Bengaluru: ಹಣಕ್ಕಾಗಿ ಮಗನಿಗೆ ಬೆಂಕಿ ಇಟ್ಟ ಕ್ರೂರಿ ತಂದೆ: ಚಿಕಿತ್ಸೆ ಫಲಿಸದೆ ಮಗ ಸಾವು

By Govindaraj S  |  First Published Apr 7, 2022, 4:37 PM IST

ವ್ಯವಹಾರದ ಲೆಕ್ಕ ನೀಡಲಿಲ್ಲ ಎಂಬ ಕಾರಣಕ್ಕೆ ಮಗನಿಗೇ ಥಿನ್ನರ್ ಎರಚಿ ಬೆಂಕಿ ಇಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫ್ಯಾಬ್ರಿಕೇಷನ್ ಬಿಸಿನೆಸ್ ಮಾಡುತ್ತಿದ್ದ ಸುರೇಂದ್ರ (51) ಎಂಬಾತ ತನ್ನ ಮಗ ಅರ್ಪಿತ್ (25) ಗೆ ಬೆಂಕಿ ಹಚ್ಚಿದ್ದ.


ಬೆಂಗಳೂರು (ಏ.07): ವ್ಯವಹಾರದ ಲೆಕ್ಕ ನೀಡಲಿಲ್ಲ ಎಂಬ ಕಾರಣಕ್ಕೆ ಮಗನಿಗೆ ಥಿನ್ನರ್ ಎರಚಿ ಬೆಂಕಿ ಇಟ್ಟ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಏಪ್ರಿಲ್ ಒಂದನೇ ತಾರೀಖು ಮಧ್ಯಾಹ್ನ 2.30ಕ್ಕೆ ಚಾಮರಾಜಪೇಟೆ (Chamrajpet) ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫ್ಯಾಬ್ರಿಕೇಷನ್ ಬಿಸಿನೆಸ್ ಮಾಡುತ್ತಿದ್ದ ಸುರೇಂದ್ರ (51) ಎಂಬಾತ ತನ್ನ ಮಗ ಅರ್ಪಿತ್ (25) ಗೆ ಬೆಂಕಿ ಹಚ್ಚಿದ್ದ. 5 ದಿನಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ್ ಇಂದು ಅಸುನೀಗಿದ್ದಾನೆ. 

ಫ್ಯಾಬ್ರಿಕೇಷನ್ ಬಿಸಿನೆಸ್ ನ ಜವಾಬ್ದಾರಿಯನ್ನು ಸುರೇಂದ್ರ ತನ್ನ ಮಗ ಅರ್ಪಿತ್‌ಗೆ ನೀಡಿದ್ದ. ಇತ್ತೀಚಿನ ವ್ಯವಹಾರದ ಲೆಕ್ಕ ಪತ್ರಗಳನ್ನ ತಂದೆ ನೀಡಿರಲಿಲ್ಲ ಅರ್ಪಿತ್. ಏಪ್ರಿಲ್ 1 ರಂದು ಮಧ್ಯಾಹ್ನ ಸುಮಾರು 1.5 ಕೋಟಿ ಲೆಕ್ಕ‌ ಕೇಳಿದಾಗ ಅಪ್ಪ ಮಗನ ಮಧ್ಯೆ ಶುರುವಾದ ಜಗಳ ತಾರಕಕ್ಕೆ ಏರಿತ್ತು. ಲೆಕ್ಕ ಕೊಟ್ಟರೂ ಸಾಯಿಸ್ತೀಯ ಲೆಕ್ಕ ಕೊಡದಿದ್ದರೂ ಸಾಯಿಸ್ತೀಯಾ ಏನ್ ಬೇಕಾದರೂ ಮಾಡು ಎಂದು ಉಡಾಫೆ ಮಾತನಾಡಿದ್ದಾನೆ ಅರ್ಪಿತ್. ಇದೇ ವೇಳೆ‌ ಗೋಡೌನ್‌ನಲ್ಲಿ ಇದ್ದ ಥಿನ್ನರ್ ಎರಚಿದಾಗ ಅರ್ಪಿತ್ ಹೊರಗೆ ಬಂದರೂ ಹಿಂದೆ ಬಂದ ಸುರೇಂದ್ರ ಬೆಂಕಿ ಹಚ್ಚಿರುವುದು ಸಿಸಿ ಕ್ಯಾಮರಾದಲ್ಲಿ (CC Camera) ಸೆರೆಯಾಗಿದೆ.

