ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಮೌಲ್ಯದ ವಸ್ತು!

By Suvarna News  |  First Published Mar 6, 2020, 11:06 PM IST

ಇವಳು ಅಂತಿಂಥ ಚಾಲಾಕಿ ಮಹಿಳೆ ಅಲ್ಲ/ ಆ ವಿದೇಶಿ ಮಹಿಳೆಯ ಗುಪ್ತಾಂಗದಲ್ಲಿತ್ತು ಬರೋಬ್ಬರಿ 8 ಕೋಟಿ ಮೌಲ್ಯದ ವಸ್ತು !


ಬೆಂಗಳೂರು [ಮಾ.07]:  ಗುಪ್ತಾಂಗದಲ್ಲಿ 1 ಕೇಜಿಗೂ ಅಧಿಕ ಮಾದಕ ವಸ್ತು ಇಟ್ಟುಕೊಂಡು ಕಳ್ಳಸಾಗಣೆಗೆ ಯತ್ನಿಸಿದ ವಿದೇಶಿ ಮಹಿಳೆಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ.

"

Tap to resize

Latest Videos

ಗುಪ್ತಾಂಗದಲ್ಲಿ ಮಹಿಳೆ ಒಂದು ಕೆ.ಜಿ.ಗೂ ಹೆಚ್ಚು ಕೊಕೇನ್‌ ಇಟ್ಟುಕೊಂಡಿದ್ದನ್ನು ಕಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಬಂಧಿತ ಮಹಿಳೆಯನ್ನು ಗ್ವಾಟೇಮಾಲಾ ದೇಶದ ಅಡೀಸ್‌ ಅಬಾಬ ಎಂದು ಗುರುತಿಸಲಾಗಿದೆ. ಮಹಿಳೆಯಿಂದ .8.31 ಕೋಟಿ ಮೌಲ್ಯದ 1 ಕೆ.ಜಿ. 385 ಗ್ರಾಂನ ಕೊಕೇನ್‌ ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಹೇಳಿದ್ದಾರೆ.

ಗ್ವಾಟೇಮಾಲಾ ದೇಶದ ಪ್ರಜೆಯಾಗಿರುವ ಮಹಿಳೆ ಏರ್‌ಲೈನ್ಸ್‌ ಇಟಿ-690 ವಿಮಾನದಲ್ಲಿ ಫೆ.2ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಮಹಿಳೆಯನ್ನು ತಪಾಸಣೆ ನಡೆಸಿದಾಗ ಅನುಮಾನ ಬರುವ ರೀತಿಯಲ್ಲಿ ವರ್ತಿಸಿದ್ದಳು. ಲೋಹಶೋಧಕ ಯಂತ್ರದಲ್ಲಿ ತಪಾಸಣೆ ನಡೆಸಿದಾಗ ಮಹಿಳೆ ಬಳಿ ಮಾದಕ ವಸ್ತು ಇರುವುದು ಪತ್ತೆಯಾಗಿದೆ. ಆದರೆ ಮಹಿಳೆ ಮಾದಕ ವಸ್ತು ಇರುವ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಮಹಿಳೆಯನ್ನು ಮಹಿಳಾ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದಾಗ ಗುಪ್ತಾಂಗದಲ್ಲಿ ಮಹಿಳೆ ಮಾದಕ ವಸ್ತುಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.

 150 ಕ್ಯಾಪ್ಸೂಲ್‌ನಲ್ಲಿ ಕೊಕೇನ್‌

ಗೌಟೇಮಾಲಾ ದೇಶದ ಮಹಿಳೆ ಗುಪ್ತಾಂಗದೊಳಗೆ ಎರಡು ಭಾಗದಲ್ಲಿ ಕೊಕೇನ್‌ ಇಟ್ಟುಕೊಂಡಿದ್ದಳು. ಯಾರಿಗೂ ಅನುಮಾನಬಾರದಂತೆ ಕ್ಯಾಪ್ಸೂಲ್‌ನಲ್ಲಿ ಕೊಕೇನ್‌ನನ್ನು ತುಂಬಿ ಇರಿಸಲಾಗಿತ್ತು. ಇದೇ ರೀತಿ ಸುಮಾರು 150 ಕ್ಯಾಪ್ಸೂಲ್‌ಗಳನ್ನು ಮಹಿಳೆ ಇಟ್ಟುಕೊಂಡಿದ್ದಳು. ವೈದ್ಯರನ್ನು ಸಂಪರ್ಕಿಸಿಯೇ ದಂಧೆಕೋರರು ಮಹಿಳೆಯ ಗುಪ್ತಾಂಗದಲ್ಲಿ ಮಾದಕ ವಸ್ತು ಕೊಂಡೊಯ್ಯುವಂತೆ ನೋಡಿಕೊಂಡಿದ್ದಾರೆ. ವೈದ್ಯರು ಹೇಳುವಂತೆ ಎರಡು ದಿನ ಕರಗದ ರೀತಿಯಲ್ಲಿ ಕ್ಯಾಪ್ಸೂಲ್‌ನಲ್ಲಿ ಇಟ್ಟುಕೊಳ್ಳಬಹುದು ಎಂಬುದು ಆಕೆಯ ಹೇಳಿಕೆಯಿಂದ ತಿಳಿದು ಬಂದಿದೆ.

ಗೆಳೆಯನ ಮಂಚಕ್ಕೆ ದೂಡಿದ ಪತಿ, ಗೃಹಿಣಿ ಆತ್ಮಹತ್ಯೆ...

ಮಹಿಳೆಯ ಹಿಂದೆ ದೊಡ್ಡ ದಂಧೆಕೋರರ ತಂಡವೇ ಇರುವ ಶಂಕೆ ಇದೆ. ಮೇಲ್ನೋಟಕ್ಕೆ ಮಹಿಳೆ ಹಣದ ಆಮಿಷಕ್ಕೆ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಮಹಿಳೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದರು.

click me!