Asianet Suvarna News Asianet Suvarna News

Crime News: ಗರ್ಭಿಣಿ ಹಸುವಿನ ಮೇಲೆ ಕಾಮುಕನಿಂದ ಅತ್ಯಾಚಾರ; ಗೋವು ಸಾವು

Crime News Today: ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನೊಬ್ಬ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ರಕ್ತಸ್ತ್ರಾವ ಹೆಚ್ಚಾಗಿ ಹಸು ಸಾವನ್ನಪ್ಪಿದೆ. 
 

Bengal Man Arrested For Raping Pregnant Cow Sent To Jail
Author
First Published Sep 1, 2022, 2:53 PM IST

ಮನುಷ್ಯನ ಕ್ರೌರ್ಯ ಹೆಚ್ಚಾಗ್ತಿದೆ. ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತೆ ಬಾಲಕಿಯರು, ವೃದ್ಧ ಮಹಿಳೆಯರು ಮಾತ್ರವಲ್ಲ ಮೂಕ ಪ್ರಾಣಿಗಳನ್ನು ಕೂಡ ಮನುಷ್ಯ ಬಿಡ್ತಿಲ್ಲ. ತನ್ನ ಕಾಮದಾಹ ತೀರಿಸಿಕೊಳ್ಳಲು ಪ್ರಾಣಿಗಳನ್ನು ಬಲಿ ಕೊಡ್ತಿದ್ದಾನೆ. ಇದಕ್ಕೆ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮನುಷ್ಯ ಜಾತಿ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಪಾಪಿಯ ಅಟ್ಟಹಾಸಕ್ಕೆ ಅಮಾಯಕ ಹಸು ಪ್ರಾಣ ಬಿಟ್ಟಿದೆ. 

ಗರ್ಭಿಣಿ (Pregnant) ಹಸು (Cow) ವಿನ ಮೇಲೆ ಅತ್ಯಾಚಾರ (Rape): ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಗರ್ಭಿಣಿ ಹಸುವಿನ ಮೇಲೆ ಪಾಪಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಇಲ್ಲಿನ ನಮ್ಖಾನಾ ಬ್ಲಾಕ್ (Namkhana Block) ನ ಉತ್ತರ ಚಂದನ್ ಪಿಡಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಸುವಿನ ಮೇಲೆ ಎರಗಿದ ಕ್ರೂರಿ 29 ವರ್ಷದ ಯುವಕನನ್ನು ಪೊಲೀಸ (Police) ರು ಬಂಧಿಸಿದ್ದಾರೆ. 

ಹಸು ಮಾಲಿಕನ ದೂರು: ಕೆಲವು ದಿನಗಳ ಹಿಂದೆ ಘಟನೆ ನಡೆದಿದೆ ಎಂದು ಪೊಲೀರು ಹೇಳಿದ್ದಾರೆ. ಹಸುವಿನ ಮಾಲಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ. ಪ್ರದ್ಯುತ್ ಭುಯಾ (Pradyut Bhuiya) ಎಂಬಾತ ತಮ್ಮ ಮನೆಯ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಹಸುವಿನ ಮಾಲಿಕ ದೂರು ನೀಡಿದ್ದ. ಆತನ ದೂರಿನ ಮೇರೆಗೆ ಪೊಲೀಸರು ಪ್ರದ್ಯುತ್ ಭಯಾ ಎಂಬುವವನನ್ನು ಬಂಧಿಸಿದ್ದಾರೆ. 

