
ಚಂಡೀಗಢ: ಇಲ್ಲಿನ ವಿಶ್ವವಿದ್ಯಾಲಯಲದಲ್ಲಿ ನಡೆದ ವಿದ್ಯಾರ್ಥಿನಿಯರ ಖಾಸಗಿ ಫೋಟೊ ಮತ್ತು ವಿಡಿಯೋ ಸೋರಿಕೆ ಪ್ರಕರಣ ಸಂಬಂಧ ಮಹತ್ವದ ಮಾಹಿತಿ ಹೊರಬಂದಿದ್ದು, ಇಬ್ಬರು ಆರೋಪಿಗಳು ಮೂರನೇ ಆರೋಪಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯಾರ್ಥಿನಿಯ ಬಾಯ್‌ಫ್ರೆಂಡ್ ಮತ್ತು ಆತನ ಸ್ನೇಹಿತನ ಬಳಿ ಈಕೆಯ ಖಾಸಗಿ ವಿಡಿಯೋಗಳಿದ್ದವು. ಹಾಸ್ಟೆಲ್‌ನಲ್ಲಿರುವ ಉಳಿದ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ತೆಗೆದು ಕಳಿಸದಿದ್ದರೆ ಈಕೆಯ ವಿಡಿಯೋವನ್ನು ಸಾರ್ವಜನಿಕವಾಗಿ ಹರಿಬಿಡುವ ಬೆದರಿಯನ್ನು ಬಾಯ್‌ಫ್ರೆಂಡ್ ಸನ್ನಿ ಮೆಹ್ತಾ ಮತ್ತು ರಂಕಜ್ ವರ್ಮಾ ಹಾಕಿದ್ದರು ಎಂದು ತಿಳಿದುಬಂದಿದೆ. ಪಂಜಾಬ್ ಪೊಲೀಸರು ಪ್ರಕರಣ ಸಂಬಂಧ ಆಕೆಯ ಬಾಯ್‌ಫ್ರೆಂಡ್ ಎನ್ನಲಾದ ಸನ್ನಿ ಮೆಹ್ತಾ (23), ವಿದ್ಯಾರ್ಥಿನಿ ಮತ್ತು ಮೆಹ್ತಾನ ಗೆಳೆಯ ರಂಕಜ್ ವರ್ಮಾ (31) ರನ್ನು ಬಂಧಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಇವರನ್ನು ಬಂಧಿಸಲಾಗಿದೆ.
ಪ್ರಕರಣ ನಂತರ ನಡೆದ ಬೆಳವಣಿಗೆಗಳು:
ಇದನ್ನೂ ಓದಿ: ಲೇಡಿಸ್ ಹಾಸ್ಟೆಲ್‌ನ ಬಾತ್‌ರೂಮ್ ವಿಡಿಯೋ ಲೀಕ್: ಬೀದಿಗಳಿದ ವಿದ್ಯಾರ್ಥಿನಿಯರು
ಇದನ್ನೂ ಓದಿ: ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ
ಸರ್ಕಾರದ ಪ್ರತಿಕ್ರಿಯೆ:
ಪಂಜಾಬ್ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ (School Education Minister) ಹರ್ಜೋತ್ ಸಿಂಗ್ ಬೈನ್ಸ್ (Harjot Singh Bains) ಘಟನೆ ಬಗ್ಗೆ ಮಾಹಿತಿ ಕೇಳಿದ್ದು, ಕಾಲೇಜು ವಿದ್ಯಾರ್ಥಿಗಳು ಸಂಯಮದಿಮದ ವರ್ತಿಸುವಂತೆ ಹೇಳಿದ್ದಾರೆ. ಆರೋಪಿ ಯಾರೇ ಆದರೂ ಸುಮ್ಮನೆ ಬಿಡುವುದಿಲ್ಲ. ಇದೊಂದು ತುಂಬಾ ಸೂಕ್ಷ್ಮವಾದ ವಿಚಾರ, ಅಲ್ಲದೇ ಇದು ನಮ್ಮ ಸಹೋದರಿಯರು ಹಾಗೂ ಮಕ್ಕಳ ಮರ್ಯಾದೆಯ ವಿಚಾರ, ಈ ವಿಚಾರದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರೂ ತುಂಬಾ ಜಾಗರೂಕರಾಗಿರಬೇಕು. ಇದೊಂದು ಪರೀಕ್ಷೆಯ ಸಮಯವೂ ಹೌದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