ಯಶ್ ಬರ್ತ್‌ಡೇಗೆ ಕಟೌಟ್ ನಿಲ್ಲಿಸಲು ಹೋಗಿ ಭಾರೀ ಅನಾಹುತ; ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ಸಾವು!

By Ravi Janekal  |  First Published Jan 8, 2024, 8:03 AM IST

ಚಿತ್ರನಟ ಯಶ್‌ ಹುಟ್ಟುಹಬ್ಬಕ್ಕೆ ಶುಭಕೋರಲು ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ್ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಧ್ಯೆರಾತ್ರಿ ನಡೆದಿದೆ. ಹನಮಂತ ಹರಿಜನ (21) ಮುರಳಿ ನಡವಿನಮನಿ(20), ನವೀನ್ ಗಾಜಿ(19) ಮೃತ ದುರ್ದೈವಿಗಳು.


ಗದಗ (ಜ.8): ಚಿತ್ರನಟ ಯಶ್‌ ಹುಟ್ಟುಹಬ್ಬಕ್ಕೆ ಶುಭಕೋರಲು ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ್ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಧ್ಯೆರಾತ್ರಿ ನಡೆದಿದೆ.

ಹನಮಂತ ಹರಿಜನ (21) ಮುರಳಿ ನಡವಿನಮನಿ(20), ನವೀನ್ ಗಾಜಿ(19) ಮೃತ ದುರ್ದೈವಿಗಳು. ಇನ್ನೂ ಮೂವರಿಗೆ ಗಂಭೀರ ಗಾಯ, ಗಾಯಾಳುಗಳನ್ನ ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Tap to resize

Latest Videos

Yash Birthday: ನಟ ಯಶ್ ಹುಟ್ಟುಹಬ್ಬಕ್ಕೆ ಬಂತು ಕಾಮನ್ ಡಿಪಿ!ಬರ್ತ್‌ ಡೇ ದಿನ ರಾಕಿಂಗ್ ಸ್ಟಾರ್ ಎಲ್ಲಿರುತ್ತಾರೆ..?

 ಇಂದು ಬರ್ತಡೇ ಆಚರಿಸಿಕೊಳ್ಳುತ್ತಿರುವ ನಟ ಯಶ್. ಹೀಗಾಗಿ ಅಭಿಮಾನಿಗಳು ನಿನ್ನೆಯೇ ಬರ್ತಡೇ ಪ್ಲಾನ್ ಮಾಡಿ ಮಧ್ಯೆರಾತ್ರಿಯೇ ಸೂರಣಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಕಟೌಟ್ ನಿಲ್ಲಿಸಲು ಮುಂದಾಗಿದ್ದ ಯುವಕರು. ಬೃಹತ್ ಕಟೌಟ್ ನಿಲ್ಲಿಸುವಾಗ ಕಟೌಟ್ ವಿದ್ಯುತ್ ತಂತಿಗೆ ತಗುಲಿ ಕಟೌಟ್ ಹಿಡಿದಿದ್ದ ಯುವಕರಿಗೆ ವಿದ್ಯುತ್ ಹರಿದಿದೆ. ಇದರ ಪರಿಣಾಮ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮೂವರು ಯುವಕರು. ಘಟನಾವಳಿ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. 

Yash: ಟಾಕ್ಸಿಕ್ ಟೈಟಲ್ ಕಿಕ್ ಬಳಿಕ ಯಶ್ ಫ್ಯಾನ್ಸ್‌ಗೆ ಶಾಕ್..! ಜ. 8ಕ್ಕೆ ಅಭಿಮಾನಿಗಳ ಕೈಗೆ ಸಿಗಲ್ಲ ನಟ..!

click me!