ಇದನ್ನೂ ಓದಿ: ಪ್ರಿಯತಮೆಗೆ ಬೇರೊಬ್ಬನ ಜೊತೆ ಮದುವೆ ನಿಗದಿ: ಪ್ರಿಯಕರನ ಬಾಡಿಗೆ ಮನೆ ಧ್ವಂಸ ಮಾಡಿದ ಸಂಬಂಧಿಕರು

ಪಾಪಿ ಕ್ರೌರ್ಯಕ್ಕೆ ಹಸು ಸಾವು : ಹಸುವಿನ ಮಾಲಿಕರ ಪ್ರಕಾರ, ಪ್ರದ್ಯುತ್ ಭುಯಾ ಕೆಲವು ದಿನಗಳ ಹಿಂದೆ ಮನೆಯ ಹಿಂದಿರುವ ದನದ ಕೊಟ್ಟಿಗೆಗೆ ಬಂದಿದ್ದನಂತೆ. ಅಲ್ಲಿದ್ದ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಮಧ್ಯರಾತ್ರಿ ಸುಮಾರಿಗೆ ಈ ಘಟನೆ ನಡೆದಿದೆ. ಹಸು ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದೆ. 

ಆರೋಪಿಗೆ ಜೈಲು : ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತ್ರ ಆರೋಪಿನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಪ್ರದ್ಯುತ್ ಭುಯಾನನ್ನು ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಪ್ರದ್ಯುತ್ ಭುಯಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

ಆರೋಪಿ ವಿರುದ್ಧ ಗ್ರಾಮಸ್ಥರ ಆಕ್ರೋಶ : ಪ್ರದ್ಯುತ್ ಭುಯಾ ಕೃತ್ಯಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗ್ತಿದೆ. ಚಂದನಪಿಡಿ ಗ್ರಾಮಸ್ಥರ ಮಧ್ಯೆ ಈ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ. ಆರೋಪಿ ಪ್ರದ್ಯುತ್ ಭುಯಾ ಸಾಚಾ ಮನುಷ್ಯನಲ್ಲ. ಈ ಹಿಂದೆ ಕೂಡ ಆತ ಅನೇಕ ಹೇಯ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಸ್ಥಳಿಯರು ಹೇಳಿದ್ದಾರೆ.  ಪ್ರದ್ಯುತ್ ವಿರುದ್ಧ ಸಾಕಷ್ಟು ಆರೋಪಗಳಿವೆ. 

ಪ್ರದ್ಯುತ್ ಭುಯಾ ಮೇಲೆ ಕಳ್ಳತನದ ಆರೋಪವಿದೆ. ಆತ ವಾಹನ, ತರಕಾರಿ, ಮೇಕೆ ಸೇರಿದಂತೆ ಅನೇಕ ವಸ್ತುಗಳನ್ನು ಕದ್ದಿದ್ದನಂತೆ.  ಪ್ರದ್ಯುತ್ ಭುಯ್ಯಾಗೆ ಕಠಿಣ ಶಿಕ್ಷೆಯಾಗ್ಬೇಕೆಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ವಿರುದ್ಧ ತನಿಖೆ ಶುರು ಮಾಡಿದ್ದಾರೆ. 

ಇದನ್ನೂ ಓದಿ: 7 ವರ್ಷಗಳಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ತಂದೆ ಬಂಧನ

ಈ ಹಿಂದೆಯೂ ನಡೆದಿತ್ತು ಇಂಥ ಘಟನೆ : ಮೊದಲೇ ಹೇಳಿದಂತೆ ಪ್ರಾಣಿಗಳ ಮೇಲೂ ಮನುಷ್ಯನ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಈ ಹಿಂದೆ ದಕ್ಷಿಣ ದಿನಾಜ್‌ಪುರದಲ್ಲೂ ಇಂತಹ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜೂನ್ ತಿಂಗಳಿನಲ್ಲಿ ದಕ್ಷಿಣ ದಿನಾಜ್‌ಪುರದ ಹರಿರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಹಸುವಿನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಮಾಲೀಕರು ದೂರು ನೀಡಿದ್ದರು. ಆದ್ರೆ ಯುವಕ ಪೊಲೀಸ್ ಕೈಗೆ ಸಿಕ್ಕಿರಲಿಲ್ಲ. ಹೊಲದಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಈತ ಅತ್ಯಾಚಾರವೆಸಗಿದ್ದ. 
 

Follow Us:
Download App:
  • android
  • ios