ಮೋದಿ, ಅಮಿತ್ ಶಾ, ರೂಪಾನಿ ವಿರುದ್ಧ ಪೋಸ್ಟ್ ಹಾಕಿದ್ದವನ ಮೇಲೆ FIR

By Suvarna NewsFirst Published May 2, 2021, 4:13 PM IST
Highlights

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಬರಹ/ ಪ್ರಧಾನಿ ಮೋದಿ, ಗೃಹಸಚಿವ ಅಮಿತ್  ಶಾ ವಿರುದ್ಧ ಬರಹ/ ಪ್ರಕರಣ ದಾಖಲಿಸಿಕೊಂಡ ಗುಜರಾತ್ ಪೊಲೀಸರು/ ಸೋಶಿಯಲ್ ಮೀಡಿಯಾದಲ್ಲಿ ಬರೆಯುವ ಮುನ್ನ ಎಚ್ಚರ

ಅಹಮದಾಬಾದ್ (ಮೇ 2) ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಗುಜರಾತ್ ಸಿಎಂ ವಿಜಯ್ ರೂಪಾನಿ, ಡಿಸಿಎಂ ನಿತಿನ್ ಪಟೇಲ್ ವಿರುದ್ಧ ಫೆಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆದಿದ್ದ ಯೂಸರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಫೇಸ್ ಬುಕ್ ಬಳಕೆದಾರ ಕಪಿಲ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.  ಮಾನಹಾನಿ ಮತ್ತು ಶಾಂತಿ ಭಂಗಕ್ಕೆ ಯತ್ನ ಆಧಾರದಲ್ಲಿ ದೂರು ದಾಖಲಾಗಿದೆ.

ನೆಲ ಕಚ್ಚಿದ ಕಾಂಗ್ರೆಸ್..  ಏನಾಗಿದೆ ಕೈ ಪಡೆಗೆ?

ಅಹಮದಾಬಾದ್ ಡಿಸಿಪಿ ಅವರ ಕಟ್ಟುನಿಟ್ಟಿನ ಆದೇಶದ ಅನ್ವಯ ಸೋಶಿಯಲ್ ಮೀಡಿಯಾದ ಮೇಲೆ ಕಣ್ಣಿಡಲಾಗಿದೆ. ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವ ಆಧಾರದಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹರೀಶ್ ಚಂದ್ರ ಸಿಂಗ್ ಎನ್ನುವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳುತ್ತ ಕೊರೋನಾ ಮತ್ತು ಜಿಎಸ್‌ ಟಿ ವಿಚಾರ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದ ಕಪಿಲ್ ಕುಮಾರ್  ಅವರ ಮೇಲೆ ಪ್ರಕರಣ ದಾಖಲಾಗಿದೆ.

ಸೋಶಿಯಲ್ ಮೀಡಿಯಾವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬ ನೀತಿ ನಿಯಮಗಳನ್ನು ಈ ಹಿಂದೆಯೇ ಕೇಂದ್ರ ಸರ್ಕಾರ ಸ್ಪಷ್ಟಮಾಡಿತ್ತು. 

 

click me!