ಕೂಲಿಗೆ ತೆರಳುತ್ತಿದ್ದ ಕಾರ್ಮಿಕರು ಜಲಸಮಾಧಿಯಾಗಿದ್ದಾರೆ. ತುತ್ತಿನ ಚೀಲವನ್ನು ತುಂಬಿಸಿ ಕೊಳ್ಳಲು ಹೋಗುತ್ತಿದ್ದವರ ದುರ್ಮರಣ ಮಾತ್ರ ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ, (ಸೆಪ್ಟೆಂಬರ್.14): ಅವರೆಲ್ಲ ಕೂಲಿ ಕಾರ್ಮಿಕರು. ದಿನದ ಕೂಲಿಗಾಗಿ ಗ್ರಾಮದಿಂದ ಟಂ-ಟಂ ಆಟೋಗಳಲ್ಲಿ ನಿತ್ಯ ಹೊಲಕ್ಕೆ ಹೋಗಿ ದುಡಿದುಕೊಂಡು ಬಂದು ಜೀವನ ನಡೆಸೋದೆ ಅವರ ಕಾಯಕ. ಆದ್ರೆ, ಇವತ್ತಿನ ವಿಧಿಯಾಟವೇ ಬೇರೆಯಾಗಿತ್ತು. ಮನೆಯಿಂದ ಕೆಲಸಕ್ಕೆಂದು ಹೋದವರು ಹೊಲಕ್ಕೆ ಹೋಗದೇ ಮಸಣ ಸೇರಿದ್ದಾರೆ.
ಹೌದು, ಇಂತಾಹದ್ದೊಂದು ದುರಾದೃಷ್ಟಕರ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ ಕಾರ್ಮಿಕರುನ್ನು ಕೂರಿಸಿಕೊಂಡು ಹೋಗುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಆರು ಕೂಲಿ ಕಾರ್ಮಿಕರು ಜಲಸಮಾಧಿಯಾಗಿದ್ದಾರೆ.
undefined
ನಿಂಗಮ್ಮ, ದುರ್ಗಮ್ಮ, ಪುಷ್ಪಾವತಿ ಶವ ದೊರತ್ರೇ, ಲಕ್ಷ್ಮೀ, ನಾಗರತ್ನ, ಹುಲಿಗೆಮ್ಮ, ಕಾಲೂವೆಯಲ್ಲಿ ನಾಪತ್ತೆಯಾಗಿದ್ದಾರೆ. ಇನ್ನೂ ಚಾಲಕ ಭೀಮಾ, ಶಿಲ್ಪ, ಮಹೇಶ್ ಮತ್ತು ಈರಮ್ಮ ಎನ್ನುವವರು ಸ್ಥಳೀಯರಾದ ಈರಣ್ಣ ರಕ್ಷಣೆ ಮಾಡಿದ್ದಾರೆ. ಘಟನೆಯ ಬಗ್ಗೆ ಆಟೋದಲ್ಲಿ ಹೇಮಾವತಿ ವಿವರಣೆ ನೀಡಿದ್ದಾರೆ..
ಆರು ಕಾರ್ಮಿಕರು ಜಲಸಮಾಧಿ
ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದ ಕೊಳಗಲ್ ಗ್ರಾಮದ ಆರು ಕಾರ್ಮಿಕರ ಜಲಸಮಾಧಿ. ಆಟೋ ಚಾಲಕ ಸೇರಿ ಹನ್ನೊಂದು ಜನರು ಕೂಲಿ ಕಾರ್ಮಿಕರಿದ್ದ ಆಟೋ ಕಾಲೂವೆಗೆ ಉರುಳಿ ಬಿದ್ದಿದೆ. ಬೋಟ್ ಮೂಲಕ ಮೃತದೇಹಗಳಿಗಾಗಿ ಅಗ್ನಿಶಾಮಕದಳ ಹುಡುಕಾಟ ನಡೆಸಿದ್ದಾರೆ.
