Bengaluru: ಬೆಳ್ಳಿ ಅಂಗಡಿ‌ ಕನ್ನ ಹಾಕಿದ್ದ ಆರೋಪಿಗಳ ಬಂಧನ: ಕೃತ್ಯ ನಡೆದ 4 ಗಂಟೆಯೊಳಗೆ ಅಂದರ್‌

By Suvarna NewsFirst Published May 23, 2022, 4:27 PM IST
Highlights

*ಬೆಳ್ಳಿ ಅಂಗಡಿ‌ ಕನ್ನ ಹಾಕಿದ್ದ ಆರೋಪಿಗಳ ಬಂಧನ
*ಆರೋಪಿಗಳಾದ ರಾಜೇಶ್,ರಾಹುಲ್,ಮಧು ಅರೆಸ್ಟ್
*ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ರಾಹುಲ್ ಜೈನ್ 

ಬೆಂಗಳೂರು (ಮೇ 23): ಬೆಳ್ಳಿ ಅಂಗಡಿ‌ ಕನ್ನ ಹಾಕಿದ್ದ ಆರೋಪಿಗಳನ್ನು ಕೃತ್ಯ ನಡೆದ 4 ಗಂಟೆಯೊಳಗೆ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಾದ ರಾಜೇಶ್, ರಾಹುಲ್, ಮಧು  ಸೇರಿ ಮೂವರನ್ನು ಬಂಧಿಸಿದ್ದಾರೆ. ಅನ್ನ ಹಾಕಿದ ಮನೆಗೆ ರಾಹುಲ್ ಜೈನ್ ಕನ್ನ ಹಾಕಿದ್ದು ಚಾಮರಾಜಪೇಟೆ ಬೆಳ್ಳಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ. 21ರ ಶನಿವಾರ ರಾತ್ರಿ ಸಿಸಿಟಿವಿ ಮೇಲೆ ತಿರುಗಿಸಿ ಕಳ್ಳತನ ನಡೆಸಿದ್ದರು. ಐದಾರು ವರ್ಷದಿಂದ ಬೃಂದಾವನ ನಗರದಲ್ಲಿರುವ ಉತ್ತಮ್ ಜೈನ್ ಅಂಗಡಿಯಲ್ಲಿ ರಾಹುಲ್ ಜೈನ್ ಕೆಲಸ ಮಾಡಿಕೊಂಡಿದ್ದ. ಅಲ್ಲಿ ರಾಹುಲ್ ಜೈನ್ ಮತ್ತು ಪವನ್ ಎಂಬ ಇಬ್ಬರು ಕೆಲಸಕ್ಕಿದ್ದರು. ಪವನ್ ಕೆಲ ದಿನಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ. ರಾಹುಲ್‌ ಜೈನ್‌ ಬೆಳ್ಳಿ ಸಪ್ಲೆ,ಕ್ಯಾಶ್ ಕಲೆಕ್ಟ್ ಮಾಡುವ ಕೆಲಸ ಮಾಡುತ್ತಿದ್ದ. 

ಮಾಲೀಕ ಉತ್ತಮ್ ಜೈನ್‌ಗೆ ಆ್ಯಕ್ಸಿಡೆಂಟ್ ಆಗಿ ಅಂಗಡಿಗೆ ಬರೋದು ಕಡಿಮೆ ಮಾಡಿದ್ದರು. ಉತ್ತಮ್ ಜೈನ್‌ ಆಗಾಗ ಅಷ್ಟೇ ಅಂಗಡಿಗೆ ಬಂದು ಹೋಗುತ್ತಿದ್ದರು. ಹೀಗಾಗಿ ಅಂಗಡಿ ಉಸ್ತುವಾರಿ ಎಲ್ಲಾ ರಾಹುಲ್ ಜೈನ್ ನೋಡಿಕೊಳ್ಳುತ್ತಿದ್ದ. ರಾಹುಲ್ ಜೈನ್‌ಗೆ ಅತಿ ಹೆಚ್ಚು ಹುಡುಗಿಯರ ಶೋಕಿಯಿತ್ತು. ಹುಡುಗಿಯರ ಶೋಕಿಯಿಂದಾಗಿ ರಾಹುಲ್‌ ಜೈನ್ ರಾಬರಿಗೆ ಇಳಿದಿದ್ದ.  

