ಸಿಸಿಬಿ ಪೊಲೀಸ್ ಭರ್ಜರಿ ಕಾರ್ಯಾಚರಣೆ; 34 ಪೆಡ್ಲರ್‌ಗಳನ್ನ ಬಂಧಿಸಿ ₹2.42 ಕೋಟಿ ಡ್ರಗ್ಸ್ ಜಪ್ತಿ!

Published : Sep 13, 2023, 11:51 AM ISTUpdated : Sep 13, 2023, 11:52 AM IST
ಸಿಸಿಬಿ ಪೊಲೀಸ್ ಭರ್ಜರಿ ಕಾರ್ಯಾಚರಣೆ; 34 ಪೆಡ್ಲರ್‌ಗಳನ್ನ ಬಂಧಿಸಿ ₹2.42 ಕೋಟಿ ಡ್ರಗ್ಸ್ ಜಪ್ತಿ!

ಸಾರಾಂಶ

ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ, ವಿದೇಶಿ ಪ್ರಜೆ ಸೇರಿದಂತೆ 34 ಪೆಡ್ಲರ್‌ಗಳನ್ನು ಸೆರೆ ಹಿಡಿದು ₹2.42 ಕೋಟಿ ಮೌಲ್ಯದ ಡ್ರಗ್ಸ್ ಮಾಡಿದೆ.

ಬೆಂಗಳೂರು (ಸೆ.13): ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ, ವಿದೇಶಿ ಪ್ರಜೆ ಸೇರಿದಂತೆ 34 ಪೆಡ್ಲರ್‌ಗಳನ್ನು ಸೆರೆ ಹಿಡಿದು ₹2.42 ಕೋಟಿ ಮೌಲ್ಯದ ಡ್ರಗ್ಸ್ ಮಾಡಿದೆ.

ನಗರದ ವೈಟ್ ಫೀಲ್ಡ್‌, ವರ್ತೂರು, ಕಾಟನ್‌ಪೇಟೆ, ಮೈಕೋ ಲೇಔಟ್‌, ಆರ್‌.ಟಿ.ನಗರ, ಬೊಮ್ಮನಹಳ್ಳಿ, ಕೆಂಗೇರಿ, ಚಾಮರಾಜಪೇಟೆ, ಬೈಯಪ್ಪನಹಳ್ಳಿ, ರಾಮಮೂರ್ತಿ ನಗರ, ಕೊಡಿಗೇಹಳ್ಳಿ, ಕೆ.ಆರ್‌.ಪುರ, ಪರಪ್ಪನಅಗ್ರಹಾರ, ಗಿರಿನಗರ, ಹೆಣ್ಣೂರು, ಕೊತ್ತನೂರು, ಯಲಹಂಕ, ಮಾರತ್ತಹಳ್ಳಿ, ಹುಳಿಮಾವು ಹಾಗೂ ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸಿದೆ. ಬಂಧಿತರ ಪೈಕಿ ನೈಜೀರಿಯಾ ದೇಶದ ಓರ್ವ, ಕೇರಳ ರಾಜ್ಯದ 15, ಬಿಹಾರದ ನಾಲ್ವರು, ಒಡಿಶಾ, ಹರಿಯಾಣ ಮತ್ತು ಅಸ್ಸಾಂ ರಾಜ್ಯಗಳ ತಲಾ ಒಬ್ಬೊಬ್ಬರು ಸೇರಿದ್ದಾರೆ. ಇನ್ನುಳಿದ 10 ಮಂದಿ ಸ್ಥಳೀಯರು ಆಗಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

Bengaluru crime: ಡ್ರಗ್ಸ್ ಮಾರುತ್ತಿದ್ದ ಒಡಿಶಾ ಮೂಲದ 7 ಮಂದಿ ಸೆರೆ

ಆರೋಪಿಗಳಿಂದ 37.900 ಕೆಜಿ ಗಾಂಜಾ, 167.56 ಗ್ರಾಂ ಎಂಡಿಎಂಎ, 70 ಎಲ್‌ಎಸ್‌ಡಿ ಸ್ಟ್ರಿಪ್ಸ್, 620 ಎಕ್ಸೈಟೆಸಿ ಮಾತ್ರೆಗಳು, 1.26 ಕೇಜಿ ಹಾಶೀಶ್‌ ಆಯಿಲ್‌, 30 ಮೊಬೈಲ್‌ಗಳು ಹಾಗೂ 5 ಬೈಕ್‌ಗಳು ಸೇರಿದಂತೆ ಒಟ್ಟು ₹2.42 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸುಲಭವಾಗಿ ಹಣ ಸಂಪಾದನೆ ಸಲುವಾಗಿ ಈ ಆರೋಪಿಗಳು ಡ್ರಗ್ಸ್ ದಂಧೆಗಿಳಿದಿದ್ದ ಪರಿಚಯಸ್ಥ ಗ್ರಾಹಕರಿಗೆ ಅವರು ಡ್ರಗ್ಸ್ ಪೂರೈಸುತ್ತಿದ್ದರು. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ಕಂಪನಿಯ ಉದ್ಯೋಗಿಗಳನ್ನೇ ಪೆಡ್ಲರ್‌ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ; ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಸೆರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