Crime News; ಎಚ್ಚೆತ್ತು ದೂರು ಕೊಟ್ಟ ನಂದಿನಿ, ಕಸಾಯಿಖಾನೆ  ಸೇರಬೇಕಿದ್ದ ಹಸುಗಳ ರಕ್ಷಣೆ

By Suvarna NewsFirst Published Nov 13, 2021, 7:03 PM IST
Highlights

* ಜೆಜೆ ನಗರ ಪೊಲೀಸರಿಂದ ಗೋವುಗಳ ರಕ್ಷಣೆ..

* ಜೆಜೆ ನಗರ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಹಸುಗಳನ್ನು ಕಡಿಯಲು ತರಲಾಗಿತ್ತು.!!

* ಹಸುಗಳನ್ನು ರಕ್ಷಣೆ ಮಾಡುವಂತೆ‌ ಜೆಜೆ ನಗರ ಪೊಲೀಸ್ ಠಾಣೆಗೆ ದೂರು..

* ನಂದಿನಿ ಎಂಬುವವರು ದೂರು ದಾಖಲಿಸಿದ್ದರು

ಬೆಂಗಳೂರು(ನ. 13)  ಜೆಜೆ ನಗರ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಜೆಜೆ ನಗರ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಲಾಗುತ್ತಿತ್ತು.  ಹಸುಗಳನ್ನು ರಕ್ಷಣೆ ಮಾಡುವಂತೆ‌ ಜೆಜೆ ನಗರ ಪೊಲೀಸ್ ಠಾಣೆಗೆ ದೂರು ಬಂದಿತ್ತು. 

ನಂದಿನಿ ಎಂಬುವವರಿಂದ ದೂರು ದಾಖಲಿಸಿದ್ದು ತಕ್ಷಣ ಪೊಲೀಸರು ಕಾರ್ಯನಿರತರಾಗಿದ್ದಾರೆ. ದೂರಿನ ಮೇರೆಗೆ ಗೋವುಗಳ ರಕ್ಷಣೆ ಮಾಡಲಾಗಿದೆ.  ನಂತರ ಗೋವುಗಳನ್ನ ರಕ್ಷಣೆ ಮಾಡಿ ಗೋಶಾಲೆಗೆ ಬಿಟ್ಟು ಬರಲಾಗಿದೆ. 

ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಕ್ರಮ ಕಸಾಯಿಖಾನೆ ಹಾಗೂ ಗೋ ಸಾಗಾಣಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದರು.

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಗೋಮಾತೆಗೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್‌ವೈ

ಮೂಕಪ್ರಾಣಿಗಳ ರಕ್ಷಣೆಯಾಗಬೇಕು. ಕಸಾಯಿಖಾನೆಗೆ ಹೋಗಬಾರದು ಎಂಬ ಸದುದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಗೋಹತ್ಯೆ ನಿಷೇಧಕ್ಕೆ ಪೊಲೀಸ್‌ ಇಲಾಖೆಯ ಸಹಕಾರ ಮುಖ್ಯವಾಗಿದೆ. ಬಕ್ರಿದ್‌ ಹಬ್ಬದ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ನೆರವಿನೊಂದಿಗೆ ರಾಜ್ಯದಲ್ಲಿ 7 ಸಾವಿರ ಗೋವುಗಳನ್ನು ರಕ್ಷಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಜಿಲ್ಲೆಗೊಂದು ಗೋಶಾಲೆ; ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವ ಹಿನ್ನೆಲೆ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ನಿರ್ಧರಿಸಿದೆ. ಈ ಎರ​ಡೂ ಜಿಲ್ಲೆಯಲ್ಲಿಯೂ 50 ರಿಂದ 100 ಎಕರೆ ವಿಶಾಲ ಪ್ರದೇಶದಲ್ಲಿ ಗೋಶಾಲೆ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದರು.

ಕಳೆದ ಫೆಬ್ರವರಿಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧ, ಕಾಗದ ಪತ್ರಗಳ ತೂರಾಟ, ಸಭಾಪತಿಗಳ ಮುಂದೆ ಘೋಷಣೆ, ಆಕ್ರೋಶಗಳ ಮಧ್ಯೆ ಗೋಹತ್ಯೆ ನಿಷೇಧಿಸುವ  ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ ಅನ್ನು ಮಂಡಿಸಿ ಧ್ವನಿಮತದಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಫಲವಾಗಿತ್ತು. 

click me!