
ಆನೇಕಲ್[ಫೆ.13]: ನಾದಿನಿಯೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿ ಆಗಬಹುದು ಎಂದು ಆಕೆಯ ಮಗುವನ್ನು ಕೊಂದು ಪೊದೆಯಲ್ಲಿ ಬಿಸಾಕಿದ್ದ ಭಾವ, ಅಕ್ಕನನ್ನು ಪೊಲೀಸರು ಬಂಧಿಸಿರುವ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಈಶಾನ್ಯ ಭಾರತದ, ಹಾಲಿ ಅತ್ತಿಬೆಲೆ ನಿವಾಸಿಗಳಾದ ರೀನಾ ಬೋರೋ ಹಾಗೂ ಭಾವ ಬಿಮಲ್ ಬಂಧಿತರು. ನಾದಿನಿ ಅನಿತಾ ಬೆಹಂಗಾ ಅತ್ತಿಬೆಲೆ ಠಾಣೆಗೆ ನೀಡಿದ್ದ ದೂರು ನೀಡಿದ್ದರು. ಅಕ್ಕನ ಮನೆಯಲ್ಲಿ ವಾಸಿಸುತ್ತಿದ್ದ ಅನಿತಾ ಕಳೆದ ಕೆಲ ದಿನಗಳ ಹಿಂದೆ ತಮಿಳುನಾಡಿನ ಕೊತ್ತನೂರು ಗ್ರಾಮದ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿದ್ದರು.
ಅನೈತಿಕ ಸಂಬಂಧಕ್ಕೆ ನಕಾರ, ಪ್ರಿಯತಮೆಯ ಕೊಂದು, ಪ್ರೇಮಿ ಆತ್ಮಹತ್ಯೆ!
ಇತ್ತ ಅನಿತಾಳೊಡನೆ ಬಿಮಲ್ ಅಕ್ರಮ ಸಂಬಂಧ ಹೊಂದಿದ್ದ. ಫೆ.6ರಂದು ಅನಿತಾ ಮಗು ರಿಕಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೊಸೂರಿನ ಆಸ್ಪತ್ರೆಗೆ ಬಿಮಲ್ ಮತ್ತು ರೀನಾ ಹೊಸೂರಿನ ಆಸ್ಪತ್ರೆಗೆ ಕರೆ ತಂದಿದ್ದರು. ಮಗುನ ಪರಿಸ್ಥಿತಿ ವಿಷಮಕ್ಕೆ ಹೋಗಿದ್ದು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದ್ದಾರೆ. ಹೊಸೂರಿನಿಂದ ಅತ್ತಿಬೆಲೆಗೆ ಬಂದ ರೀನಾ ಭೋರಾ ಮತ್ತು ಬಿಮಲ್ ಇಬ್ಬರು ಲಾ ಕ್ಲಾಸಿಕ್ ಹೋಟೆಲ್ ಬಳಿ ಮಗುವನ್ನು ಸಾಯಿಸಿ ಪೊದೆಯಲ್ಲಿ ಬಿಸಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