ಬಟ್ಟೆ ಅಂಗಡಿ ಲಾಸ್: ರಾಹುಲ್ ತಂದೆ ಗಾರ್ಮೆಂಟ್ಸ್ ಕೂಡ (Business) ನಡೆಸುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಲೇ ಬಟ್ಟೆ ಅಂಗಡಿ ಹಲವೆಡೆ ತೆರೆದಿದ್ದ.ಸದ್ಯ  ರಾಹುಲ್ ಜೈನ್ ಗೊರ್‌ಗುಂಟೆಪಾಳ್ಯದಲ್ಲಿ  ಬಟ್ಟೆ ಅಂಗಡಿ ತೆರೆದಿದ್ದ. ರಾಹುಲ್ ಬಟ್ಟೆ ಅಂಗಡಿಯಲ್ಲಿ  ರಾಜೇಶ್ ಮತ್ತು ಮಧು ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು.  ಆದರೆ ಅಲ್ಲಿ ಲಾಸ್ ಆಗಿ ರಾಹುಲ್ ಅಂಗಡಿ ಕ್ಲೋಸ್ ಮಾಡಿದ್ದ. ಅಲ್ಲದೇ ನಾಗರಬಾವಿಯಲ್ಲಿದ್ದ ಬಟ್ಟೆ ಅಂಗಡಿ ಕೂಡ ಲಾಸ್ ಆಗಿ ಮುಚ್ಚಲ್ಪಟ್ಟಿತ್ತು. ಲಾಸ್ ಆಗಿದ್ದರಿಂದ ರಾಜೇಶ್ ಮತ್ತು ಮಧು ಇಬ್ಬರೂ ಕೆಲಸ  ಕಳೆದುಕೊಂಡಿದ್ರು .

ಇದನ್ನೂ ಓದಿ:  ನಕಲಿ ಚಿನ್ನಾಭರಣ ಮಾರಾಟ: ವ್ಯಾಪಾರಿಗೆ ₹5.5 ಲಕ್ಷ ವಂಚಿಸಿದ್ದ ಮಹಿಳೆ ಅರೆಸ್ಟ್

ಶನಿವಾರ ಅಂಗಡಿ ಶಿಫ್ಟಿಂಗ್ ಮಾಡೋದಿದೆ ಎಂದು ಇಬ್ಬರನ್ನು ರಾಹುಲ್ ಪಿಜಿಯಿಂದ ಕರೆತಂದಿದ್ದ.‌ ಅದೇ ದಿನ ಪಿಜಿಯಿಂದ ಮತ್ತೊಬ್ಬ ಯುವಕನನ್ನು ರಾಜೇಶ್ ಮತ್ತು ಮಧು ಕರೆತಂದಿದ್ದರು.  ಮತ್ತೊಂದು ನಂದೇ ಅಂಗಡಿ ಇದೆ ಶಿಫ್ಟ್ ಮಾಡ್ಬೇಕು ಎಂದು ರಾಜೇಶ್ ಮತ್ತು ಮಧುರನ್ನು ರಾಹುಲ್ ಕರೆತಂದಿದ್ದ. 

