ಈತ ಗೋಲ್ಡ್ ಮ್ಯಾನ್. ಮೈತುಂಬಾ ಗೋಲ್ಡ್ ಹಾಕ್ತಾನೆ. ಈ ಗೋಲ್ಡ್ ಮನುಷ್ಯನನ್ನ ನಂಬಿದ್ರೆ ಪಂಗನಾಮ ಹಾಕ್ತಾನೆ. ಈಗ ಬಿಜೆಪಿ ನಾಯಕನಿಗೆ ಕೋಟಿಗಟ್ಟಲೇ ಪಂಗನಾಮ ಹಾಕಿದ್ದಾನೆ. ಅಷ್ಟಕ್ಕೂ ಯಾರು ಈ ಗೋಲ್ಡ್ ಮ್ಯಾನ್?
ಬೆಂಗಳೂರು, (ಮಾ.07): ಬೆಂಗಳೂರಿನ ವಿಜಯನಗರ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಹೆಚ್. ರವೀಂದ್ರ ಕೋಟಿ- ಕೋಟಿ ರೂ. ಲೋನ್ ಆಸೆಗೆ ಬಿದ್ದು ಮೋಸ ಹೋಗಿದ್ದಾರೆ.
ಲೋನ್ ಆಸೆ ತೋರಿಸಿ ರವೀಂದ್ರ ಕೋಟ್ಯಂತರ ರೂ. ವಂಚಿಸಿದ ಖತರ್ನಾಕ್ ತಂಡವನ್ನು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಮೌಲ್ಯದ ವಸ್ತು!
ತಮಿಳುನಾಡು ಮೂಲದ ಹರಿಗೋಪಾಲಕೃಷ್ಣನ್ ನಾಡರ್ ಮತ್ತು ತಂಡವನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಮಾರು 5 ಕೆಜಿಯಷ್ಟು ಚಿನ್ನದ ಒಡವೆ ಹಾಕ್ಕೊಂಡು ರವೀಂದ್ರ ಅವರನ್ನು ಭೇಟಿಯಾಗಿದ್ದ ಈ ಖತರ್ನಾಕ್ ತಂಡ, 150 ಕೋಟಿ ರೂ. ಲೋನ್ ಕೊಡಿಸೋ ಆಸೆ ತೋರಿಸಿದ್ದಾನೆ.
ಅಲ್ಲದೇ ಈ ವ್ಯವಹಾರಕ್ಕೆ 4.5 ಕೋಟಿ ರೂ. ಲಕ್ಷ ಅಗ್ರಿಮೆಂಟ್ ಚಾರ್ಜ್ ಪಡೆದಿತ್ತು. ಆದ್ರೆ, ಹಣ ಪಡೆದ ನಂತರ ನಾಡರ್ ನಾಪತ್ತೆಯಾಗಿದ್ದಾನೆ.
ಬಳಿಕ ರವೀಂದ್ರ ತಾವು ಮೋಸ ಹೋಗಿದ್ದು ಗೊತ್ತಾಗ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸಿಸಿಬಿ ಟೀಂ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸಿದೆ.