
ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು, (ಸೆಪ್ಟೆಂಬರ್.14) : ಬೇರೆಯವರ ಭಯವೇ ಇವರಿಗೆ ಬಂಡವಾಳ.. ಒಂದು ಬಾರಿ ರೌಡಿ ಪಟ್ಟಿ ಬಿತ್ತು ಅಂದ್ರೆ ಮುಗೀತು ಎದೆಯುಬ್ಬಿಸಿ ರೋಲ್ ಕಾಲ್‌ಗೆ ನಿಂತು ಬಿಡ್ತಾರೆ. ಇಲ್ಲೊಬ್ಬ ಪಂಟರ್ ಎನಿಸಿಕೊಂಡಿರುವ ಆ್ಯಂಟಿ ಸೋಷಿಯಲ್ ಎಲಿಮೆಂಟ್ ಕೂಡ ಅಂತಹದ್ದೆ ಕೆಲಸ ಮಾಡಿ ಅಂದರ್ ಆಗಿದ್ದಾನೆ.
ಹೌದು..ಬೆಂಗಳೂರಿನ ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್, ಭಕ್ಷಿ ಗಾರ್ಡನ್ ಸೇರಿದಂತೆ ಸಿಟಿ ಮಾರ್ಕೇಟ್ ಒತ್ತಿಗೆ ಇರುವ ಏರಿಯಾಗಳ ರೌಡಿಗಳಿಗೆ ಸಿಟಿ ಮಾರ್ಕೆಟ್ನ ವ್ಯಾಪಾರಿಗಳು ಚಿನ್ನದ ಮೊಟ್ಟೆ ಇಡೋ ಕೊಳಿಗಳಂತೆ . ಒಂದು ಫೋನ್ ಕಾಲ್ ಅಥವಾ ಮಚ್ಚು ಲಾಂಗುಗಳನ್ನ ಅವರಿಗೆ ಪಾರ್ಸಲ್ ಕಳಿಸಿದ್ರೆ ಸಾಕು ದುಡ್ಡು ಕಾಲ ಬುಡಕ್ಕೆ ಬಂದು ಬೀಳುತ್ತೆ.
ಬೆಂಗಳೂರಿನಲ್ಲಿ ಹೆಚ್ಚಾಗಿದೆ RX ಬೈಕ್ ಕಳ್ಳತನ: ಕಳ್ಳರಿಗೂ ಇಷ್ಟವಾಯ್ತು ಆರ್ ಎಕ್ಸ್ ಕ್ರೇಜ್!
ಈಗಾಗಲೆ ಪುಡಿ ರೌಡಿಗಳಿಂದ ಹಿಡಿದು ದೊಡ್ಡ ಮಟ್ಟಿಗಿನ ಪಂಟರ್ಗಳ ಹಾವಳಿಗೆ ಅಲ್ಲಿನ ವರ್ತಕರು ,ವ್ಯಾಪಾರಿಗಳು ಹೈರಾಣಾಗಿದ್ದಾರೆ. ಇದೀಗ ಮತ್ತೊಬ್ಬ ಕ್ರಿಮಿನಲ್ ಈಗ ವರ್ತಕನೊಬ್ಬನಿಗೆ ಅವಾಜ್ ಹಾಕಿ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸೆಕ್ಯೂರಿಟಿ ಮನಿ ನೆಪದಲ್ಲಿ ಹಫ್ತಾ ವಸೂಲಿ...!
