
ಚಾಮರಾಜನಗರ (ಫೆ.15): ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ವಿಚಾರಗಳು ಟ್ರೆಂಡ್ ಆಗಿ ಮುಗಿದರೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಪ್ರತಿ ಟ್ರೆಂಡ್‌ಅನ್ನು ತಮ್ಮ ವೈಯಕ್ತಿಕ ಜೀವನಕ್ಕೆ ಹೋಲಿಸಿಕೊಂಡಲ್ಲಿ ಇಂಥ ಘಟನೆಗಳು ಆಗುತ್ತವೆ. ಇತ್ತೀಚೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಎಷ್ಟು ಸ್ಕ್ರೋಲ್ ಮಾಡಿದರೂ ಸಿಗೋದು ಉಪೇಂದ್ರ ನಟನೆಯ ಉಪೇಂದ್ರ ಸಿನಿಮಾದ 'ಕರಿಮಣಿ ಮಾಲೀಕ ನೀನಲ್ಲ..' ಸಾಂಗ್‌ನ ರಿಮಿಕ್ಸ್ ವರ್ಷನ್. ಈ ತಿಂಗಳ ಉತ್ತರ ಕರ್ನಾಟಕದ ಹುಡುಗನೊಬ್ಬ ಮಾಡಿದ ರೀಲ್ಸ್ ಯಾವ ಪರಿ ವೈರಲ್ ಆಗಿದೆಯೆಂದರೆ, ಇತ್ತೀಚೆಗೆ ಅದರ ರಿಮಿಕ್ಸ್‌ನ ರಿಮಿಕ್ಸ್ ವರ್ಷಗಳೆಲ್ಲಾ ಬರಲು ಆರಂಭವಾಗಿದೆ. ಇದರ ನಡುವೆ ಚಾಮರಾಜನಗರದಲ್ಲಿ ವಿವಾಹಿತ ಮಹಿಳೆಯೊಬ್ಬಳು, ಕರಿಮಣಿ ಮಾಲೀಕ ನೀನಲ್ಲ ಎನ್ನುವ ವೈರಲ್ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿ ಮಾಡಿದ ರೀಲ್ಸ್‌ನಿಂದ ಮನನೊಂದಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪಿ.ಜಿ.ಪಾಳ್ಯ ಗ್ರಾಮದ 33 ವರ್ಷದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಕುಮಾರ್ ಅವರ ಪರಿ ರೂಪಾ, ತನ್ನ ಸೋದರ ಮಾವ ಹಾಗೂ ಸಹೋದರಿಯ ಜೊತೆ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಮನನೊಂದಿದ್ದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೂಪಾ ಅವರ ರೀಲ್ಸ್‌ಅನ್ನು ನೋಡಿ ಕುಮಾರ್ ಅವರ ಗೆಳೆಯರು ಆತನನ್ನು ರೇಗಿಸಿದ್ದರು. ಅದಲ್ಲದೆ, ಅವರ ಕುಟುಂಬಸ್ಥರು ಕೂಡ ಇದೇ ವಿಚಾರವಾಗಿ ಆತನ ಕಾಲೆಳೆದಿದ್ದರು. ಇದರಿಂದ ಮನನೊಂದಿದ್ದ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