Mangaluru: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ!

By Suvarna News  |  First Published Feb 3, 2023, 7:03 PM IST

ಹಾಡಹಗಲೇ ಜ್ಯುವೆಲ್ಲರಿ ಶಾಪ್ ನುಗ್ಗಿ ಸಿಬ್ಬಂದಿಯನ್ನ ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ‌ಮಂಗಳೂರು ನಗರದ ಹಂಪನಕಟ್ಟೆ ಬಳಿ‌ ನಡೆದಿದೆ. ಹಂಪನಕಟ್ಟೆಯ ಮಂಗಳೂರು ‌ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಘಟನೆ ನಡೆದಿದೆ.


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಫೆ.3): ಹಾಡಹಗಲೇ ಜ್ಯುವೆಲ್ಲರಿ ಶಾಪ್ ನುಗ್ಗಿ ಸಿಬ್ಬಂದಿಯನ್ನ ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ‌ಮಂಗಳೂರು ನಗರದ ಹಂಪನಕಟ್ಟೆ ಬಳಿ‌ ನಡೆದಿದೆ. ಹಂಪನಕಟ್ಟೆಯ ಮಂಗಳೂರು ‌ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಘಟನೆ ನಡೆದಿದ್ದು, ಜ್ಯುವೆಲ್ಲರಿ ಸಿಬ್ಬಂದಿ, ಅತ್ತಾವರ ನಿವಾಸಿ ರಾಘವೇಂದ್ರ(50) ಹತ್ಯೆಯಾದವರು.‌ ಕೇಶವ ಆಚಾರ್ಯ ಎಂಬವರಿಗೆ ಸೇರಿದ ಶಾಪ್ ಇದಾಗಿದ್ದು, ಮಾಲೀಕ ‌ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಒಬ್ಬನೇ ಇದ್ದ ಸಿಬ್ಬಂದಿ ರಾಘವೇಂದ್ರ ಮೇಲೆ ದಾಳಿ ನಡೆಸಲಾಗಿದೆ. ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Tap to resize

Latest Videos

Bengaluru: ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ: ಆರೋಪಿ ಬಂಧನ

ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್: ಕಮಿಷನರ್ ಶಶಿಕುಮಾರ್
ಮಂಗಳೂರು ‌ಪೊಲೀಸ್ ಕಮಿಷನರ್ ಶಶಿಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಕೇಶವ ಆಚಾರ್ಯ ಎಂಬವರ ಮಾಲೀಕತ್ವದ ಮಂಗಳೂರು ಜ್ಯುವೆಲ್ಲರಿ ಇದಾಗಿದೆ. ಕೇಶವ ಆಚಾರ್ಯ ಮಧ್ಯಾಹ್ನ 1.30ಕ್ಕೆ ಊಟಕ್ಕೆ ಹೋದ ಬಳಿಕ ಘಟನೆ‌ ನಡೆದಿದೆ. ಸುಮಾರು 3.30-3.45ರ ಸುಮಾರಿಗೆ ಘಟನೆ ನಡೆದಿದೆ.‌ ಕೇಶವ ಆಚಾರ್ಯ 3.45ರ ಅಸುಪಾಸು ಶಾಪ್ ಗೆ ಬಂದಿದ್ದಾರೆ. ಈ ವೇಳೆ ಅಂಗಡಿ ಮುಂಭಾಗ ಕಾರು ನಿಲ್ಲಿಸೋ ಜಾಗದಲ್ಲಿ ಬೈಕ್ ನಿಂತಿತ್ತು. ಆಗ ಕೇಶವ ಆಚಾರ್ಯ ಬೈಕ್ ತೆಗೆಯಲು ಸಿಬ್ಬಂದಿ ರಾಘವೇಂದ್ರಗೆ ಕರೆ ಮಾಡಿದ್ದಾರೆ.‌ ಆಗ ಕಾಲ್ ತೆಗೆದ ರಾಘವೇಂದ್ರ ತನಗೆ ಯಾರೋ ಚೂರಿ‌ ಹಾಕಿದ್ದಾಗಿ ಬೊಬ್ಬೆ ಹಾಕಿದ್ದಾರೆ. ತಕ್ಷಣ ಕೇಶವ ಆಚಾರ್ಯ ಕಾರು ನಿಲ್ಲಿಸಿ ಅಂಗಡಿ ಬಳಿ ಬಂದಾಗ ಒಬ್ಬಾತ ಓಡಿ ಹೋಗಿದ್ದಾನೆ.‌ ಒಳಗೆ ಹೋಗಿ ನೋಡಿದಾಗ ಕತ್ತಿನ ಭಾಗಕ್ಕೆ ‌ಇರಿದ ರೀತಿಯಲ್ಲಿ ರಾಘವೇಂದ್ರ ಬಿದ್ದಿದ್ದರು.‌ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಏಳು ತಿಂಗಳಿನಿಂದ ಇಲ್ಲಿ ಕೆಲಸ ಮಾಡ್ತಿದಾರೆ.‌

ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಆರು ತಿಂಗಳ ಬಳಿಕ ಶವ ನೋಡಿ ಪೊಲೀಸರೇ ಶಾಕ್!

ಜ್ಯುವೆಲ್ಲರಿಯಲ್ಲಿದ್ದ ಕೆಲವು ಗೋಲ್ಡ್ ಚೈನ್ ಕಾಣೆಯಾದ ಬಗ್ಗೆ ಮಾಲೀಕರು ಹೇಳಿದ್ದಾರೆ. ಲೆಡ್ಜರ್ ನೋಡಿಕೊಂಡು ಎಷ್ಟು ಚಿನ್ನ ಕಾಣೆಯಾಗಿದೆ ಅಂತ ಪರಿಶೀಲಿಸ್ತಾ ಇದಾರೆ.‌ ಹೆಲ್ಮೆಟ್ ಹಾಕಿ ಮಾಸ್ಕ್ ಧರಿಸಿಕೊಂಡು ಆರೋಪಿ ಬಂದಿದ್ದ. ಆರೋಪಿ ಅರ್ಧ ಗಂಟೆಗೂ ಹೆಚ್ಚು ಕಾಲ ಜ್ಯುವೆಲ್ಲರಿ ಒಳಗೆ ಇದ್ದ. ಅರ್ಧ ಗಂಟೆ ಬಿಟ್ಟು ಜ್ಯುವೆಲ್ಲರಿಯಿಂದ ಹೊರಗೆ ಬಂದಿರೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಜ್ಯುವೆಲ್ಲರಿ ಒಳಗಿನ ಸಿಸಿಟಿವಿಯಲ್ಲಿ ರೆಕಾರ್ಡಿಂಗ್ ಇಲ್ಲ, ಲೈವ್ ಸ್ಟ್ರೀಮಿಂಗ್ ಅಷ್ಟೇ ಇದೆ. ಹೀಗಾಗಿ ಬೇರೆ ಅಂಗಡಿಗಳ ಸಿಸಿಟಿವಿ ಚೆಕ್ ಮಾಡ್ತಾ ಇದೀವಿ. 16 ಗ್ರಾಂ ಚೈನ್ ಮತ್ತು ಒಂದು ಉಂಗುರ ಕೊನೆಯದಾಗಿ ಇಲ್ಲಿ ಬಿಲ್ಲಿಂಗ್ ಆಗಿದೆ. ಪುಸ್ತಕದಲ್ಲೂ ಅದರ ಲೆಕ್ಕಾಚಾರ ಮಾಡಿರೋದು ಇದೆ, ಆದರೆ ಇದು ಆರ್ಡರ್ ಕೊಟ್ಟಿರೋದು ಬೇರೆಯೇ ಗೊತ್ತಿಲ್ಲ. ಆದರೆ ಒಂದೆರಡು ಚೈನ್ ಮಿಸ್ಸಿಂಗ್ ಆಗಿರೋ ಬಗ್ಗೆ ಮಾಲೀಕರು ಹೇಳಿದ್ದಾರೆ ಎಂದಿದ್ದಾರೆ.

click me!