ಭಾರತದ ಮೊದಲ ಮಾಫಿಯಾ ಡಾನ್ ಹಾಜಿ ಮಸ್ತಾನ್‌ನಿಂದ ಹಿಡಿದು ಈಗಿನ ಪುಡಿ ರೌಡಿಗಳ ಕಾಲಘಟ್ಟದವರೆಗು ಕಾಮನ್ ಆಗಿರುವ ಒಂದೇ ದಂಧೆ ಅಂದ್ರೆ ಅದು ಹಫ್ತಾ.. ಅದನ್ನ ಅವರು ಸಮರ್ಥಿಸಿಕೊಳ್ಳುವುದು ಸೆಕ್ಯೂರಿಟಿ ಮನಿ ಎಂದು. ನಿಮಗೆ ಭದ್ರತೆ ಕೊಡುತ್ತೇವೆ ಇಂತಿಷ್ಟು ಹಣ ನೀಡ್ಬೇಕು ಎಂಬುದು ಇದರ ಕಾನ್ಸೆಪ್ಟ್. ಇಲ್ಲಿ ಕೂಡ ಪಳನಿ ಅಲಿಯಾಸ್ ಕುಳ್ಳ ಪಳನಿ ಎಂಬಾತ ಮಾಡ್ತಿದ್ದಿದ್ದು ಅದೇ ಕೆಲಸ.
ಒಂದು ಬಾರಿ ರೌಡಿ ಪಟ್ಟ ಕಟ್ಟಿಕೊಮಡ ಮೇಲೆ ಅದನ್ನ ಹಣವನ್ನಾಗಿ ಕನ್ವರ್ಟ್ ಮಾಡಿಕೊಳ್ಳು ರೌಡಿಗಳ ರೀತಿ ಪಳನಿ ಕೂಡ ಸಿಟಿ ಮಾರ್ಕೆಟ್‌ನಲ್ಲಿರುವ ವರ್ತನಕನ ಹಿಂದೆ ಬಿದ್ದಿದ್ದ. ಮೊದಲು ಐದು ಲಕ್ಷ ಕೇಳಿದ್ದನಂತೆ ನಂತರ ಮಾತಾಡಿ ಮೂರು ಲಕ್ಷಕ್ಕೆ ಸೆಟಲ್ ಮಾಡು ಎಂದು ವರ್ತಕನಿಗೆ ಬೆದರಿಕೆ ಹಾಕಿದ್ದಾನೆ. ಆ ಆಡಿಯೋದಲ್ಲಿ ವರ್ತಕ ತನ್ನ ಬಳಿ ದುಡ್ಡಿಲ್ಲ ಲಾಸ್‌ನಲ್ಲಿ ಅಂಗಡಿ ನಡೀತಿದೆ ಅಂದ್ರೂ ಬಿಡದೆ ಧಮ್ಕಿ ಹಾಕುತ್ತಿದ್ದ.
ನೀನು ದೂರು ಕೊಟ್ಟರೆ ಒಂದು ಕೇಸ್ ಅಷ್ಟೆ. ದುಡ್ಡು ಕೊಡದಿದ್ದರೆ ಹುಡುಗರನ್ನ ಕಳಿಸಿ ಚುಚ್ಚಿಸೋದಾಗಿ ಪ್ರಾಣ ಬೆದರಿಕೆ ಹಾಕಿದ್ದ . ಇನ್ನು ಈ ಬಗ್ಗೆ ವರ್ತಕ ಸಿಸಿಬಿ ಪೊಲೀಸರ ಮೊರೆ ಹೋಗಿದ್ದಾನೆ. ಬಳಿಕ ವರ್ತಕನ ಮಾಹಿತಿಯ ಮೇಲೆ ಪಳನಿ@ ಕುಳ್ಳನನ್ನ ಅವನ ಲಾಂಗ್ ಸಮೇತ ಹಿಡಿದು ತಂದಿದ್ದಾರೆ
ಇವನೊಬ್ಬ ಕ್ರಿಮಿ ಅಷ್ಟೇ ಇಂತಹ ಬಹಳಷ್ಟು ಕ್ರಿಮಿನಲ್‌ಗಳು ಜನರನ್ನ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಲೇ ಇದ್ದಾರೆ. ಅಂತಹವರನ್ನೂ ಕೂಡ ಪೊಲೀಸರು ಬಂಧಿಸಿ ಜನರಿಗೆ ನೆಮ್ಮದಿ ನೀಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