Tap to resize

Latest Videos

ಚಿಕಿತ್ಸೆ ಪಡೆಯುವ ವೇಳೆ ಅರ್ಪಿತ್ ನೀಡಿದ ಹೇಳಿಕೆ ಹಾಗೂ ಪ್ರತ್ಯಕ್ಷ ದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಚಾಮರಾಜಪೇಟೆ ಪೊಲೀಸರು ಕೊಲೆ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಸುರೇಂದ್ರನನ್ನ ಬಂಧಿಸಿದ್ದು, ತಾನೇ ಬೆಂಕಿ ಹಚ್ಚಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ‌ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸವದತ್ತಿ ಈ ಸಾವು ನ್ಯಾಯವೇ? ಜನ್ಮನೀಡಿದವಳನ್ನು ಆಕ್ಸಿಜನ್ ಇಲ್ಲದ ಆಂಬುಲೆನ್ಸ್ ನಲ್ಲಿ ಕಳಿಸಿದ್ರು! 

ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ: ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡೆದಿದೆ. ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ಪೋಷಕರು ಈ ಯುವತಿಗೆ ಜೋರು ಮಾಡಿದ್ದು, ಇದೇ ಕಾರಣಕ್ಕೆ ಆಕೆ ಪೋಷಕರೊಂದಿಗೆ ಕಿತ್ತಾಡಿಕೊಂಡು ಬಂದು ನಗರದ ನಂತರ ಇಎಸ್‌ಐ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ, 21 ವರ್ಷದ  ಯುವತಿ ಬಂಜಾರಾ ಹಿಲ್ಸ್‌ನ ಶ್ರೀ ರಾಮ್ ನಗರದ (Sri Ram Nagar)ನಿವಾಸಿಯಾಗಿದ್ದಾಳೆ. ಈಕೆಗೆ ಮೂವರು ಸಹೋದರರಿದ್ದು, ಪೋಷಕರ ಏಕಮಾತ್ರ ಪುತ್ರಿ ಈಕೆಯಾಗಿದ್ದಳು ಎಂದು ತಿಳಿದು ಬಂದಿದೆ. ಮೆಟ್ರೋ ನಿಲ್ದಾಣದಿಂದ ಜಿಗಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಆಕೆಯನ್ನು ಕೂಡಲೇ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಆಕೆಯ ಮನೆಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪೋಷಕರೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಆಕೆ ಮಂಗಳವಾರ ಮನೆ ಬಿಟ್ಟು ಹೋಗಿದ್ದಳು.

10ನೇ ತರಗತಿ ಪಾಸಾಗದಿದ್ದರೆ ಮನೆಯಿಂದ ಹೊರ ಹಾಕುವೆ ಎಂದ ತಂದೆಯ ಕೊಲೆ

ಸಂಜೆ 5:30 ರ ಸುಮಾರಿಗೆ, ಅವಳು ಮೆಟ್ರೋ ನಿಲ್ದಾಣವನ್ನು (Metro station) ಹತ್ತಿ ಅಲ್ಲಿಂದ ಕೆಳಗೆ ಜಿಗಿದಳು. ರಕ್ತದ ಮಡುವಿನಲ್ಲಿ ಯುವತಿ ಬಿದ್ದಿರುವುದನ್ನು ನೋಡಿ ಯಾರೋ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಕೊನೆಯ ಕ್ಷಣಗಳು ಮತ್ತು ಆಕೆಯ ಸಾವಿನ ಹಿಂದಿನ ನಿಜವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು (CCTV footage) ಪರಿಶೀಲಿಸಿದರು. ಕಳೆದ ತಿಂಗಳು ಬೆಂಗಳೂರಿನಲ್ಲಿ ಪರೀಕ್ಷೆಯಲ್ಲಿ (Exam) ನಕಲು ಮಾಡುವಾಗ ಸಿಕ್ಕಿ ಬಿದ್ದು ಕಾಲೇಜಿನಿಂದ ಡಿಬಾರ್‌ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು (Student) ಐದು ಅಂತಸ್ತಿನ ಪಿ.ಜಿ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ (Suicide)ಮಾಡಿಕೊಂಡಿರುವ ಘಟನೆ ಜೀವನ ಭೀಮಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

click me!