ಬೃಂದಾವನದಲ್ಲಿರುವ ಪ್ಲಾನೆಟ್ ಹೋಲ್ಡಿಂಗ್ಸ್ ಬೆಳ್ಳಿ ಅಂಗಡಿಗೆ ಬಂದು ಕಾರ್ ನಿಲ್ಲಿಸಿದ್ದ.  ೧೧ ಗಂಟೆಗೆ ಬಂದವರು ಬೀಗ ಕಳೆದುಹೋಗಿದೆ ಬೀಗ ಕಟ್ ಮಾಡಬೇಕು ಎಂದು ಹೇಳಿದ್ದ. ಆಗ ರಾಜೇಶ್ ಮತ್ತು ಮಧು ಜೊತೆಗೆ ಬಂದಿದ್ದ ಮತ್ತೋರ್ವ ಹುಡುಗನಿಗೆ ಅವರದ್ದೇ ಅಂಗಡಿಯಲ್ಲಿ ರಾತ್ರಿ ಬಂದು ಯಾಕೆ ಬೀಗ ಮುರಿಯಬೇಕು ಎಂದು ಅನುಮಾನ ಬಂದಿತ್ತು.  ಬೆಳಗ್ಗೆಯೇ ಬಂದು ಲಾಕ್ ಮುರಿದು ಸಾಮಾಗ್ರಿ ತೆಗೆದುಕೊಂಡು ಹೋಗ್ಬಹುದಲ್ಲ ಅಂದುಕೊಂಡಿದ್ದ.  

ಲಾಕ್ ಕಟ್ ಮಾಡಿ ಕಳ್ಳತನ: ಮತ್ತೊಂದೆಡೆ ರಾಜೇಶ್ ಮತ್ತು ಮಧು ಬರೋದು ಬಂದಿದಿವಿ ಕಳ್ಳತನ (Theft) ಮಾಡಿಯೇ ಬಿಡೋಣ ಎಂದು ನಿರ್ಧರಿಸಿದ್ದರು. ಅದರಂತೆ ಮೊದಲು ಬಂದವರೇ 11 ಗಂಟೆವರೆಗು ಕಾದಿದ್ದಾರೆ.  ನಂತರ ಬಂದ ರಾಜೇಶ್ ಲಾಕ್ ಕಟ್ ಮಾಡಿ ಅಂಗಡಿ ಓಪನ್ ಮಾಡಿದ್ದಾನೆ.  ಮಧು ಬೈಕ್ ರೈಸ್ ಮಾಡ್ಕೊಂಡು ಕಾಯುತ್ತಿದ್ದರೆ ಇತ್ತ  ಬಂದಿದ್ದ ಯುವಕ ಕಳ್ಳತನ ಸಹಾವಸ ಬೇಡ ಅಂತಾ ಹೊರಡಲು ಸಿದ್ಧವಿದ್ದ. ಆದರೆ ರಾಹುಲ್ ಜೈನ್ ಆತನನ್ನು ದೂರದಲ್ಲೇ ಕಾರಲ್ಲಿ ಕೂರಿಸಿಕೊಂಡಿದ್ದ.  

ಇದನ್ನೂ ಓದಿ: ಎಟಿಎಂಗೆ ಹಾಕೋ ಹಣದೊಂದಿಗೆ ಪರಾರಿಯಾದ ಸಿಬ್ಬಂದಿ, ಹೊಸ ಮೊಬೈಲ್ ಖರೀದಿಸಿ ಸಿಕ್ಕಿಬಿದ್ದ

ಫೋನ್ ಮೂಲಕ ಎಲ್ಲೆಲ್ಲಿ ಹಣ ಬೆಳ್ಳಿ ಇದೆ ಎಲ್ಲವನ್ನು ರಾಜೇಶ್ ಹೇಳುತ್ತಿದ್ದ. ಒಳಹೋಗಿ ಕ್ಯಾಶ್ ಮತ್ತು ಸಿಲ್ವರ್ ಬಾಕ್ಸ್ ರಾಜೇಶ್ ತೆಗೆದುಕೊಂಡು ಬಂದಿದ್ದ. ಮೊದಲ ಬಾರಿ ಗಟ್ಟಿ ಕರಗಿಸಿದ್ದ ಬೆಳ್ಳಿ ತೆಗೆದುಕೊಂಡು ಬಂದ ರಾಜೇಶ್, ರೆಡಿ ಬೆಳ್ಳಿ ಆಭರಣ ಅಲ್ಲೇ ಬಿಟ್ಟುಬಂದಿದ್ದ. ಬಳಿಕ ಮತ್ತೆ ರಾಹುಲ್ ಜೈನ್ ರಾಜೇಶ್‌ನನ್ನು ಕರೆದುಕೊಂಡು ಅಂಗಡಿಗೆ ಬಂದಿದ್ದ.  ಆದರೆ ಅಲ್ಲೆ ಹತ್ತಿರದಲ್ಲಿ ಬೇರೆಯವರು ಇದ್ದಿದ್ದರಿಂದ ವಾಪಸ್ ಹೋಗಿದ್ದರು.  