ನಿಜಕ್ಕೂ ಬಳ್ಳಾರಿ ಜನರಿಗಿಂದು ಕಾರಳ ದಿನವೆಂದ್ರು ತಪ್ಪಾಗಲಕ್ಕಿಲ್ಲ. ಯಾಕಂದ್ರೆ ಎಂದಿನಂತೆ ಬೆಳಿಗ್ಗೆ ಎಂಟು ಗಂಟೆಗೆ ಕೊಳಗಲ್ ಗ್ರಾಮದಿಂದ ಟಂ ಟಂ ಆಟೋದಲ್ಲಿ ಕೃಷಿ ಕೂಲಿಗೆಂದು ಆಟೋ ಚಾಲಕ ಸೇರಿದಂತೆ ಒಟ್ಟು ಹನ್ನೊಂದು ಜನರು ತೆರಳಿದ್ದರು. ಆದ್ರೆ, 9 ಗಂಟೆಯ ಹೊತ್ತಿಗೆ ಅವರ ಸಾವಿನ ಸುದ್ದಿ ಬರುತ್ತದೆಂದು ಗ್ರಾಮದ ಜನರು ಊಹಿಸಿರಲಿಲ್ಲ. ಕೊಳಗಲ್ ಗ್ರಾಮದ ಭೀಮಾ ಎನ್ನುವ ಆಟೋ ಚಾಲಕ ನಿತ್ಯ ಆಟೋದಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ಕರೆದು ಕೊಂಡು ಹೊಲಗಳಿಗೆ ತೆರಳುತ್ತಿದ್ದನು. ಇಂದು(ಬುಧವಾರ) ಕೂಡ ಕಾಲೂವೆ ಮೇಲೆ ಹೋಗುವಾಗ ಕಾಲುವೆ ಮೇಲ್ಬಾಗದ ರಸ್ತೆ ಮೇಲೆ ಕಲ್ಲು ಅಡ್ಡ ಬಂದ ಕಾರಣ ಆಟೋದ ನಿಯಂತ್ರಣ ತಪ್ಪಿ ಆಟೋ ಕಾಲುವೆಗೆ ಉರುಳಿದೆ.
ಇನ್ನೂ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಜೊತೆ ಪೋಲಿಸ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ರು. ಅಷ್ಟೊತ್ತಿಗಾಗಲೇ ಮೂವರ ಶವ ಹೊರ ತೆಗಿದ್ದ ಸ್ಥಳೀಯರು ಇನ್ನೂ ಮೂವರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ರು. ಆರಂಭದಲ್ಲಿ ನೀರಿನ ಮೇಲ್ಭಾಗದಲ್ಲಿ ಕಂಡಿದ್ದ ಆಟೋ ಹಗ್ಗಕಟ್ಟಿ ಮೇಲೆ ಎತ್ತಬೇಕು ಎನ್ನುವಷ್ಟರಲ್ಲೇ ಹಗ್ಗ ತುಂಡಾಗಿದೆ. ಪರಿಣಾಮ ಆಟೋ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಸದ್ಯ ಈ ಬಗ್ಗೆ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಚಾಲಕನ ನಿರ್ಲಕ್ಷ್ಯ ಎನ್ನಲಾಗುತ್ತಿದ್ರು. ಸಂಪೂರ್ಣ ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಬಗ್ಗೆ ವಿವರಣ ಸಿಗಲಿದೆ ಎಂದು ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಮೃತರಿಗೆ ಪರಿಹಾರ ಕೊಡೋ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋದಾಗಿ ಅಪಾರ ಜಿಲ್ಲಾಧಿಕಾರಿ ಮಂಜುನಾಥ ಮಾಹಿತಿ ನೀಡಿದ್ದಾರೆ..
ಒಟ್ಟಾರೆ, ಚಾಲಕನ ನಿರ್ಲಕ್ಷ್ಯವೋ ಅಥವಾ ವಿಧಿಯಾಟವೋ ಗೊತ್ತಿಲ್ಲ. ತುತ್ತಿನ ಚೀಲವನ್ನು ತುಂಬಿಸಿ ಕೊಳ್ಳಲು ಕೂಲಿಗೆ ತೆರಳುತ್ತಿದ್ದ ಕಾರ್ಮಿಕರ ದುರ್ಮರಣ ಮಾತ್ರ ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.