಣ ಬಿಸಾಕೋಕೆ ಈ ಜಾಗವನ್ನು ಪಾತಕಿಗಳು ಉಪಯೋಗಿಸುತ್ತಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.3): ವರ್ಷಪೂರ್ತಿ ತಣ್ಣನೆಯ ಗಾಳಿ. ಮುಗಿಲೆತ್ತರದ ಬೆಟ್ಟ-ಗುಡ್ಡ. ಸದಾ ಹಸಿರು , ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಸಾಗ್ತಿದ್ರೆ ಸ್ವರ್ಗ ಅಂಗೈಲಿ. ಮಲೆನಾಡ ಚಾರ್ಮಾಡಿಯಂದ್ರೆ ಪ್ರವಾಸಿಗ್ರು ನಿಂತಲ್ಲೇ ತೇಲ್ತಾರೆ. ದೇಶ-ವಿದೇಶಿಗರೂ ಕೂಡ ಇಲ್ಲಿನ ವನದೇವಿಗೆ ಫಿದಾ ಆದವ್ರೆ. ಆದ್ರೆ, ಖಾಕಿ ತೊಟ್ಟ ಪೊಲೀಸ್ರಿಗೆ ಮಾತ್ರ ಚಾರ್ಮಾಡಿಯ ಸೊಬಗಂದ್ರೆ ಸಂಕಟ, ಭಯ, ತಲೆನೋವು, ಜಗತ್ತೇ ಮೆಚ್ಚೋ ಸೌಂದರ್ಯ ಪೊಲೀಸರಿಗೆ ಮಾತ್ರ ಶಾಪ.
ಅಳವಾದ ಪ್ರಪಾತದಲ್ಲಿ ಶವ ಪತ್ತೆ!
ಚಿಕ್ಕಮಗಳೂರು ದಕ್ಷಿಣ ಕನ್ನಡದ ಸಂಪರ್ಕ ಸೇತುವೆ ಚಾರ್ಮಾಡಿ ಘಾಟ್. ನಿಂತಲ್ಲೇ ಮೈಮರೆಯೋ ಜಗತ್ತೇ ಮೆಚ್ಚಿಕೊಂಡಿರೋ ಹಸಿರ ತವರು. ಆದ್ರೆ, ಈ ಸೌಂದರ್ಯ ಖಾಕಿ ಪಡೆಗೆ ಮಾತ್ರ ಬಿಸಿ ತುಪ್ಪ. ನುಂಗೋಂಗೂ ಇಲ್ಲ. ಉಗುಳೋಂಗೂ ಇಲ್ಲ. ಯಾಕಂದ್ರೆ, ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಕಳ್ಳ-ಕಾಕರಿಗೆ ಈ ಜಾಗವೇ ಫೇವರೆಟ್. ಕೊಲೆ ಮಾಡಿ ಹೆಣ ಬಿಸಾಕೋಕೆ ಈ ಜಾಗವನ್ನು ಪಾತಕಿಗಳು ಉಪಯೋಗಿಸುತ್ತಿದ್ದಾರೆ. ಇದರಿಂದ ಪೊಲೀಸರಿಗೆ ಶವಗಳನ್ನು ಹುಡುಕಾಟ ನಡೆಸುವುದೇ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಮೊದಲೇ ಸಾಕಷ್ಟು ತಿರುವುಗಳಿಂದ ಕೂಡಿರುವ ಧರ್ಮಸ್ಥಳದ ಮಾರ್ಗವಾಗಿರುವ ಕೊಟ್ಟಿಗೆರೆಹಾರ ಗ್ರಾಮದಿಂದ ಸುಮಾರು 12 ಕಿ.ಮೀ. ವ್ಯಾಪ್ತಿಯವರೆಗೆ ನಾವು ಈ ಘಾಟ್ ಪ್ರದೇಶವನ್ನು ಕಾಣಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಈ ಅಂಕುಡೊಂಕಿನ ರಸ್ತೆಯಲ್ಲಿ ಸಾಗುತ್ತಿದ್ದರೆ ಸ್ವಚ್ಛಂದ ಪರಿಸರವನ್ನು ಸವಿಯಬಹುದು. ಮೋಡ ಮತ್ತು ಮಂಜಿನ ಸಮ್ಮಿಶ್ರಣದ ವಾತಾವರಣ ಅಹ್ಲಾದಕರ ಎನಿಸುತ್ತದೆ.