ಉತ್ತಮ್ ಜೈನ್ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬಂದಿದ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಸ್ಟರಿ ಪಡೆದುಕೊಂಡಿದ್ದರು. ರಾಹುಲ್ ಮತ್ತು ಪವನ್‌ನನ್ನು ಕರೆಮಾಡಿ  ಪೊಲೀಸರು  ಬರುವಂತೆ ಹೇಳಿದ್ದರು.  ಸಿಸಿಟಿವಿ ಟರ್ನ್ ಮಾಡುವಾಗ ಹೆಲ್ಮೆಟ್ ಕಾಣಿಸಿದ್ದರಿಂದ ಪವನ್ ಮತ್ತು ರಾಜೇಶಗೆ ತಮ್ಮ ಹೆಲ್ಮೆಟ್ ತರುವಂತೆ ಪೊಲೀಸರು ಹೇಳಿದ್ದರು.  

ರಾಹುಲ್‌ ವಿಚಾರಣೆ: ಪವನ್ ಹೆಲ್ಮೆಟ್ ಜೊತೆಗೆ ಬಂದಿದ್ದ. ಆವತ್ತು ಕಳ್ಳತನ ಸಮಯದಲ್ಲಿ ರಾಜೇಶ್ ಬಳಸಿದ್ದ ಹೆಲ್ಮೆಟ್ ರೀತಿಯೇ ಇದು ಇತ್ತು.  ಹೀಗಾಗಿ ಪೊಲೀಸರಿಗೆ ಪವನ್ ಮೇಲೆ ಅನುಮಾನ ಮೂಡಿತ್ತು. ಆದರೆ ರಾಹುಲ್ ಜೈನ್ ಮಾತ್ರ ಪೊಲೀಸರು ಎಷ್ಟು ಕರೆದರು ಬಂದಿರಲಿಲ್ಲ. ನಂತರ ರಾಹುಲ್ ಜೈನ್ ಫೋನಿನಲ್ಲಿ ನೀಡಿದ ಹೇಳಿಕೆ ಪೊಲೀಸರಲ್ಲಿ ಗೊಂದಲ ಸೃಷ್ಟಿಸಿದೆ. ಹಾಗಾಗಿ ಪೊಲೀಸರು ರಾಹುಲ್‌ ವಿಚಾರಣೆಗೆ ಮುಂದಾಗಿದ್ದಾರೆ. 

ಕಳ್ಳತನ ಮಾಡಿದ್ದ ಬೆಳ್ಳಿ ಸಮೇತ ಕಾರಿನಲ್ಲಿ ರಾಹುಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಲಾಸ್ ಆಗಿ  ಎರಡು ಲಕ್ಷಕ್ಕೆ ಕಾರು ಅಡ ಇಟ್ಟಿದ್ದ ರಾಹುಲ್‌ ಅದನ್ನ ಬಿಡಿಸಿ ಸರ್ವಿಸ್ ಮಾಡಿಸಿಕೊಂಡಿದ್ದ. ಕಳ್ಳತನ ಮಾಡಿದ್ದ ಎಲ್ಲಾ ಐಟಂ ಜೊತೆಗೆ ಇಟ್ಟುಕೊಂಡು ಪರಾರಿಯಾಗಲು ಸ್ಕೆಚ್ ಹಾಕಿಕೊಂಡಿದ್ದ. ಪೊಲೀಸ್ ‌ವಿಚಾರಣೆ ವೇಳೆ ದೂರವೇ ನಿಂತು ರಾಜೇಶ್ ಮತ್ತು ಮಧುಯಿಂದ ಕಳ್ಳತನ (Crime News) ಮಾಡಿಸಿರೋದಾಗಿ ರಾಹುಲ್ ಒಪ್ಪಿಕೊಂಡಿದ್ದಾನೆ. 

click me!