ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಆರು ತಿಂಗಳ ಬಳಿಕ ಶವ ನೋಡಿ ಪೊಲೀಸರೇ ಶಾಕ್!

By Govindaraj S  |  First Published Feb 3, 2023, 2:54 PM IST

ರಾಜಧಾನಿಯಲ್ಲಿ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದ ಮಹಿಳೆಯೊಬ್ಬರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೌದು! ಮಹಿಳೆ ಶವ ಕೊಳೆತು ಆರು ತಿಂಗಳಾದರೂ ಯಾರ ಕಣ್ಣಿಗೂ ಕಾಣದೇ ಇರುವುದು ಆಶ್ಚರ್ಯ ಮೂಡಿಸಿದೆ. 


ಬೆಂಗಳೂರು (ಫೆ.03): ರಾಜಧಾನಿಯಲ್ಲಿ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದ ಮಹಿಳೆಯೊಬ್ಬರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೌದು! ಮಹಿಳೆ ಶವ ಕೊಳೆತು ಆರು ತಿಂಗಳಾದರೂ ಯಾರ ಕಣ್ಣಿಗೂ ಕಾಣದೇ ಇರುವುದು ಆಶ್ಚರ್ಯ ಮೂಡಿಸಿದೆ. ಸದ್ಯ ಈ ಘಟನೆಯಿಂದ ಹುಳಿಮಾವು ಠಾಣಾ ಪೊಲಿಸರಿಗೆ ಫುಲ್​ ಶಾಕ್​ ಆಗಿದೆ. ಹುಳಿಮಾವು ಬಳಿಯ ಅಕ್ಷಯನಗರದ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. 

ನಿನ್ನೆ (ಗುರುವಾರ) ಪೊಲೀಸರು ಮೂತ್ರ ವಿಸರ್ಜನೆಗೆಂದು ಹೋಗಿದ್ದರು. ಈ ವೇಳೆ ಖಾಲಿ ನಿವೇಶನವೊಂದರ ಪೊದೆಗಳ ನಡುವೆ ಇರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ದೇಹದ ಅವಶೇಷಗಳು ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.  ಅಲ್ಲದೇ ಶವದ ಬಳಿ ಮಹಿಳೆಯರು ಬಳಸುವ ಚಪ್ಪಲಿಗಳು ಸಹ ಪತ್ತೆಯಾಗಿದೆ. ಕೊಳೆತು ಹೋದ ಮೃತದೇಹ ಯಾರದು? ಸತ್ತು ಎಷ್ಟು ದಿನಗಳಾಗಿರಬಹುದು? ಹತ್ಯೆಯೋ ಆತ್ಮಹತ್ಯೆಯೋ, ಎಂಬ ಹಲವಾರು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಳ್ಳಲು ತನಿಖೆಗೆ ಮುಂದಾಗಿದ್ದಾರೆ. 

Tap to resize

Latest Videos

ಮಾನ್ಯತಾ ಟೆಕ್‌ ಪಾರ್ಕ್ ಪೊಲೀಸರ ಸುಲಿಗೆ ಪ್ರಕರಣ: ಇಬ್ಬರು ಪೊಲೀಸ್ ಸಿಬ್ಬಂದಿ ಸೇವೆಯಿಂದ ವಜಾ

ಇನ್ನು ಪೊಲೀಸರು ಮಹಿಳೆ ಶವ ಎಂಬುದು ಧೃಡ ಪಡಿಸಿದ್ದಾರೆ. ಸದ್ಯ 6 ತಿಂಗಳ ಹಿಂದಿನ ಮಿಸ್ಸಿಂಗ್ ಕೇಸ್​ಗಳ ಬಗ್ಗೆ ವಿವರ ಕಲೆ ಹಾಕುತ್ತಿದ್ದಾರೆ. ಏಳು ತಿಂಗಳ ಹಿಂದೆ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆಯೊಬ್ಬರು ನಾಪತ್ತೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅದೇ ಮಹಿಳೆಯ ಶವ ಎಂದು ಅನುಮಾನ ವ್ಯಕ್ತವಾಗಿದೆ. ಸದ್ಯ ವೈದ್ಯಕೀಯ ಪರೀಕ್ಷೆ ಬಳಿಕವೇ ಎಲ್ಲದಕ್ಕೂ ಉತ್ತರ ಸಿಗಲಿದೆ. ಈ ಬಗ್ಗೆ ಹುಳಿಮಾವು ಠಾಣಾ ಪೊಲೀಸರು ಪ್ರಕರಣವನ್ನ ತನಿಖೆ ಮುಂದುವರೆಸಿದ್ದಾರೆ.

ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ: ಆರೋಪಿ ಬಂಧನ

ಅಪರಿಚಿತ ಮಹಿಳೆ ಶವ ಪತ್ತೆ: ಅಪರಿಚಿತ ಮಹಿಳೆಯ ಶವದ ವಾರಸುದಾರರ ಪತ್ತೆ ಸಹಕರಿಸುವಂತೆ ಗ್ರಾಮೀಣ ಪೊಲೀಸ್‌ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 2022ರ ನ. 29ರಂದು ಸಾಯಂಕಾಲ ಗಂಟೆಗೆ ತಾಲೂಕಿನ ಇರಕಲ್ಲಗಡಾ ಬಸ್‌ ನಿಲ್ದಾಣದದಲ್ಲಿ ಅಸ್ವಸ್ಥಳಾಗಿ ಮಲಗಿದ್ದು, ಸುಮಾರು 60 ವರ್ಷದ ಅಪರಿಚಿತ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಯಲಮಗೇರಿ ಗ್ರಾಮದ ನಾಗರಾಜ ಕಟ್ಟಿಮನಿ ಎಂಬವರು ದೂರು ನೀಡಿದ್ದು, ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ. 2ರಂದು ಮಹಿಳೆಯು ಮೃತಪಟ್ಟಿದ್ದು, ಮೃತ ಮಹಿಳೆಯ ಹೆಸರು ವಿಳಾಸ ಹಾಗೂ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಾಹಿತಿಗೆ ಕೊಪ್ಪಳ ಗ್ರಾಮೀಣ ಕಂಟ್ರೋಲ್‌ ರೂ. 08539-230100, 230222, ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ಮೊ. 9480803746 ಹಾಗೂ ದೂ. 08539-221333 ಸಂಪರ್ಕಿಸಲು ಕೋರಲಾಗಿದೆ.

click me!