ಆದ್ರೆ ಇಂತಹ ಅಪರೂಪದ ಪರಿಸರ ಮಾತ್ರ ಯಾರೂ ಕಲ್ಪಿಸಿಕೊಳ್ಳದಷ್ಟು ಅಪಾಯಕಾರಿ ಸ್ಪಾಟ್ ಆಗಿದೆ, ಏಕೆಂದ್ರೆ ಹೊರ ಜಿಲ್ಲೆಗಳಿಂದ ಬಹುತೇಕ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೊಲೆಯಾದ ಶವಗಳನ್ನು ಯಾವ್ದೆ ಸುಳಿವಿಲ್ಲದೆ ಈ ಪ್ರಪಾತಕ್ಕೆ ಎಸೆದು ಹೋಗುವುದು ಸಾಮಾನ್ಯವಾಗಿಬಿಟ್ಟಿದೆ ಇಂತಹ ಅಪರಾಧದ ಚಟುವಟಿಕೆಗಳು ಸ್ಥಳೀಯರಿಗೆ ಆತಂಕವನ್ನು ಮೂಡಿಸಿದೆ ಕೊಟ್ಟಿಗೆಹಾರ ನಿವಾಸಿ ಸಂಜಯ್ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಆರು ತಿಂಗಳ ಬಳಿಕ ಶವ ನೋಡಿ ಪೊಲೀಸರೇ
ಒಂದು ತಿಂಗಳ ಅವಧಿಯಲ್ಲಿ ಎರಡು ಶವಗಳಿಗೆ ಹುಡುಕಾಟ!
ಇಲ್ಲಿ ಪೊಲೀಸರ ಗಮನಕ್ಕೂ ಬಾರದೆ ಎಷ್ಟು ಹೆಣಗಳು ಕರಗಿವಿಯೋ ಅಥವ ಪ್ರಾಣಿಗಳಿಗೆ ಆಹಾರವಾಗಿವೆಯೋ ಗೊತ್ತಿಲ್ಲ ಅಂತಾರೆ ಸ್ಥಳಿಯರು. ಆದ್ರೆ, ತಲೆನೋವಾಗಿರೋ ಚಾರ್ಮಾಡಿ ಸ್ಥಿತಿ-ಗತಿ ಬಗ್ಗೆ ಪೊಲೀಸರು ಅಲರ್ಟಾಗಿದ್ದಾರೆ. ಈ ಚಾರ್ಮಾಡಿ ಘಾಟ್ ಪ್ರದೇಶ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ. 2009ರಿಂದ 2013ರವೆಗೂ 6 ಶವಗಳು ಪತ್ತೆಯಾಗಿತ್ತು. ಅದರಲ್ಲಿ ಒಂದು ಶವದ ಗುರುತು ಈವರೆಗೂ ಪತ್ತೆಯಾಗಿಲ್ಲ, ಕಳೆದ ಐದು ಆರು ವರ್ಷಗಳಲ್ಲಿ ಯಾವುದೇ ಕೊಲೆ ಮಾಡಿ ಶವ ಎಸೆದಿರುವ ಪ್ರಕರಣಗಳು ವರದಿಯಾಗಿಲ್ಲ , ಆದ್ರೆ ಸದ್ಯ ಕಳೆದ ಒಂದು ತಿಂಗಳ ಅವಧಿಯಲ್ಲಿ ಎಲ್ಲೋ ಕೊಲೆ ಮಾಡಿ ಎಸೆದ ಎರಡು ಶವಗಳಿಗೆ ಪೊಲೀಸರು ಹುಡುಕಾಟವನ್ನು ನಡೆಸಿದ್ದರು. ಅದರಲ್ಲಿ ಒಂದು ಶವ ಸಿಕ್ಕಿರೆ ಮತ್ತೊಂದರ ಸುಳಿವಿಲ್ಲ, ಇದು ಸಹಜವಾಗಿಯೇ ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ.
MANGALURU: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ!
ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ಕಠಿಣ ಕ್ರಮತೆಗೆದುಕೊಳ್ಳುವ ಭರವಸೆ ನೀಡಿದ್ದು ಶೀಘ್ರದಲ್ಲೇ ಸಂಘ ಸಂಸ್ಥೆಗಳು, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಎಸ್ ಪಿ ಉಮಾಪ್ರಶಾಂತ್ ತಿಳಿಸಿದರು.ಅಲ್ಲದೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ತಪಾಸಣೆಬಿಗಿಗೊಳಿಸಿ, ಸಿಸಿಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಒಟ್ಟಾರೆ ಕೊಲೆಗೈದ ಶವಗಳಿಗೆ ಮುಕ್ತಿ ಕಾಣಿಸುವ ಧಾಮವೆಂಬಂತಾಗಿರುವ ಈ ಚಾರ್ಮಾಡಿ ಘಾಟ್ ನಲ್ಲಿ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಲಿದೆ ಎಂಬುದನ್ನು ನಿರೀಕ್ಷಿಸಬೇಕಿದೆ.